ಕಾವೇರಿಯ ಅನ್ಯಾಯಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ : ಆರ್.ಅಶೋಕ್

By Kannadaprabha NewsFirst Published Oct 3, 2023, 7:30 AM IST
Highlights

ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಅನ್ಯಾಯಕ್ಕೆ ಮುಖ್ಯ ಕಾರಣ. ತಮಿಳುನಾಡಿನವರು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ ಮೇಲೆ ನಮ್ಮವರು ದಾಖಲೆಗೆ ಹುಡುಕಾಟ ನಡೆಸಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

  ಮಂಡ್ಯ :   ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಅನ್ಯಾಯಕ್ಕೆ ಮುಖ್ಯ ಕಾರಣ. ತಮಿಳುನಾಡಿನವರು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ ಮೇಲೆ ನಮ್ಮವರು ದಾಖಲೆಗೆ ಹುಡುಕಾಟ ನಡೆಸಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ ತಕ್ಷಣವೇ, ಕೋರ್ಟ್ ಆದೇಶ ನೀಡುವ ಮುನ್ನ ತಮಿಳುನಾಡಿಗೆ ನೀರು ಹರಿಸುತ್ತಾರೆ ಎಂದು ಟೀಕಿಸಿದರು.

Latest Videos

ಕಾವೇರಿ ಉಳಿವಿಗಾಗಿ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಕಾವೇರಿ ನೀರು ಬಳಸುವುದರಲ್ಲಿ ಬೆಂಗಳೂರಿಗರೇ ಹೆಚ್ಚು. ಮಂಡ್ಯದ ಜನರು ವಿರೋಧ ಮಾಡಿದ್ದರಿಂದ ಜಲಾಶಯದಲ್ಲಿ ಒಂದಷ್ಟು ನೀರು ಉಳಿದಿದೆ. ಇಲ್ಲದಿದ್ದರೆ ಅದೂ ಸಹ ತಮಿಳುನಾಡಿಗೆ ಹೋಗುತ್ತಿತ್ತು ಎಂದು ಹೇಳಿದರು.

ರೈತ ಹೋರಾಟಕ್ಕೆ ಹೆದರಿ ಸರ್ಕಾರ ರಾತ್ರೋ ರಾತ್ರಿ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ಕೇಂದ್ರದ ಮೇಲೆ ನಾವು ಒತ್ತಡ ಹಾಕಲು ಸಿದ್ಧರಿದ್ದೇವೆ. ರಾಜ್ಯ ಸರ್ಕಾರ ನೀರು ಬಿಟ್ಟ ಮೇಲೆ ಸರ್ವ ಪಕ್ಷ ಸಭೆ ಕರೆಯುತ್ತದೆ. ಇದು ಬೇಜವಾಬ್ದಾರಿತನದ ಪರಮಾವಧಿಯಲ್ಲವೇ? ಎಂದು ಪ್ರಶ್ನಿಸಿದರು.

ರಾತ್ರೋ ರಾತ್ರಿ ನೀರು ಬಿಡುವ ಸರ್ಕಾರ ಅದು ಸೋರಿಕೆ ನೀರು ಎಂದು ಸಬೂಬು ಹೇಳುತ್ತದೆ. ಹಿಂದೆ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದ ವೇಳೆ ಕೆಆರ್‌ಎಸ್‌ನ ಗೇಟ್‌ಗಳನ್ನೂ ಬದಲಾಯಿಸಿ ಸೋರಿಕೆ ನೀರು ಹರಿದುಹೋಗುವುದನ್ನು ನಿಲ್ಲಿಸಿದ್ದಾರೆ. ಈಗ ಸ್ವಲ್ಪ ನೀರು ಕೂಡ ಸೋರಿಕೆಯಾಗುವುದಿಲ್ಲ.ಸರ್ಕಾರ ಜನರ ಕಣ್ಣೊರೆಸುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾವೇರಿ ಹೆಸರು ತೆಗೆದು ಸ್ಟಾಲಿನ್, ಪಳನಿ ಎಂದು ಹೆಸರಿಡಿ, ಆಗ ಎಲ್ಲವೂ ಸರಿಯಾಗುತ್ತದೆ. ರಾಜ್ಯಾದ್ಯಂತ ಜನ ಕಾವೇರಿ ನಮ್ಮದೆಂದು ಎಲ್ಲ ಕಡೆಯೂ ಹೋರಾಟ ನಡೆಸುತ್ತಿದ್ದಾರೆ. ಬೆಂಗಳೂರಿಗರು ಸಹ ಮಂಡ್ಯ ರೈತರ ಹೋರಾಟಕ್ಕೆ ಸಾಥ್ ನೀಡುವ ಕೆಲಸ ಮಾಡಬೇಕು ಎಂದು ಕರೆಕೊಟ್ಟರು.

