ಒಟಿಪಿ ಬರದೇ ವೋಟು ಇಲ್ಲ; ನಕ್ಸಲ್ ಪೀಡಿತ ಗ್ರಾಮಗಳ ವಿನೂತನ ಅಭಿಯಾನ

By Ravi Janekal  |  First Published Feb 25, 2023, 9:13 AM IST

ದಶಕಗಳಿಂದ ಮೊಬೈಲ್ ನೆಟ್ವರ್ಕ್ ಇಲ್ಲದೆ ಡಿಜಿಟಲ್ ಸೇವೆ ಸೌಲಭ್ಯ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿರುವ ಮೂಡಿಗೆರೆ ತಾಲೂಕಿನ ನಕ್ಸಲ್ ಪೀಡಿತ ಗ್ರಾಮಗಳು ಹೋರಾಟದ ಹಾದಿ ತುಳಿದಿವೆ.


ಚಿಕ್ಕಮಗಳೂರು (ಫೆ.25)  ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳು ಮತದಾರರನ್ನು ಸೆಳೆಯಲು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ ಮತದಾರರು ಹಿಂದೆಂದಿಗಿಂತಲೂ ಹೆಚ್ಚು ಜಾಗೃತನಾಗಿದ್ದಾರೆ ಕೂಡ. ಚುನಾವಣೆ ವೇಳೆ ಆಮಿಷೆಗಳಿಗೆ ಬಲಿಯಾಗದೆ ತಮ್ಮ ಗ್ರಾಮಗಳಿಗೆ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಮುಂದಿಡುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಇಲ್ಲದ ಹಲವು  ಗ್ರಾಮಗಳು ಈ ಬಾರಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿವೆ. ಸೌಲಭ್ಯಗಳು ನಿರ್ಮಿಸಿಕೊಡದೇ ಮತದಾನ ಮಾಡುವುದಿಲ್ಲ ಎಂದು ಖಡಕ್ ವಾರ್ನಿಂಗ್ ಕೊಡುತ್ತಿವೆ. ಅದೇ ರೀತಿಯಲ್ಲಿ ದಶಕಗಳಿಂದ ಮೊಬೈಲ್ ನೆಟ್ವರ್ಕ್(Mobile Network) ಇಲ್ಲದೆ ಡಿಜಿಟಲ್ ಸೇವೆ(Digital service) ಸೌಲಭ್ಯ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿರುವ ಮೂಡಿಗೆರೆ ತಾಲೂಕಿನ ನಕ್ಸಲ್ ಪೀಡಿತ ಗ್ರಾಮಗಳು(Naxal affected villages ) ಹೋರಾಟದ ಹಾದಿ ತುಳಿದಿವೆ.

ನಕ್ಸಲ್ ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿ  ಹೊತ್ತಿರುವ ಚಿಕ್ಕಮಗಳೂರು(Chikkamgaluru) ಜಿಲ್ಲೆಯ ಮೂಡಿಗೆರೆ(Mudigere) ತಾಲೂಕಿನ ಬಲಿಗೆ, ಮೆಣಸಿನ ಹ್ಯಾಡ(Menasinahadya)ದಲ್ಲಿ ಎಲ್ಲರ ಬಳಿ ಮೊಬೈಲ್ ಇವೆ. ಆದರೆ ನೆಟ್ವರ್ಕ್ ಇಲ್ಲ. ಬಿಎಸ್‌ಎನ್ಎಲ್, ಏರ್‌ಟೆಲ್ ಸೇರಿದಂತೆ ಯಾವುದೇ ಕಂಪನಿಯ ನೆಟ್ವರ್ಕ್ ಸಿಗುತ್ತಿಲ್ಲ. ಹೀಗಾಗಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಒಟಿಪಿ ಬಾರದೆ ತೀವ್ರ ತೊಂದರೆ ಎದುರಿಸುತ್ತಿರುವ ಗ್ರಾಮಸ್ಥರು.

Tap to resize

Latest Videos

7th Pay Commission: ಮಾರ್ಚ್ 1ರಿಂದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು!

ಒಟಿಪಿ ಬರದೇ ವೋಟು ಇಲ್ಲ:

ಮೊಬೈಲ್‌ ಟವರ್‌ ಆಗ್ರಹಿಸಿ ಈ ಹಿಂದೆ ಮನವಿ ಸಲ್ಲಿಸಿದರೂ, ಪ್ರತಿಭಟನೆ(Protest) ನಡೆಸಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ. ಸಾಮಾಜಿಕ ಜಾಲತಾಣ(Social media) ಬಳಸಿಕೊಂಡು "ಒಟಿಪಿ ಬರದೇ ವೋಟು ಇಲ್ಲ" ಎಂಬ ವಿನೂತನ ಅಭಿಯಾನಕ್ಕೆ ಮುಂದಾಗಿವೆ. ಗ್ರಾಮಗಳಿಗೆ ಟವರ್ ನಿರ್ಮಿಸಬೇಕು. ಟವರ್ ನಿರ್ಮಿಸದೆ, ನಮ್ಮ ಫೋನ್‌ಗಳಿಗೆ ಒಟಿಪಿ ಬರದೇ ವೋಟು ಮಾಡುವುದಿಲ್ಲ. ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿರುವ ನಕ್ಸಲ್ ಪೀಡಿತ ಗ್ರಾಮಗಳು.

70 ಕುಟುಂಬಗಳಿರುವ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ನೆಟ್ ವರ್ಕ್ ಇಲ್ಲ. ಈ ಹಿಂದೆ ಅನೇಕ ಬಾರಿ ಭರವಸೆ ನೀಡಿರುವ ಸರ್ಕಾರಗಳು ಈವರೆಗೆ ಮೊಬೈಲ್ ಟವರ್ ನಿರ್ಮಿಸಿಲ್ಲ. ರಸ್ತೆ, ಶಾಲೆ, ಕುಡಿಯುವ ಎಲ್ಲರೀತಿಯಲ್ಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮಗಳು 

ದಾವಣಗೆರೆ: ಇಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಾವೇಶ

click me!