ಕೋಲಾರ : ಕಾರ್ಖಾನೆ ವಿಷದ ನೀರಲ್ಲಿ ಬೆಳೆದ ಹುಲ್ಲು ತಿಂದು ಲಕ್ಷಾಂತರ ಬೆಲೆಯ ಎರಡು ಹಸು ಸಾವು

By Kannadaprabha News  |  First Published Jun 13, 2021, 2:18 PM IST
  •  ವಿಷಪೂರಿತ ಆಹಾರ ಸೇವನೆಯಿಂದ ಎರಡು ಹಸುಗಳು ಸಾವು
  • ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹೊಸೂರು ರಸ್ತೆಯಲ್ಲಿ ಘಟನೆ
  •  ವಿಷಪೂರಿತ ನೀರಿನಲ್ಲಿ ಬೆಳೆದ ಹುಲ್ಲನ್ನು ತಿಂದ ಪರಿಣಾಮ ಹಸುಗಳ ಸಾವು

ಕೋಲಾರ (ಜೂ.13) :  ವಿಷಪೂರಿತ ಆಹಾರ ಸೇವನೆಯಿಂದ ಎರಡು ಹಸುಗಳು ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿಂದು ನಡೆದಿದೆ. 

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹೊಸೂರು ರಸ್ತೆಯ ಸೀತನಾಯಕನಹಳ್ಳಿ ಗ್ರಾಮದಲ್ಲಿಂದು ವಿಷಪೂರಿತ ನೀರಿನಲ್ಲಿ ಬೆಳೆದ ಹುಲ್ಲನ್ನು ತಿಂದ ಪರಿಣಾಮ ಎರಡು ಹಸುಗಳು ಅಸುನೀಗಿವೆ. 

Latest Videos

undefined

ಗ್ರಾಮದ ಬಳಿ ಇರುವ ಕ್ಲೋರೈಡ್ ಮೆಟಲ್ಸ್ ಲಿಮಿಟೆಡ್ ಕಂಪೆನಿಯಿಂದ ಬಿಟ್ಟ ವಿಷಪೂರಿತ ನೀರಿನಲ್ಲಿ ಬೆಳೆದ ಹುಲ್ಲು ತಿಂದು ಎರಡು ಹಸುಗಳು ಸಾವನ್ನಪ್ಪಿವೆ.

ಟೊಮೆಟೋ ಬೆಳೆದು ಕಣ್ಣೀರಿಟ್ಟ ರೈತರು : ಉತ್ಪಾದನೆಯಲ್ಲೂ ಏರಿಕೆ ..

ಗ್ರಾಮದ ನರಸಿಂಹರೆಡ್ಡಿ ಎಂಬುವವರಿಗೆ ಸೇರಿದ ಒಂದು ಲಕ್ಷ ಐವತ್ತು ಸಾವಿರ ಬೆಲೆ ಬಾಳುವ ಎರಡು ಹಸುಗಳು ಮೃತಪಟ್ಟಿರುವುದು ಕುಟುಂಬಕ್ಕೆ ತೀವ್ರ ಸಂಕಷ್ಟಕ್ಕೀಡುಮಾಡಿದೆ. 

ಕಂಪನಿಯ ವಿಷಪೂರಿತ ನೀರಿನಿಂದ ದುರ್ಘಟನೆ ನಡೆದ ಪರಿಣಾಮ ಹಸುಗಳ ಮಾಲಿಕ  ನರಸಿಂಹರೆಡ್ಡಿ  ಕಂಪೆನಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

ಇದಕ್ಕೆ ಈ ಕಂಪನಿಯೇ ಜವಾಬ್ದಾರಿ ಹೊತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

click me!