ಕೋವಿಡ್ : ಸುಳ್ಳು ಹೇಳಿ ಸರ್ಕಾರಕ್ಕೆ ಏಮಾರಿಸಿದ್ದ ಅಪೋಲೋ ಆಸ್ಪತ್ರೆ ವಿರುದ್ಧ ಕೇಸ್

Kannadaprabha News   | Asianet News
Published : Apr 27, 2021, 01:08 PM ISTUpdated : Apr 27, 2021, 01:18 PM IST
ಕೋವಿಡ್ : ಸುಳ್ಳು ಹೇಳಿ ಸರ್ಕಾರಕ್ಕೆ ಏಮಾರಿಸಿದ್ದ ಅಪೋಲೋ ಆಸ್ಪತ್ರೆ ವಿರುದ್ಧ ಕೇಸ್

ಸಾರಾಂಶ

ಬೆಡ್ ಖಾಲಿ ಇದ್ದರೂ ಸುಳ್ಳು ಹೇಳಿದ್ದು ಈ ಸಂಬಂಧ ಬೆಂಗಳೂರಿನ ಅಪೋಲೋ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೂವರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ 

 ಬೆಂಗಳೂರು (ಏ.27): ಕೊರೋನಾ ಸೋಂಕಿತರಿಗೆ ಹಾಸಿಗೆ ನೀಡುವಲ್ಲಿ ಕಳ್ಳಾಟ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿ ರುವ ಅಪೋಲೋ ಆಸ್ಪತ್ರೆಯ ಸಿಇಓ ಡೇವಿಡ್, ಶಸ್ತ್ರ ಚಿಕಿತ್ಸೆಯ ಮುಖ್ಯಸ್ಥೆ ಕಲ್ಪನಾ, ವೈದ್ಯಕೀಯ ಅಧೀಕ್ಷಕರಾದ ಶಾಂತಾ, ಸಹನಾ, ಆರ್. ಚಂದನಾ ಹಾಗೂ ಮಂಜುಳ ಎಂಬುವರು ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೂವರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ಪಾಂಡೆ ಹೇಳಿದ್ದಾರೆ. ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿ ಡಾ ನಾಗೇಂದ್ರಕುಮಾರ್ ದೂರುನೀಡಿದ್ದಾರೆ.

ರೆಮ್ಡಿಸ್‌ವೀರ್‌, ಆಕ್ಸಿಜನ್ ಅಕ್ರಮ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸುಧಾಕರ್ ವಾರ್ನ್ ...

ಏನಿದು ಪ್ರಕರಣ: ಬಿಬಿಎಂಪಿ ಕೋಟಾದಡಿ ಅಪೋಲೋ ಆಸ್ಪತ್ರೆಗೆ ಏ.14ರಂದು ಸೂರ್ಯ ನಾರಾಯಣ ಎಂಬುವರು ದಾಖಲಾಗಿದ್ದು, ಏ.20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಆರೋಪಿಗಳು ಏ.24ರ ತನಕ ಸೂರ್ಯ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಬಿಬಿಎಂಪಿಗೆ ಮಾಹಿತಿ ನೀಡಿ ಇತರೆ ಕೋವಿಡ್ ರೋಗಿಗಳಿಗೆ ಬೆಡ್ ನೀಡದೇ ದುರುಪಯೋಗ ಪಡಿಸಿಕೊಂಡಿದ್ದಾರೆ.

ಅಲ್ಲದೆ, ರಾಜಾರಾಂ ಎಂಬ ಬಿಬಿಎಂಪಿ ಕೋಟದಡಿಯೇ ಸೋಂಕಿತರೊಬ್ಬರು ಇದೇ ಆಸ್ಪತ್ರೆಗೆ ಏ.16ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಏ.20ರಂದು ಮೃತಪಟ್ಟಿ ದ್ದರು. ಮೃತರ ಕುಟುಂಬಸ್ಥರ ಬಳಿ ಆಸ್ಪತ್ರೆ ಆಡಳಿತ ಮಂಡಳಿ ₹2.49 ಲಕ್ಷ ಕಟ್ಟಿಸಿಕೊಂಡಿದ್ದು, ವಂಚನೆ ಮಾಡಿದೆ. ಇಷ್ಟಕ್ಕೂ ಸುಮ್ಮನಾಗದ ವಂಚಕರು ವ್ಯಕ್ತಿ ಮೃತಪಟ್ಟು 4 ದಿನ ಬಳಿಕವೂ ಏ.25ರವರೆಗೆ ಆಸ್ಪತ್ರೆ ಯಲ್ಲಿ ದಾಖಲಾಗಿದ್ದರು ಎಂಬ ಮಾಹಿತಿ ನೀಡಿ ವಂಚನೆ ಮಾಡಿದ್ದಾರೆ.

ಅದೇ ರೀತಿ ಕಾಶಿನಾಥ್ ಎಂಬ ಕೋವಿಡ್ ರೋಗಿ ಏ.17ರಂದು ಚಿಕಿತ್ಸೆಗೆ ದಾಖಲಾಗಿ, ಏ.22ರಂದು ಡಿಸ್ಚಾರ್ಜ್ ಆಗಿದ್ದರು. ಬದಲಿಗೆ ರೋಗಿಗಳು ಇದ್ದರು ಎಂದು ತೋರಿಸಿ ಎಂದು ವರದಿ ನೀಡಿದ್ದರು.

 

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