* ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆಗೆ
* ಕುಡಿವ ನೀರು ಹಾಗೂ ಜಲಪ್ರಾಣಿಗಳ ಅನುಕೂಲಕ್ಕಾಗಿ ನೀರು ಬಿಡುಗಡೆ
* ಇತ್ತೀಚೆಗೆ ಕೃಷ್ಣಾ ನದಿಪಾತ್ರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಡ್ಯಾಂಗೆ ಹರಿದು ಬಂದಿದ್ದ ನೀರು
ದೇವದುರ್ಗ(ಜೂ.13): ಶಾಖೋತ್ಪನ್ನ ವಿದ್ಯುತ್ ಹಾಗೂ ಕುಡಿವ ನೀರನ್ನು ಒದಗಿಸುವುದಕ್ಕಾಗಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 13 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ.
ಕಳೆದ ಮೂರು ದಿನಗಳಿಂದ ಹಂತ ಹಂತವಾಗಿ ನದಿಗೆ ನೀರನ್ನು ಬಿಡಲಾಗುತ್ತಿದೆ. ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರದಿಂದ ವಿದ್ಯುತ್ ಉತ್ಪಾದಿಸಲು, ನದಿದಂಡೆ ಗ್ರಾಮಗಳು, ರಾಯಚೂರು ಸೇರಿ ವಿವಿಧ ಪಟ್ಟಣ ಹಾಗೂ ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡಲು ಹಾಗೂ ಜಲಪ್ರಾಣಿಗಳ ಅನುಕೂಲಕ್ಕಾಗಿ ನೀರು ಹರಿಸಲಾಗಿದೆ.
undefined
ರಾಯಚೂರು ವಿಮಾನ ನಿಲ್ದಾಣಕ್ಕೆ ರಾಯರ ಹೆಸರಿಡಲು ತೀರ್ಮಾನ
ಕೆಲ ದಿನಗಳ ಹಿಂದೆ ನದಿಯಲ್ಲಿ ನೀರಿನ ಕೊರತೆಯಿತ್ತು. ಇತ್ತೀಚೆಗೆ ಪಾತ್ರದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಅಪಾರ ನೀರು ಹರಿದು ಬಂದಿತ್ತು. ಹೆಚ್ಚಿನ ನೀರು ಹರಿಸಿದ್ದರಿಂದ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿ ನದಿ ದಂಡೆಯಲ್ಲಿರುವ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನದ ಸಮೀಪಕ್ಕೆ ನೀರು ಬಂದಿವೆ.