ಸಿದ್ದರಾಮಯ್ಯಗೆ ಜನ ಓಟ್ ಹಾಕಲ್ಲ

ಮೈಸೂರು (ಸೆ.12): ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಆರ್.ಅಶೋಕ್ ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿಯೇ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಸಿದ್ದರಾಮಯ್ಯನವರು ಮೊದಲ ಫಲಾನುಭವಿಗಳು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದು ಬಿಜೆಪಿ ಬೆಂಬಲದಿಂದಲೇ. ಇಂದು ಪ್ರಪಂಚದಲ್ಲಿಯೇ ಬಿಜೆಪಿ ನಂಬರ್ 1 ಪಾರ್ಟಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಮಾಜವಾದಿ ಪಾರ್ಟಿ, ಜೆಡಿಎಸ್, ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಯಾವ್ ಯಾವ ಪಾರ್ಟಿಯಲ್ಲಿ ಏನು ಅಧಿಕಾರ ಸಿಗುತ್ತೆ ಅಲ್ಲಿ ಹೋಗ್ತಾರೆ. ಮುಂದೆ ಯಾವ ಪಾರ್ಟಿಗೆ ಹೋಗ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯನವರು ಭ್ರಮೆಯಲ್ಲಿದ್ದಾರೆ. ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಅಳಕುಪುಳುಕಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾರೆ. ಇವತ್ತಿಗೆ ಚುನಾವಣೆ ನಡೆದರೂ ಸಿದ್ದರಾಮಯ್ಯನವರಿಗೆ ಜನ ವೋಟ್ ಹಾಕಲ್ಲ. 

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಅವರೇ ಹರಸಾಹಸ ಮಾಡುತ್ತಾರೆ. ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ ಎಂದು ಅವರು ಟೀಕಿಸಿದರು. ವಿಪಕ್ಷ ನಾಯಕನನ್ನ ಸಿದ್ದರಾಮಯ್ಯ ಆಯ್ಕೆ ಮಾಡ್ತಾರಾ? ಯಾವಾಗ ಮಾಡ್ಬೇಕು, ಹೇಗೆ ಮಾಡಬೇಕು ನಾವು ತೀರ್ಮಾನ ಮಾಡ್ತೀವಿ. ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ದಿನನಿತ್ಯ ಸಿದ್ದರಾಮಯ್ಯನವರ ಪಂಚೆ, ವಾಚ್ ಬಗ್ಗೆ ಬೈಯ್ತಿದ್ದಾರೆ. ಇದಕ್ಕೆ ನೋ ರಿಯಾಕ್ಷನ್, ಬಿಜೆಪಿ ಬಗ್ಗೆ ಮಾತ್ರ ರಿಯಾಕ್ಷನ್. ಇದರಿಂದಲೇ ಗೊತ್ತಾಗುತ್ತೆ ಯಾವ ಪಾರ್ಟಿ ಹಾಳಾಗೋಗಿದೆ ಎಂಬುದು ಎಂದು ಅವರು ತಿರುಗೇಟು ನೀಡಿದರು.

ಹಳೇ ಮೈಸೂರು ಭಾಗಕ್ಕೆ ಅನ್ಯಾಯ: ಈಗಿನ ಕಾಂಗ್ರೆಸ್ ಸರ್ಕಾರ ಕದ್ದು ಮುಚ್ಚಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟು ವೀಕ್ಷಣೆ ಬಳಿ ಇದ್ದ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾಲಿನ್ ಮೇಲಿನ ಮೋಹಕ್ಕೆ ಒಳಗಾಗಿ ತಮಿಳುನಾಡಿಗೆ ನೀರು ಹರಿಸಿದೆ. ನೀರನ್ನು ಸಂರಕ್ಷಿಸಿಕೊಂಡು ರೈತರಿಗೆ ನೀಡದ ಕಾಂಗ್ರೆಸ್ ಸರ್ಕಾರ ಹಳೇ ಮೈಸೂರು ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!

ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಅಣೆಕಟ್ಟೆಯಲ್ಲಿ ಅತಿ ಕಡಿಮೆ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ಹಾಹಾಕಾರ ಎದುರಾಗುವುದು ನಿಶ್ಚಿತವಾಗಿದೆ. ಅಧಿಕಾರಿಗಳು ಮಾಧ್ಯಮದವರನ್ನು ಅಣೆಕಟ್ಟೆ ಮೇಲೆ ಹೋಗಲು ನಿರ್ಬಂಧ ಮಾಡಿದರು. ಸರ್ಕಾರದ ನಿಜಬಣ್ಣ ತಿಳಿಯುತ್ತದೆ ಎಂಬ ಕಾರಣಕ್ಕೆ ಮಾಧ್ಯಮಗಳಿಗೆ ತುರ್ತು ಪರಿಸ್ಥಿತಿ ತಂದಿದ್ದಾರೆ. ಕೇವಲ 11 ಜನರಿಗೆ ಮಾತ್ರ ಡ್ಯಾಂ ಮೇಲೆ ಹೋಗಲು ಅವಕಾಶ ಕೊಟ್ಟಿದ್ದು, ಇದರ ಒಳ ಉದ್ದೇಶ ಕಾಂಗ್ರೆಸ್ ನೇತೃತ್ವದ ಇಂಡಿಯಾ ಆಗಿದೆ ಎಂದು ಜರಿದರು.

click me!