ಕೃಷಿಯಿಂದ ಆರ್ಥಿಕವಾಗಿ ಸದೃಢರಾಗಬಹುದು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತಿದೆ. ನಮ್ಮ ಮುಂದಿನ ಪೀಳಿಗೆ ಕೃಷಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದಾಗ ಮಾತ್ರ ಜೀವನದ ಬದುಕು ಬೆಳಕು ಕಾಣಲು ಸಾಧ್ಯವಿದೆ: ಸಚಿವ ಶರಣಬಸಪ್ಪ ದರ್ಶನಾಪೂರ
ಬೈಲಹೊಂಗಲ(ಡಿ.07): ಕೃಷಿ ಪ್ರಧಾನ ದೇಶ ಭಾರತದಲ್ಲಿ ಕೃಷಿಕರಿಗೆ ಹೆಚ್ಚಿನ ಸೌಕರ್ಯಗಳು ಸಿಗಬೇಕು. ಇಂದು ಕೃಷಿ ಭೂಮಿ ಕಡಿಮೆಯಾಗಿ ಕೈಗಾರಿಕಾ ವಲಯ ಹೆಚ್ಚಾಗುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಪಟ್ಟಣದ ಈಶಪ್ರಭು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಬುಧವಾರ ಆರಂಭಗೊಂಡ ಬೃಹತ್ ಕೃಷಿಮೇಳ ಹಾಗೂ ಭಾರೀ ಜಾನುವಾರ ಜಾತ್ರೆ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಯಿಂದ ಆರ್ಥಿಕವಾಗಿ ಸದೃಢರಾಗಬಹುದು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತಿದೆ. ನಮ್ಮ ಮುಂದಿನ ಪೀಳಿಗೆ ಕೃಷಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದಾಗ ಮಾತ್ರ ಜೀವನದ ಬದುಕು ಬೆಳಕು ಕಾಣಲು ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಅಲ್ಲದೆ ನೀರಾವರಿ, ವಿದ್ಯುತ್, ಜಮೀನು ರಸ್ತೆ ಬೆಳೆಗೆ ನಿಗದಿತ ಬೆಲೆ ನೀಡುವ ಮೂಲಕ ರೈತರನ್ನು ಸಬಲರನ್ನಾಗಿಸುವ ಅವಶ್ಯಕತೆ ಇದೆ ಎಂದರು.
ಸರ್ಕಾರಿ ಆರೋಗ್ಯ ಕಾರ್ಡ್‌ನಡಿ ಇನ್ನು ದೇಶಾದ್ಯಂತ ಚಿಕಿತ್ಸೆ: ಈ ಕಾರ್ಡ್ ಇದ್ರೆ ಏನು ಸಿಗುತ್ತೆ?
ಯುವ ಪೀಳಿಗೆಗೆ ಕೃಷಿಯ ಬಗ್ಗೆ ಸಂಪೂರ್ಣ ಜ್ಞಾನ ನೀಡಿ, ಕೃಷಿ ಪರಂಪರೆ ಉಳಿಸಿ, ಬೆಳೆಸುವ ಕಾರ್ಯ ಮಾಡುವ ಅಗತ್ಯ ಇದೆ. ಆಧುನಿಕ ತಂತ್ರಜ್ಞಾನದ ಕೃಷಿ ಚಟುವಟಿಗೆ ಒತ್ತು ನೀಡಬೇಕು. ಕೃಷಿ ಮತ್ತು ಜಾನುವಾರುಗಳಿಗೆ ಉತ್ತೇಜನ ನೀಡಲು ಬೈಲಹೊಂಗಲದಲ್ಲಿ ಕೃಷಿಮೇಳ ಹಾಗೂ ಭಾರೀ ಜಾನುವಾರ ಜಾತ್ರೆ ಪ್ರದರ್ಶನ ಆಯೋಜಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪ್ರಭಾ ಅಕ್ಕ ಸಾನ್ನಿಧ್ಯ ವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಾಬಾಸಾಹೇಬ್ ಪಾಟೀಲ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೃಷಿಮೇಳ ಅಧ್ಯಕ್ಷ ಶಿವರಂಜನ ಬೋಳನ್ನವರ, ಜಾನುವಾರ ಮೇಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮಹೇಶ ಬೆಲ್ಲದ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಕೃಷಿಕ ಸಮಾಜ ಅಧ್ಯಕ್ಷ ಗುರು ಮೆಟಗುಡ್ಡ, ನಿವೃತ್ತ ವಿಶ್ರಾಂತ ಕುಲಪತಿ ಡಾ. ಶಿವಾನಂದ ಹೊಸಮನಿ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಎಫ್.ಎಸ್.ಸಿದ್ದನಗೌಡರ, ಸಿ.ಕೆ.ಮೆಕ್ಕೇದ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮುರಗೇಶ ಗುಂಡ್ಲೂರ, ಬಿ.ಬಿ.ಗಣಾಚಾರಿ, ಡಾ.ಸಿ.ಬಿ.ಗಣಾಚಾರಿ, ಬಾಬುಸಾಬ್ ಸುತಗಟ್ಟಿ, ಸುಭಾಸ ತುರಮರಿ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ, ಪಶು ಸಂಗೋಪನಾ ಅಧಿಕಾರಿ ಶ್ರೀಕಾಂತ ಗಾಂವಿ, ಮಹಾಂತೇಶ ತುರಮರಿ, ಬಸವರಾಜ ಭರಮ್ಮನ್ಮವರ ಹಾಗೂ ನೂರಾರು ರೈತರು ಇದ್ದರು. ಆನಂದ ಬಡಿಗೇರ ಪ್ರಾರ್ಥಿಸಿದರು.
ಬಿಜೆಪಿ ಬ್ರಾಂಡ್ ಬೆಂಗಳೂರು ಮಾಡಿದ್ದಾರೆಯೇ?: ಸಿಎಂ ಸಿದ್ದರಾಮಯ್ಯ
ಕಣ್ಣು ಒದ್ದೆಯಾಗಿಸಿದ ಶಂಬಯ್ಯ ಹಾಡು!
ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದ ಶಂಬಯ್ಯ ಹಿರೇಮಠ ಹಾಗೂ ಸಂಗಡಿಗರು ತಂದೆ-ತಾಯಿ ಅವರ ಕುರಿತಾದ ಹಾಡಿಗೆ ಎಲ್ಲರ ಕಣ್ಣು ಒದ್ದೆಯಾದವು. ಎಲ್ಲ ಮಾಯವೋ ಸೇರಿ ವಿವಿಧ ಜಾನಪದ ಗೀತೆ ಹಾಡಿ ಗಮನ ಸೆಳೆದರು.
ಕೃಷಿಯಿಂದ ಆರ್ಥಿಕವಾಗಿ ಸದೃಢರಾಗಬಹುದು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮೂಲ ಸೌಕರ್ಯ ಒದಗಿಸಬೇಕಾಗಿದೆ. ಅಲ್ಲದೆ ನೀರಾವರಿ, ವಿದ್ಯುತ್, ಜಮೀನು ರಸ್ತೆ ಬೆಳೆಗೆ ನಿಗದಿತ ಬೆಲೆ ನೀಡುವ ಮೂಲಕ ರೈತರನ್ನು ಸಬಲರನ್ನಾಗಿಸುವ ಅವಶ್ಯಕತೆ ಇದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ತಿಳಿಸಿದ್ದಾರೆ.