ತನ್ನ ಅಂತ್ಯಕ್ರಿಯೆ ತಾನೇ ಮಾಡಿಕೊಂಡ/ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಯಲ್ಲಾಪುರ ವೃದ್ಧ/ ಕ್ರಿಯಾಕರ್ಮ ಮಾಡಿಕೊಂಡು ಚಿತೆಗೆ ಹಾರಿ ಆತ್ಮಹತ್ಯೆ
ಯಲ್ಲಾಪುರ(ಜೂ.10) ಇದೊಂದು ವಿಚಿತ್ರದಲ್ಲಿ ವಿಚಿತ್ರ ಪ್ರಕರಣ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿ ತನ್ನ ಅಂತ್ಯ ಕ್ರಿಯೆ ತಾವೇ ಮಾಡಿಕೊಂಡಿದ್ದಾರೆ.
ಯಲ್ಲಾಪುರದ ಸಹಸ್ರಳ್ಳಿ ಗ್ರಾಮದ ಕೊಂಕಣಕೊಪ್ಪದ ವೃದ್ಧ ಶಿವರಾಮ ರಾಮಕೃಷ್ಣ ಹೆಗಡೆ(60) ಚಿತೆಯ ಮೇಲೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಅವರನ್ನು ಬಿಡದೇ ಕಾಡುತ್ತಿತ್ತು. ಕುಟುಂಬದವರಿಗೆ ತೊಂದರೆಯಾಗಬಾರದೆಂದು ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ.
ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿವರಾಮ ಅವರಿಗೆ ಮೂರು ತಿಂಗಳಿನಿಂದ ಸರಿಯಾಗಿ ಊಟ ತಿಂಡಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮನನೊಂದು ಮಂಗಳವಾರ ತಾವೇ ಕಟ್ಟಿಗೆ ಸಂಗ್ರಹಿಸಿ ಚಿತೆ ಸಿದ್ಧಪಡಿಸಿ ನಂತರ ಸೀಮೆಎಣ್ಣೆ ಸುರಿದುಕೊಂಡು ದೇಹತ್ಯಾಗ ಮಾಡಿದ್ದಾರೆ.
ಸೇತುವೆ ಮೇಲಿಂದ ಹಾರಿ ಮಾಲೀಕ ಆತ್ಮಹತ್ಯೆ, ಇನ್ನೂ ಒಡೆಯನಿಗಾಗಿ ಕಾಯುತ್ತಿದೆ ಶ್ವಾನ
ಮರುದಿನ ಮನೆಯವರು ಇವರ ಹುಡುಕಾಟ ಆರಂಭಿಸಿದ್ದಾರೆ. ಕಾಡಿನಲ್ಲಿ ಸುಟ್ಟ ಬೂದಿ ಕಂಡುಬಂದಿದ್ದು ಶಿವರಾಮ ಅವರ ಶರ್ಟ್, ಟಾರ್ಚ್ ಮತ್ತು ಒಂದು ಪತ್ರ ಸಿಕ್ಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಮುಕ್ತಿಗಾಗಿ ತೆರಳುತ್ತಿದ್ದೇನೆ. ಇಲ್ಲಿ ಎಲ್ಲವೂ ಮಾಯೆ ಹಟ್ಟು ಸಾವು ಎನ್ನುವುದೇ ಇಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ. ಇನ್ನೊಂದು ಪುಟದಲ್ಲಿ ಸೊಪ್ಪಿನ ಬೆಟ್ಟದಿಂದ ನೂರಾರು ಮಾರು ದೂರದಲ್ಲಿ ನಾರಾಯಣ ಗೌಡನ ವಕ್ಕೆರೆ ಹತ್ತಿರ ಅಗ್ನಿ ಪ್ರವೇಶ ಎಂದು ಬರೆದಿದ್ದಾರೆ.
ತನ್ನ ಕ್ರಿಯಾಕರ್ಮ ತಾನೇ ಮಾಡಿಕೊಂಡು ಮೃತಪಟ್ಟರೆ ಮುಕ್ತಿ ಸಿಗುವುದು ಎಂಬ ನಂಬಿಕೆಯಿಂದ ಶಾಸ್ತ್ರೋಕ್ತ ಕ್ರಿಯಾಕರ್ಮ ತಾವೇ ಮಾಡಿಕೊಂಡು ಸೀಮೆಎಣ್ಣೆ ಸುರಿದುಕೊಂಡು ಚಿತೆಗೆ ಹಾರಿ ಆತ್ಮಹತ್ಯತೆಗೆ ಶರಣಗಾಗಿದ್ದಾರೆ ಎನ್ನಲಾಗಿದೆ.