ಕರ್ನಾಟಕದ ಕಾಫಿ ಘಮವನ್ನು ಇಡೀ ಪ್ರಪಂಚಕ್ಕೆ ವ್ಯಾಪಿಸಿ ಉದ್ಯಮದಲ್ಲೊಂದು ತಮ್ಮದೇ ಸಾಮ್ರಾಜ್ಯ ಕಟ್ಟಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆಯ ಚೇತನಹಳ್ಳಿ ಎಸ್ಟೇಟ್‌ನಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.
ಬೆಂಗಳೂರು[ಜು. 31] ಕರ್ನಾಟಕದ ಉದ್ಯಮಿಯೊಬ್ಬರ ದುರಂತ ಅಂತ್ಯವಾಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಅರಗಿಸಿಕೊಳ್ಳಲೇಬೇಕಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಚಿತೆಗೆ ಪುತ್ರ ಅಮರ್ತ್ಯ ಚಿತೆಗೆ ಅಗ್ನಿಸ್ಪರ್ಶ ನೇರವೇರಿಸಿದರು. ಹಿರಿಯ ಮಗ ಅಮರ್ತ್ಯ ಜತೆಗೆ ಕಿರಿಯ ಮಗ ಇಶಾನ್ ತಂದೆಯ ಪಾರ್ಥಿವ ಶರೀರವನ್ನು ಚಿತೆಗೆ ಹೊತ್ತು ತಂದ ದೃಶ್ಯ ಒಂದು ಕ್ಷಣ ಎಂಥವರ ಮನಸ್ಸನ್ನು ಕದಡಿತು.
ಹಲಸು, ಶ್ರೀಗಂಧ, ಮಾವು, ಆಲದ ಮರದಿಂದ ಸಿದ್ಧಪಡಿಸಿರುವ ಚಿತೆಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಸ್ವಯಂ ನಿವೃತ್ತಿ ಪಡೆದುಕೊಂಡಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ 10 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು, ಸ್ನೇಹಿತರು ಅಂತಿಮ ನಮನ ಸಲ್ಲಿಸಿದರು.
ಚಿಕ್ಕಪ್ಪನನ್ನು ನೆನೆದು ಭಾವುಕರಾದ ರಾಧಾ ’ರಮಣ್’
ಮಲೆನಾಡಿನ ಸಂಪ್ರದಾಯದಂತೆ ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಚಿತೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಕಾಫಿ ಕಿಂಗ್, ಕಾಫಿ ಡೇ ಸಿದ್ಧಾರ್ಥ. ಎಸ್.ಎಂ ಕೃಷ್ಣ ಅಳಿಯ, ಕಲಾಸಾಕ್ತ, ರಾಜಕೀಯದ ಬಗ್ಗೆ ಸದಾ ಕುತೂಹಲವಿದ್ದ ವ್ಯಕ್ತಿ, ಡಾ. ರಾಜ್ ಬಿಡುಗಡೆ ವೇಳೆ ಗೊತ್ತಿಲ್ಲದೆ ಕೊಡುಗೆ ನೀಡಿದ್ದ ಚೇತನ, ಯುವಕರಲ್ಲಿ ಉದ್ದಿಮೆ ಸ್ಥಾಪಿಸಬೇಕು ಎಂಬ ಆಸೆ ಹುಟ್ಟುಹಾಕಿದ್ದ ಆಶಾ ಕಿರಣ ಪಂಚಭೂತದಲ್ಲಿ ಲೀನವಾಗಿದ್ದಾರೆ.
undefined
ಸಿದ್ಧಾರ್ಥ ಸೃಷ್ಟಿಸಿದ್ದ ಕೌತುಕ: ಕಾಫಿ ಡೇ ಅನುಭವ ಬಿಚ್ಚಿಟ್ಟ ಮಲೆನಾಡ ಯುವಕ!
ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಿತು. ಎಲ್.ಆರ್.ಶಿವರಾಮೇಗೌಡ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಜಯಚಂದ್ರ , ರಮಾನಾಥ ರೈ, ಶಾಸಕ ಸಿ.ಟಿ.ರವಿ, ಪರಿಷತ್ ಸದಸ್ಯ ಪ್ರಾಣೇಶ್ ಹಾಜರಿದ್ದು ವ್ಯವಸ್ಥೆ ನಿಯಂತ್ರಿಸಿದರು. ಮಂಗಳೂರಿಗೆ ಅತಿ ಸಮೀಪವಿರುವ ನೇತ್ರಾವತಿ ನದಿ ಸೇತುವೆ ಸೋಮವಾರ ಸಂಜೆ ಬಳಿ ಕಣ್ಮರೆಯಾಗಿದ್ದ ಸಿದ್ಧಾರ್ಥ ಬುಧವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದರು.