ಕೋವಿಡ್‌ ನಿಯಮ ಉಲ್ಲಂಘಿಸಿ ಡಿಕೆಶಿ ನೇತೃತ್ವದಲ್ಲಿ ಧರಣಿ: ಕಾಂಗ್ರೆಸ್‌ ವಿರುದ್ಧ ಕೇಸ್‌ ದಾಖಲು

Suvarna News   | Asianet News
Published : Jun 13, 2021, 03:04 PM ISTUpdated : Jun 13, 2021, 03:20 PM IST
ಕೋವಿಡ್‌ ನಿಯಮ ಉಲ್ಲಂಘಿಸಿ ಡಿಕೆಶಿ ನೇತೃತ್ವದಲ್ಲಿ ಧರಣಿ: ಕಾಂಗ್ರೆಸ್‌ ವಿರುದ್ಧ ಕೇಸ್‌ ದಾಖಲು

ಸಾರಾಂಶ

* ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ನಡೆದಿದ್ದ ಧರಣಿ * ಧರಣಿ ವೇಳೆ ನಿಷೇದಾಜ್ಞೆ, ಕೊರೋನಾ ನಿಯಮ ಉಲ್ಲಂಘನೆ * ಕಾಂಗ್ರೆಸ್‌ ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ ಮತ್ತಿತರರ ವಿರುದ್ಧ ಕೇಸ್‌   

ಚಿತ್ರದುರ್ಗ(ಜೂ.13): ಕೋವಿಡ್‌ ನಿಯಮ ಉಲ್ಲಂಘಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಧರಣಿ ಹಿನ್ನೆಲೆಯಲ್ಲಿ ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ ಮತ್ತಿತರರ ವಿರುದ್ಧ ಕೇಸ್‌ ದಾಖಲಾಗಿದೆ.

ಇಂದು(ಭಾನುವಾರ) ನಗರದಲ್ಲಿ ಮಾಹಿತಿ ನೀಡಿದ ಎಸ್‌ಪಿ ಜಿ.ರಾಧಿಕಾ ಅವರು, ನಿನ್ನೆ(ಶನಿವಾರ) ಜಿಲ್ಲೆಯ ಹಿರಿಯೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ  ನಡೆಸಲಾಗಿತ್ತು. ಈ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಲಾಗಿತ್ತು ಎಂದು ಹೇಳಿದ್ದಾರೆ. 

ಚಿತ್ರದುರ್ಗ: ಲಾಕ್‌ಡೌನ್ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂಗರು

ಧರಣಿ ವೇಳೆ ನಿಷೇದಾಜ್ಞೆ, ಕೊರೋನಾ ನಿಯಮ ಉಲ್ಲಂಘಿಸಿ ದೈಹಿಕ ಅಂತರ ಮರೆತು ನೂರಾರು ಜನರು ಜಮಾಯಿಸಿದ್ದರು. ಹೀಗಾಗಿ ಕಾಂಗ್ರೆಸ್‌ ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ ಮತ್ತಿತರರ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. 
 

PREV
click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್