ಪಬ್ಲಿಸಿಟಿಯಿಂದ ದೂರವೇ ಉಳಿದಿದ್ದ ಉದ್ಯಮಿ, ಕವಿಶೈಲದ ಕಂಬಗಳು ಕತೆ ಹೇಳುತ್ತವೆ

By Web Desk  |  First Published Jul 31, 2019, 5:34 PM IST

ಕಾಫಿ ಕಿಂಗ್ ಸಿದ್ಧಾರ್ಥ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರ ಸಾವಿನ ನಂತರ ಅವರು ನೀಡಿದ್ದ ಒಂದೊಂದೇ ಕೊಡುಗೆಗಳು ತೆರೆದುಕೊಳ್ಳುತ್ತಿವೆ.


ಶಿವಮೊಗ್ಗ[ಜು. 31]  ಕುಪ್ಪಳಿಯ ಕವಿಶೈಲದಲ್ಲಿ ನಿರ್ಮಿಸಲಾದ ಕಲ್ಲಿನ ಸ್ಮಾರಕಗಳ ಕೊಡುಗೆ  ಸಿದ್ದಾರ್ಥ ಅವರದ್ದು. 20 ವರ್ಷದ ಹಿಂದೆ ಈ ಕೊಡುಗೆ ನೀಡಿದ್ದರೂ ಎಲ್ಲಿಯೂ ಅವರು ಪಬ್ಲಿಸಿಟಿ ಪಡೆದುಕೊಂಡಿರಲಿಲ್ಲ.

ಕವಿಶೈಲದಲ್ಲಿ 35 ಕಂಬಗಳಿವೆ, 25 ತೊಲೆಗಳಿವೆ ಒಂದೊಂದು ಕಂಬಗಳು 17 ಟನ್ ತೂಗುತ್ತವೆ. ಇಷ್ಟು ಕಂಬಗಳು 20 ವರ್ಷಗಳ ಹಿಂದೆಯೇ 50 ಲಕ್ಷ ರೂ.  ಹೆಚ್ಚು ಬೆಲೆಬಾಳುತ್ತಿದ್ದವು.

Latest Videos

undefined

7.5 ಲಕ್ಷ ಕೈಗಿಟ್ಟು ನಷ್ಟವಾದರೆ ಊರಿಗೆ ಬಾ ಎಂದಿದ್ದರು ತಂದೆ

ಕೇವಲ ಹಣಕೊಟ್ಟು ಸಿದ್ದಾರ್ಥ ತಮ್ಮ ಜವಾಬ್ದಾರಿಯಿಂದ ಮುಗಿಯಿತು ಎಂದು ಭಾವಿಸಿರಲಿಲ್ಲ. ಕವಿಶೈಲದಲ್ಲಿನ ಕಂಬ ಮತ್ತು ತೊಲೆಗಳ ನಿರ್ಮಾಣಕ್ಕೆ ತಮಿಳುನಾಡಿನಿಂದ 10 ಜನರ ತಂಡದವರನ್ನ ಕರೆಯಿಸಿ ಸತತ 18 ತಿಂಗಳ ಕಾಲದವರೆಗೆ ಕೆಲಸ ಮಾಡಿಸಿದ್ದರು. ಅವರಿಗೆ ವಸತಿ ಊಟ ಮತ್ತು ತೀರ್ಥಹಳ್ಳಿಯಿಂದ ಕವಿಶೈಲಕ್ಕೆ ಬರಲು ವಾಹನಗಳ ವ್ಯವಸ್ಥೆಯನ್ನ ಮಾಡಿಸಿದ್ದು ಸಹ ಸಿದ್ದಾರ್ಥ ಅವರೇ ಆಗಿದ್ದರು. ಇಂಥ ಕಾಫಿ ಕಿಂಗ್, ಸಹೃದಯ ವ್ಯಕ್ತಿ ಮರೆಯಾಗಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಸಿದ್ಧಾರ್ಥ ವಿಶೇಷ ಸಂಬಂಧ ಹೊಂದಿದ್ದ ವ್ಯಕ್ತಿಯಾಗಿದ್ದರು.  ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿ ಸದಾ ಅಧ್ಯಯನಶೀಲರಾಗಿ ಇರುತ್ತಿದ್ದರು.  ವರನಟ ಡಾ. ರಾಜ್ ಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಣ ಮಾಡಿದ್ದಾಗ ಎಸ್.ಎಂ. ಕೃಷ್ಣ ಸಿಎಂ ಆಗಿದ್ದರು. ಆ ಸಂದರ್ಭದಲ್ಲಿ ಸಹ ಸಿದ್ಧಾರ್ಥ ತಾವೇ ಮುಂದೆ ನಿಂತು ಸರಕಾರದಿಂದ ಸಾಧ್ಯವಾಗದ ಕೆಲವು ಕೆಲಸಗಳನ್ನು ಮಾಡಿಕೊಟ್ಟಿದ್ದು ಬಹಳಷ್ಟು ಜನರಿಗೆ ಗೊತ್ತಿಲ್ಲ.

click me!