ಭಟ್ಕಳ: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ವಶ

Kannadaprabha News   | Asianet News
Published : Mar 22, 2021, 09:41 AM IST
ಭಟ್ಕಳ: ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ವಶ

ಸಾರಾಂಶ

ಬೋಲೆರೋ ವಾಹನದಲ್ಲಿ ಎರಡು ದನಗಳು, 5 ಹೋರಿ ಹಾಗೂ 2 ಕರು ಸಾಗಾಟ| ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಪೊಲೀಸರ ದಾಳಿ| ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು| 

ಭಟ್ಕಳ(ಮಾ.21): ಬೋಲೆರೋ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ನಗರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಡೊಂಗರಪಳ್ಳಿಯ ಹನುಮಂತ ದೇವಸ್ಥಾನದ ಬಳಿ ಸಿದ್ದೀಕ್‌ ಸ್ಟ್ರೀಟಿನ ಇಸ್ಮಾಯಿಲ್‌ ಯಾನೆ ಹವ್ವಾ ಇಸ್ಮಾಯಿಲ್‌ ಹಾಗೂ ಇನ್ನೋರ್ವ ಆದಂ ಶೇಖ್‌ ಎನ್ನುವವರು ಬೋಲೆರೋ ವಾಹನದಲ್ಲಿ ಎರಡು ದನಗಳು, 5 ಹೋರಿ ಹಾಗೂ 2 ಕರುಗಳನ್ನು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ. 

ಮಸೀದಿಗಳಲ್ಲಿ ಮೈಕ್‌ ಬಳಕೆ ನಿರ್ಬಂಧ ಕಾನೂನು ಜಾರಿಯಾಗದಿದ್ದಲ್ಲಿ ಸಾವಿರ ಠಾಣೆಗಳಲ್ಲಿ ದೂರು: ಮುತಾಲಿಕ್‌

ಆರೋಪಿತರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡ ನಗರ ಠಾಣೆಯ ಪಿಎಸ್‌ಐ ಸುಮಾ ಬಿ. ಮುಂದಿನ ಕ್ರಮ ಜರುಗಿಸಿದ್ದಾರೆ.
 

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