ತಿಪಟೂರು ಬಿಜೆಪಿ ಶಾಸಕ ವಿರುದ್ಧ ಪ್ರಕರಣ ದಾಖಲು

Kannadaprabha News   | Asianet News
Published : Jul 04, 2020, 11:34 AM ISTUpdated : Jul 04, 2020, 11:42 AM IST
ತಿಪಟೂರು ಬಿಜೆಪಿ ಶಾಸಕ ವಿರುದ್ಧ ಪ್ರಕರಣ ದಾಖಲು

ಸಾರಾಂಶ

ತಿಪಟೂರು ನಗರದ ವಾರ್ಡ್‌ ನಂ.14ರ ವಿದ್ಯಾನಗರದಲ್ಲಿ ಶುಕ್ರವಾರ ಬೆಳಿಗ್ಗೆ 2ನೇ ಕ್ರಾಸ್‌ ರಸ್ತೆಯೊಂದರ ಕಾಮಗಾರಿ ಶಂಕುಸ್ಥಾಪನೆ ವಿಷಯವಾಗಿ ನಡೆದ ಮಾತುಕತೆ ವೇಳೆಯಲ್ಲಿ ಶಾಸಕ ಬಿ.ಸಿ.ನಾಗೇಶ್‌ ದಲಿತ ಸಮಾಜಕ್ಕೆ ಸೇರಿರುವ ಕೆಪಿಸಿಸಿ ಸದಸ್ಯ ಹಾಗೂ 14ನೇ ವಾರ್ಡ್‌ ನಗರಸಭಾ ಸದಸ್ಯ ವಿ.ಯೋಗೀಶ್‌ ನಡುವೆ ಕೈ-ಕೈ ಮೀಲಾಯಿಸುವ ಹಂತದವರೆಗೂ ಪರಿಸ್ಥಿತಿ ಹೋಯಿತು. ಶಾಸಕರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ತುಮಕೂರು(ಜು.04): ತಿಪಟೂರು ನಗರದ ವಾರ್ಡ್‌ ನಂ.14ರ ವಿದ್ಯಾನಗರದಲ್ಲಿ ಶುಕ್ರವಾರ ಬೆಳಿಗ್ಗೆ 2ನೇ ಕ್ರಾಸ್‌ ರಸ್ತೆಯೊಂದರ ಕಾಮಗಾರಿ ಶಂಕುಸ್ಥಾಪನೆ ವಿಷಯವಾಗಿ ನಡೆದ ಮಾತುಕತೆ ವೇಳೆಯಲ್ಲಿ ಶಾಸಕ ಬಿ.ಸಿ.ನಾಗೇಶ್‌ ದಲಿತ ಸಮಾಜಕ್ಕೆ ಸೇರಿರುವ ಕೆಪಿಸಿಸಿ ಸದಸ್ಯ ಹಾಗೂ 14ನೇ ವಾರ್ಡ್‌ ನಗರಸಭಾ ಸದಸ್ಯ ವಿ.ಯೋಗೀಶ್‌ ನಡುವೆ ಕೈ-ಕೈ ಮೀಲಾಯಿಸುವ ಹಂತದವರೆಗೂ ಪರಿಸ್ಥಿತಿ ಹೋಯಿತು. ಶಾಸಕರ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ನಗರದ ವಿದ್ಯಾನಗರದಲ್ಲಿ ತಾಲೂಕು ಕಾಂಗ್ರೆಸ್‌ ಘಟಕ ಏರ್ಪಡಿಸಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಡೆನೂರು ಕಾಂತರಾಜು, ಶುಕ್ರವಾರ ಬೆಳಿಗ್ಗೆ 9ಗಂಟೆ ಸಮಯದಲ್ಲಿ ಶಾಸಕರು ವಿದ್ಯಾನಗರದಲ್ಲಿ ಕಾಮಗಾರಿಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಯಾಗಿರುವ ವಿ.ಯೋಗೀಶ್‌ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲ. ವಿಷಯ ತಿಳಿದ ಯೋಗೀಶ್‌ ಸ್ಥಳಕ್ಕೆ ಬಂದು ಶಾಸಕರ ಜತೆ ಸ್ಥಳೀಯ ಜನಪ್ರತಿನಿಧಿಯಾದ ನನ್ನನ್ನು ಕರೆಯದೆ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಹಲವರಿಗೆ ಉದ್ಯೋಗ ನೀಡಿದ ನಿವೃತ್ತ ಯೋಧ

ಇದಕ್ಕೆ, ಶಾಸಕರು ನೀನಿನ್ನೂ ಸದಸ್ಯನಲ್ಲ. ಈ ಕಾಮಗಾರಿ ನಗರಸಭಾ ನಿಧಿಯದ್ದಲ್ಲ. ವಿಶೇಷ ಅನುದಾನದ ನಿಧಿ. ನನ್ನಿಷ್ಟಎಂದು ಧಮಕಿ ಹಾಕಿದ್ದಾರೆ. ಈ ವೇಳೆ ಸದಸ್ಯ ಯೋಗೀಶ್‌, ತಾನು ಈ ವಾರ್ಡ್‌ ಸದಸ್ಯ, ನಿತ್ಯವೂ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದು, ಸರ್ಕಾರದ ಅನುಧಾನಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯುವುದು ವಾಡಿಕೆ ಹಾಗೂ ಕಾನೂನು ಎಂದು ಹೇಳಿದ್ದಾರೆ. ಆಗ ಶಾಸಕರು ಯೋಗೀಶ್‌ ಕೊಳಪಟ್ಟಿಗೆ ಕೈಹಾಕಿ ಧಮಕಿ ಹಾಕಿ ಕೈಮಿಲಾಯಿಸಲು ಮುಂದಾಗಿ ಮನಸೋ ಇಚ್ಛೆ ನಿಂದಿಸಿದ್ದಾರೆ ಎಂದು ದೂರಿದರು.

