ತುಂಬಿ ಹರಿಯುತ್ತಿರುವ ನದಿ ಮಧ್ಯೆ ಕೆಟ್ಟು ನಿಂತಿದ್ದ ಲಾಂಚ್

Published : Sep 16, 2019, 01:22 PM IST
ತುಂಬಿ ಹರಿಯುತ್ತಿರುವ  ನದಿ ಮಧ್ಯೆ  ಕೆಟ್ಟು ನಿಂತಿದ್ದ ಲಾಂಚ್

ಸಾರಾಂಶ

ಲಾಂಚ್ ಕೆಟ್ಟು ಒಂದು ಗಂಟೆಗೂ ಹೆಚ್ಚು ಕಾಲ ನದಿ ಮಧ್ಯದಲ್ಲಿ ನಿಂತಿದ್ದ ಘಟನೆ ನಡೆದಿದೆ. ಅಂಕೋಲದ ಗಂಗಾವಳಿ ನದಿಯ ಲಾಂಚ್ ಪದೇ ಪದೇ ಈ ರೀತಿ ಆಗುತ್ತಿದ್ದು, ಇದರಲ್ಲಿ ಪ್ರಯಾಣಿಸುವವರು ಸದಾ ಆತಂಕದಲ್ಲಿ ಪ್ರಯಾಣಿಸುವಂತಾಗಿದೆ. 

ಅಂಕೋಲಾ (ಸೆ.16) : ಗಂಗಾವಳಿ ನದಿಗೆ ಲಾಂಚ್ ನೀಡಿ ವರ್ಷವೇ ಕಳೆದಿದೆ. ಆದರೆ ಪದೇ ಪದೇ ಒಂದಿಲ್ಲೊಂದು ಕಾರಣದಿಂದ ಬಾರ್ಜ್ ಹಾಳಾಗಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಭಾನುವಾರ ಗಂಗಾವಳಿಯಿಂದ ಮಂಜಗುಣಿ ಬರುವ ಲಾಂಚ್ ನದಿಯ ಮಧ್ಯೆ ಹಾಳಾಗಿ ನಿಂತಿದ್ದು 1 ಗಂಟೆಗಳ ಕಾಲ ಪ್ರಯಾಣಿಕರು ಬಾರ್ಜ್ ಮೇಲೆ ಉಳಿದು ಹೈರಾಣಾದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ದಡಕ್ಕೆ ಸಾಗಿಸಲಾಯಿತು. ಇನ್ನೊಂದು ಬಾರ್ಜ್ ಸಹ ನದಿಯ ದಂಡೆಗೆ ಕೆಟ್ಟು ನಿಂತಿದೆ. ಬಾರ್ಜ್‌ನಲ್ಲಿದ್ದ ಪ್ರಯಾಣಿಕರು ದೋಣಿಯ ಸಹಾಯದಿಂದ ದಂಡೆಗೆ ಬಂದು ನಿಟ್ಟಿಸಿರು ಬಿಡುವಂತಾಯಿತು.

ಕಳೆದ ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯಲ್ಲಿಯೂ 500ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಎರಡು ಲಾಂಚುಗಳು ಡಿಕ್ಕಿಯಾಗಿದ್ದವು.

PREV
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!