ಶಿರಾ: ಕಾರು ಉರುಳಿ ಬಿದ್ದು ಮೂವರ ಯುವಕರ ದುರ್ಮರಣ

By Kannadaprabha News  |  First Published Jun 29, 2020, 12:41 PM IST

ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುವಾಗ ರಸ್ತೆ ಬದಿ ಉರುಳಿಬಿದ್ದ ಕಾರು| ಮೂವರು ಯುವಕರ ಸಾವು| ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ರಸ್ತೆಯ ಹೊನ್ನೆನಹಳ್ಳಿ ಬಳಿ ನಡೆದ ಘಟನೆ| ಮರಡಿಗುಡ್ಡದಲ್ಲಿರುವ ಶ್ರಿಮರಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುವಾಗ ನಡೆದ ದುರ್ಘಟನೆ|


ಶಿರಾ(ಜೂ.29): ಭಾನುವಾರದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುವಾಗ ಕಾರು ರಸ್ತೆ ಬದಿ ಉರುಳಿಬಿದ್ದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ಬುಕ್ಕಾಪಟ್ಟಣ ರಸ್ತೆಯ ಹೊನ್ನೆನಹಳ್ಳಿ ಬಳಿ ನಡೆದಿದೆ. 

ಮೃತಪಟ್ಟವರು ಬರಗೂರು ಗ್ರಾಮದ ಬಸವರಾಜು (22), ವಿನಯ್‌ (23) ಮತ್ತು ಸಿರಾ ನಗರದ ಸುಮನ್‌ ಬಾಬು (23), ಗಾಯಗೊಂಡವರು ಸಚಿನ್‌ ಮತ್ತು ನೂತನ್‌ ಎಂದು ತಿಳಿದುಬಂದಿದೆ. 

Tap to resize

Latest Videos

ಕೊರೋನಾ ಮರಣ ಮೃದಂಗ: ರಾಜ್ಯದಲ್ಲಿ ಕೇವಲ 4 ತಾಸಲ್ಲಿ ನಾಲ್ಕು ಮಂದಿ ಬಲಿ

ಇವರೆಲ್ಲರೂ ಮರಡಿಗುಡ್ಡದಲ್ಲಿರುವ ಶ್ರಿಮರಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಸ್‌ ಬರುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಶಿರಾ ನಗರ ಠಾಣಾ ಪೊಲೀಸರು ಧಾವಿಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.
 

click me!