ಇದರಿಂದ ಯೋಗೀಶ್‌ ಭಯಭೀತರಾಗಿರುವುದಲ್ಲದೆ, ಅವಮಾನಿತರಾಗಿದ್ದಾರೆ. ಒಬ್ಬ ಶಾಸಕರಾಗಿ ನಾಗೇಶ್‌ ದಲಿತ ಜನಾಂಗಕ್ಕೆ ಸೇರಿರುವ ಜನಪ್ರತಿನಿಧಿಯೊಬ್ಬರಿಗೆ ಅವರದೆ ವಾರ್ಡ್‌ ಕಾಮಗಾರಿಯೊಂದರಲ್ಲೂ ಈ ರೀತಿ ವರ್ತನೆ ಮಾಡಿರುವುದು ಖಂಡನೀಯ. ಇಡೀ ಪ್ರಕರಣವನ್ನು ರಾಜ್ಯ ಕಾಂಗ್ರೆಸ್‌ ಮುಖಂಡರ ಗಮನಕ್ಕೆ ತಂದಿದ್ದು, ಸದ್ಯದಲ್ಲಿಯೇ ರಾಜ್ಯ ಕಾಂಗ್ರೆಸ್‌ ಮುಖಂಡತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

ನಗರಸಭಾ ಸದಸ್ಯ ವಿ.ಯೋಗೀಶ್‌ ಮಾತನಾಡಿ, ನನ್ನ ವಾರ್ಡ್‌ ಕಾಮಗಾರಿ ನನಗೆ ತಿಳಿಯದೆ, ಯಾವ ಅಧಿಕಾರಿಗಳೂ ಸಹ ಭಾಗಿಯಾಗೆ ನಡೆಯುವುದನ್ನು ಶಾಸಕರ ಬಳಿ ಪ್ರಶ್ನಿಸಿದ್ದಕ್ಕೆ, ಅಚಾವ್ಯ ಶಬ್ದಗಳಿಂದ ನಿಂದಿಸಿ, ನೀನು ಸದಸ್ಯನೇ ಅಲ್ಲ ಎಂದು ಕೊಳಪಟ್ಟಿಗೆ ಕೈಹಾಕಿದರು. ಈ ಬಗ್ಗೆ ಶಾಸಕರು ಹಾಗೂ ಅವರ ಜತೆಯಲ್ಲಿ ನನಗೆ ಧಮಕಿ ಹಾಕಿದ ಗಂಗರಾಜು, ಯಶ್ವಂತ್‌, ಪ್ರಶಾಂತ್‌ ಹಾಗೂ ಬಿಸಲೇಹಳ್ಳಿ ಜಗದೀಶ್‌ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದೇನೆ. ಈ ಎಲ್ಲಾ ವಿಷಯಗಳನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಶಾಸಕ ಕೆ.ಷಡಕ್ಷರಿಯವರಿಗೆ ತಿಳಿಸಿದ್ದೇನೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ, ಮಾಜಿ ಅಧ್ಯಕ್ಷ ಸುರೇಶ್‌, ತುಮಕೂರು ಹಾಗೂ ರಾಜ್ಯ ಹಾಲು ಉತ್ಪಾದಕ ಮಹಾಮಂಡಲ ನಿರ್ದೇಶಕ ಮಾದೀಹಳ್ಳಿ ಪ್ರಕಾಶ್‌ ಮಾತನಾಡಿ, ಇಡೀ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಮೊಬೈಲ್‌ ಸಹ ಕಿತ್ತೆಸದಿದ್ದು ಖಂಡನೀಯ ಎಂದರು.

ಕೊರೋನಾಗೆ ಹೆದರಿ ವ್ಯಕ್ತಿ ನೇಣಿಗೆ ಶರಣು

ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷರಾದ ಆರ್‌.ಡಿ.ಬಾಬು, ತರಕಾರಿ ಪ್ರಕಾಶ್‌, ಮುಖಂಡರಾದ ನಿಖಿಲ್‌ ರಾಜಣ್ಣ, ಕಾಂಗ್ರೆಸ್‌ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಫುಲ್ಲಾ, ಮಾಜಿ ಸದಸ್ಯರಾದ ಎಚ್‌.ಜಿ.ಸುಧಾಕರ್‌, ಸದಸ್ಯರಾದ ಮಹೇಶ್‌, ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಅಧ್ಯಕ್ಷ ಯೋಗೀಶ್‌, ತಿಲಕ್‌ ಇದ್ದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು