ಆನೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದು, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಮೀನು ಮಾಲೀಕ ಘಟನೆ ಬಳಿಕ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಕನಕಪುರ(ಡಿ.07): ಬೆಳೆ ರಕ್ಷಣೆಗೆಂದು ಬೇಲಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಬಲಿಯಾಗಿರುವ ಘಟನೆ ಕೋಡಿಹಳ್ಳಿ ಗ್ರಾಮ ಸಮೀಪ ಸಂಭವಿಸಿದ್ದು, ಆ ಬಳಿಕ ಮಾಲೀಕ ತನ್ನ ಜಮೀನಿನಲ್ಲೇ ಆನೆಯ ಶವ ಹೂತುಹಾಕಿದ್ದು, ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು 15 ವರ್ಷದ ಗಂಡು ಕಾಡಾನೆಯೊಂದು ಭಾನುವಾರ ಜಮೀನಿಗೆ ನುಗ್ಗುವಾಗ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿ ತಗುಲಿ ಸ್ಥಳದಲ್ಲಿಯೇ ಸಾವಿಗೀಡಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಜಮೀನು ಮಾಲೀಕ ಯಾರಿಗೂ ತಿಳಿಯದಂತೆ ಜಮೀನಿನ ಬಳಿಯೇ ಜೆಸಿಬಿ ಮೂಲಕ ಗುಂಡಿ ತೆಗೆದು ಆನೆಯ ಮೃತದೇಹವನ್ನು ಹೂತುಹಾಕಿದ್ದ. ಆದರೆ ಈ ಕುರಿತು ಸಾರ್ವಜನಿಕರು ನೀಡಿದ ಖಚಿತ ಸುಳಿವಿನ ಮೇರೆಗೆ ಬುಧವಾರ ವಲಯ ಅರಣ್ಯ ಅಧಿಕಾರಿ ದಾಳೇಶ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಆನೆ ಸಾವು: ಬೆಳೆ ತಿನ್ನಲು ಬಂದ ಕಾಡಾನೆ ಕೊಂದು ಹೊಲದಲ್ಲೇ ಹೂಳಿದ ಜಮೀನ್ದಾರ!
ಆನೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದು, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಮೀನು ಮಾಲೀಕ ಘಟನೆ ಬಳಿಕ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.