ಅಮಿತ್‌ ಶಾ ತಿಳುವಳಿಕೆ ಪ್ರಶ್ನಿಸುವ ಹಾಗಿಲ್ಲ: ಮಾಧು ಸ್ವಾಮಿ

Published : Sep 01, 2019, 09:36 AM IST
ಅಮಿತ್‌ ಶಾ ತಿಳುವಳಿಕೆ ಪ್ರಶ್ನಿಸುವ ಹಾಗಿಲ್ಲ: ಮಾಧು ಸ್ವಾಮಿ

ಸಾರಾಂಶ

ಬಿಜೆಪಿ ಸರ್ಕಾರದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿರುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ನಾಯಕರ ತೀರ್ಮಾನವಾಗಿದೆ. ಅಮಿತ್‌ ಶಾ ಅವರ ತಿಳವಳಿಕೆಯನ್ನು ಪ್ರಶ್ನಿಸುವ ಹಾಗೆ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ರಾಷ್ಟ್ರೀಯ ನಾಯಕರು ಯಾವ ಕಾರಣಕ್ಕೆ ಈ ತೀರ್ಮಾನ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅವರು ತೆಗೆದುಕೊಂಡಿರುವ ತೀರ್ಮಾನದಿಂದ ಪಕ್ಷಕ್ಕೆ ಒಳ್ಳೆಯಾದಾಗುತ್ತೆ ಎಂದು ಭಾವಿಸಿದ್ದೇನೆ ಎಂದರು.

ಮಂಡ್ಯ(ಸೆ.01): ಬಿಜೆಪಿ ಸರ್ಕಾರದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿರುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ನಾಯಕರ ತೀರ್ಮಾನವಾಗಿದೆ. ಅಮಿತ್‌ ಶಾ ಅವರ ತಿಳವಳಿಕೆಯನ್ನು ಪ್ರಶ್ನಿಸುವ ಹಾಗೆ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಯಾವ ಕಾರಣಕ್ಕೆ ಈ ತೀರ್ಮಾನ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅವರು ತೆಗೆದುಕೊಂಡಿರುವ ತೀರ್ಮಾನದಿಂದ ಪಕ್ಷಕ್ಕೆ ಒಳ್ಳೆಯಾದಾಗುತ್ತೆ ಎಂದು ಭಾವಿಸಿದ್ದೇನೆ ಎಂದರು.

ಸಂಸದ ಶ್ರೀನಿವಾಸ್‌ ಪ್ರಸಾದ್‌ ಮೂವರು ಡಿಸಿಎಂ ವಿಚಾರವಾಗಿ ಬಹಹಿರಂಗವಾಗಿ ಕೇಂದ್ರ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆಸಿದ ಜೆಸಿಎಂ, ಪ್ರಸಾದ್‌ ಅವರದ್ದು ವೈಯಕ್ತಿಕ ಅಭಿಪ್ರಾಯ. ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಒಬ್ಬೊಬ್ಬರದು ಒಂದೊಂದು ರೀತಿ ಅಭಿಪ್ರಾಯ ಇರುತ್ತದೆ ಎಂದರು.

ಮಂಡ್ಯ: ಆಂಜನೇಯ ದೇವರಿಗೆ ನಟಿ ಪ್ರೇಮಾ ಪೂಜೆ

ಸಚಿವ ಸ್ಥಾನಕ್ಕೆ ಭಿನ್ನಮತ ಸಾಮಾನ್ಯ. ಪ್ರತಿಯೊಬ್ಬರಿಗೂ ಆಸೆ ಎಂಬುದು ಇರುತ್ತದೆ. ಗ್ರಾಮ ಪಂಚಾಯಿತಿ ಸದಸ್ಯ ಆದಾಗ ಅಧ್ಯಕ್ಷ ಆಗಬೇಕು ಎನಿಸುತ್ತದೆ. ಹಾಗೆ ಎಂಎಲ್‌ಎ ಆದಾಗ ಮಂತ್ರಿಆಗಬೇಕು ಅನ್ನೋದು ಸಹಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಮಿಳುನಾಡು ಮೂಲದ ವಿಮಾ ಕಂಪನಿಯಿಂದ ಗ್ರಾಹಕರಿಗೆ ದೋಖಾ..!

ಪ್ರವಾಹ ಪೀಡಿತರಿಗೆ ನೆರವು ನೀಡಲು ತುರ್ತಾಗಿ ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಅತಿವೃಷ್ಟಿಯಿಂದ ಒಟ್ಟಾರೆ 32 ಸಾವಿರ ಕೋಟಿ ರು. ನಷ್ಟಆಗಿದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಆ.7ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ನಾವು ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC