ಸಾಗರದ ಮತ್ತೊಬ್ಬ ಮೆಸ್ಕಾಂ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಸ್ಕಾಂ ವಸತಿಗೃಹಗಳನ್ನು ತನ್ನ ಸುಪರ್ದಿಗೆ ಪಡೆದಿತ್ತು. ತಾಲೂಕು ಆಡಳಿತ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದು, ವಸತಿಗೃಹದಲ್ಲಿರುವವರು ಹೊರಗೆ ಬರದಂತೆ ಸೂಚಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಜು.04): ಇಲ್ಲಿನ ಮೆಸ್ಕಾಂ ವಸತಿಗಹದಲ್ಲಿದ್ದ 33 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಸೋಂಕಿತ ವ್ಯಕ್ತಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬುಧವಾರ ಮೆಸ್ಕಾಂ ಲೈನ್‌ಮ್ಯಾನ್ ಓರ್ವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಶುಕ್ರವಾರ ಕೊರೋನಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯು ಬುಧವಾರ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದು, ಆತನಿಂದ ಸೋಂಕು ಹರಡಿರಬಹುದು ಎಂದು ಆರೋಗ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಬುಧವಾರ ಲೈನ್‌ಮ್ಯಾನ್‌ನಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರಸಭೆ ಮೆಸ್ಕಾಂ ಕಚೇರಿಗೆ ಔಷಧಿ ಸಿಂಪಡಿಸಿ, ಮೆಸ್ಕಾಂ ವಸತಿಗೃಹಗಳನ್ನು ತನ್ನ ಸುಪರ್ದಿಗೆ ಪಡೆದಿತ್ತು. ತಾಲೂಕು ಆಡಳಿತ ಈ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದು, ವಸತಿಗೃಹದಲ್ಲಿರುವವರು ಹೊರಗೆ ಬರದಂತೆ, ಸಾರ್ವಜನಿಕರು ಒಳಗೆ ಹೋಗದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಭದ್ರಾವತಿಯಲ್ಲಿ ಹೊಸದಾಗಿ 4 ಕೊರೋನಾ ಪ್ರಕರಣ ಪತ್ತೆ..!
ಸೀಲ್‌ಡೌನ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಬೆಳಗ್ಗೆ ಸ್ಯಾನಿಟೈಜಿಂಗ್ ಮಾಡಲಾಗುತ್ತಿದೆ. ಇಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ಬೆಳಗ್ಗೆ 7-30ರೊಳಗೆ ಹಾಲು ಪೂರೈಕೆ, ಮಧ್ಯಾಹ್ನ 11ಗಂಟೆಯೊಳಗೆ ಅವರಿಗೆ ಬೇಕಾದ ತರಕಾರಿ, ದಿನಸಿ ಇನ್ನಿತ್ಯಾದಿ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೆ ಆರೋಗ್ಯ ಇಲಾಖೆ ವತಿಯಿಂದ ಸೀಲ್‌ಡೌನ್ ಸ್ಥಳದಲ್ಲಿ ಓರ್ವ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಇವರ ಜೊತೆಗೆ ನಗರಸಭೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್. ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಯುವಕನೊಬ್ಬನಿಗೆ ಸೋಂಕು..!
ಹೊಳೆಹೊನ್ನೂರು: ಪಟ್ಟಣದ ರಬ್ಬಾನಿ ರೈಸ್ ಮಿಲ್‌ನಲ್ಲಿ ಕೆಲಸ ಮಾಡಲು ಉತ್ತರ ಪ್ರದೇಶದಿಂದ ಬಂದಿದ್ದ 19 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು ಶುಕ್ರವಾರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೈಸ್ ಮಿಲ್‌ನಲ್ಲಿ ಹೊಸ ಯಂತ್ರೋಪರಕಣಗಳ ಜೋಡಣೆ ಮಾಡಲೆಂದು ಜೂ.28ರಂದು ಉತ್ತರ ಪ್ರದೇಶದಿಂದ 5 ಜನರು ಬಂದಿದ್ದಾರೆ. ವಿಷಯ ತಿಳಿದ ಕೊರೊನಾ ವಾರಿಯರ್ಸ್ ಅವರ ಮಾಹಿತಿ ಕಲೆ ಹಾಕಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದಢಪಟ್ಟದೆ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯನ್ನು ತಕ್ಷಣ ತುರ್ತು ಚಿಕಿತ್ಸಾ ವಾಹನದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ನಂತರ ಸೋಂಕಿತ ವ್ಯಕ್ತಿ ಹಿನ್ನಲೆ ಕಲೆ ಹಾಕಲಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತ ಕೆಲಸ ಮಾಡುತ್ತಿದ್ದ ರೈಲ್ ಮಿಲ್ ಸುತ್ತಲ ಸುಮಾರು 100 ಮೀ. ಸುತ್ತಲ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಈ ನಡುವೆ ಸ್ಥಳೀಯ ಕೆಲ ಯುವಕರು ಗುಂಪು ಕಟ್ಟಿಕೊಂಡು ಪಟ್ಟಣದಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಇಡೀ ಪಟ್ಟಣವನ್ನೇ ಲಾಕ್‌ಡೌನ್ ಮಾಡಲು ಪ್ರಯತ್ನಿಸಲಾಯಿತು. ಕೆಲ ಮಾಲೀಕರು ಅಂಡಿಗಳ ಬಾಗಿಲು ಮುಚ್ಚಿದರು ಇನ್ನೂ ಕೆಲವರು ನಿರಾತಂಕವಾಗಿ ವ್ಯಾಪಾರ ಮಾಡಿದರು. ಆದರೆ ಈ ಪ್ರಕರಣದಿಂದಾಗಿ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.