ಎಸ್ಸೆಸ್ಸೆಲ್ಸಿ, ಫಾರ್ಮಸಿ, ಎಂಜಿನಿಯರಿಗ್ ಹಾಗೂ ಡಿಪ್ಲೋಮಾ ಸೇರಿ ಎಲ್ಲ ಪದವಿ ವಿದ್ಯಾರ್ಥಿಗಳನ್ನು ಪಾಸು ಮಾಡಿ: ವಾಟಾಳ್ ನಾಗರಾಜ್| ವಿದ್ಯಾರ್ಥಿಗಳಿಂದ ಪರೀಕ್ಷೆ ಶುಲ್ಕ, ಕಾಲೇಜ್ ಶುಲ್ಕ ಪಡೆಯಬಾರದು. ಸರ್ಕಾರ ವಿದ್ಯಾರ್ಥಿಗಳಿಗೆ ಶುಲ್ಕಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು|
ರಾಮನಗರ(ಜೂ.10): ಎಸ್ಸೆಸ್ಸೆಲ್ಸಿ, ಫಾರ್ಮಸಿ, ಎಂಜಿನಿಯರಿಗ್ ಹಾಗೂ ಡಿಪ್ಲೊಮಾ ಸೇರಿದಂತೆ ಎಲ್ಲಾ ಪದವಿಯ ಅಂತಿಮ ಪರೀಕ್ಷೆಗಳನ್ನು ನಡೆಸದೇ ವಿದ್ಯಾರ್ಥಿಗಳನ್ನು ಉತ್ತೀರ್ಣರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ತರಗತಿಯಲ್ಲಿ ಕಲಿಕಾ ಮಾನದಂಡಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳನ್ನು ಒತ್ತಾಯಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಆನ್‌ಲೈನ್ ಶಿಕ್ಷವಣವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಎಷ್ಟೋ ಹಳ್ಳಿಗಳಲ್ಲಿ ಮೊಬೈಲ್ ವ್ಯವಸ್ಥೆ ಇಲ್ಲ. ಮೊಬೈಲ್ ಖರೀದಿ ಮಾಡಲು ಜನರ ಬಳಿ ಹಣ ಇಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆನ್ ಲೈನ್ ಶಿಕ್ಷಣವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಕೇಂದ್ರಕ್ಕೆ ಸ್ಟ್ರಾಂಗ್‌ರೂಮ್‌ನಷ್ಟೇ ಭದ್ರತೆ
ಈಗಾಗಲೇ ದೆಹಲಿ, ಮಹಾರಾಷ್ಟ್ರ ಸೇರಿ 12ರಾಜ್ಯಗಳಲ್ಲಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದ್ದಾರೆ. ಮುಖ್ಯವಾಗಿ ಮುಂಬೈ ಐಐಟಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಗೋವಾ ವಿಶ್ವವಿದ್ಯಾಲಯ ಎಲ್ಲಾ ಪದವಿ ಪರೀಕ್ಷೆಗಳನ್ನು ಬಂದ್ ಮಾಡಿ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬಾರದು ಎಂದು ಹೇಳಿದರು.
ದೇಶದ ಹಲವು ರಾಜ್ಯಗಳು ಈಗಾಗಲೇ ಪರೀಕ್ಷೆಗಳನ್ನು ರದ್ದು ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರವು ಕೂಡ ಇಂತಹ ಕ್ರಮಕೈಗೊಳ್ಳಬೇಕು. ಜೀವ ಇದ್ದರೇ, ಜೀವನ ಇದನ್ನು ಅರಿತು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಂದ ಪರೀಕ್ಷೆ ಶುಲ್ಕ, ಕಾಲೇಜ್ ಶುಲ್ಕ ಪಡೆಯಬಾರದು. ಸರ್ಕಾರ ವಿದ್ಯಾರ್ಥಿಗಳಿಗೆ ಶುಲ್ಕಕ್ಕಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಾಟಾಳ್ ನಾಗಾರಜ್ ಸರ್ಕಾರವನ್ನು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ, ಎಂ.ಜಗದೀಶ್, ಪದಾಧಿಕಾರಿಗಳಾದ ಗಾಯಿತ್ರಿ ಬಾಯಿ, ಸಿ.ಎಸ್.ಜಯಕುಮಾರ್ , ಜಯರಾಮು, ಮರೀಸ್ವಾಮಿ, ಆರ್ .ಜೆ.ಅರ್ಜುನ್, ಬಿ.ಸುರೇಶ್, ಶಿವಪ್ರಸಾದ್, ರಾಣಿಕಿರಣ್ ಸೇರಿದಂತೆ ಹಲವರು ಹಾಜರಿದ್ದರು.