ಬೆಳಗಾವಿ: ರೈತನಿಗೆ ವಂಚನೆ, ಯತ್ನಟ್ಟಿ ವಕೀಲಿಕೆ ಸನ್ನದು ರದ್ದು

By Kannadaprabha News  |  First Published Jun 23, 2023, 8:12 PM IST

ಬೆಳಗಾವಿ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ರಭು ಯತ್ನಟ್ಟಿ ವಂಚನೆ ಆರೋಪ ಎದುರಿಸುತ್ತಿದ್ದು, ಶಾಶ್ವತ ಸನ್ನದು ಕಳೆದುಕೊಂಡವರು. ಖಾನಾಪುರದ ರೈತ ಸುಭಾಷ ಆರ್‌. ಪೂಜಾರಿ ಎಂಬುವರು ಪ್ರಭು ಯತ್ನಟ್ಟಿ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿ ತನ್ನ ಜಮೀನಿಗೆ ಪರಿಹಾರವಾಗಿ ಬಂದಿದ್ದ 99 ಲಕ್ಷ ಹಣ ವಾಪಸ್‌ ಪಡೆಯಲು ಕೂಡ ಆದೇಶ ಪಡೆದಿದ್ದಾರೆ.


ಬೆಳಗಾವಿ(ಜೂ.23):  ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸ್ವಾಧೀನವಾದ ಜಮೀನಿಗೆ ಪರಿಹಾರ ಕೊಡಿಸುವಂತೆ ಕೋರ್ಟ್‌ ಮೆಟ್ಟಿಲೇರಿದ್ದ ರೈತರೊಬ್ಬರಿಗೆ 99.68 ಲಕ್ಷ ವಂಚನೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ರಭು ಯತ್ನಟ್ಟಿ ಅವರ ವಕೀಲರ ಸನ್ನದನ್ನು ಶಾಶ್ವತವಾಗಿ ರದ್ದುಗೊಳಿಸಿ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಸಮಿತಿ ಜೂ.19 ರಂದು ಆದೇಶ ಹೊರಡಿಸಿದೆ.

ಬೆಳಗಾವಿ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ರಭು ಯತ್ನಟ್ಟಿ ವಂಚನೆ ಆರೋಪ ಎದುರಿಸುತ್ತಿದ್ದು, ಶಾಶ್ವತ ಸನ್ನದು ಕಳೆದುಕೊಂಡವರು. ಖಾನಾಪುರದ ರೈತ ಸುಭಾಷ ಆರ್‌. ಪೂಜಾರಿ ಎಂಬುವರು ಪ್ರಭು ಯತ್ನಟ್ಟಿ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿ ತನ್ನ ಜಮೀನಿಗೆ ಪರಿಹಾರವಾಗಿ ಬಂದಿದ್ದ 99 ಲಕ್ಷ ಹಣ ವಾಪಸ್‌ ಪಡೆಯಲು ಕೂಡ ಆದೇಶ ಪಡೆದಿದ್ದಾರೆ.

Tap to resize

Latest Videos

ಶಾಲಾ ಚುನಾವಣೆ: ಸಾರ್ವತ್ರಿಕ ಚುನಾವಂತೆ ಇವಿಎಂ ಬಳಸಿ ಗಮನ ಸೆಳೆದ ಬಂಬಲವಾಡ ಗ್ರಾಮದ ಸರ್ಕಾರಿ ಶಾಲೆ ಮಕ್ಕಳು!

ಈ ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಸಮಿತಿ ಅಧ್ಯಕ್ಷ ನರಸಿಂಹಸ್ವಾಮಿ ಎನ್‌.ಎಸ್‌., ಸದಸ್ಯರಾದ ರಾಜಣ್ಣ ಆರ್‌ ಹಾಗೂ ಚಂದ್ರಮೌಳಿ ಬಿ.ಆರ್‌. ಅವರು ತಪ್ಪಿತಸ್ಥ ವಕೀಲ ಯತ್ನಟ್ಟಿಯ ಸನ್ನದು ಶಾಶ್ವತವಾಗಿ ರದ್ದು ಮಾಡಿದ್ದಾರೆ. ಜತೆಗೆ ನೊಂದ ರೈತನಿಗೆ ನೀಡಬೇಕಾಗಿದ್ದ ಭೂಸ್ವಾಧೀನ ಪರಿಹಾರದ ಹಣ ತೆಗೆದುಕೊಂಡಿದ್ದ ಅಷ್ಟೂ.99,68,582 ಮರುಪಾವತಿಸಬೇಕು. ಜತೆಗೆ ಪ್ರೊಸೆಸಿಂಗ್‌ ಶುಲ್ಕವಾಗಿ ಪಡೆದಿದ್ದ .20 ಸಾವಿರ ಪೈಕಿ 10 ಸಾವಿರ ಸುಭಾಷ ಪೂಜಾರಿಗೆ ಹಿಂದಿರುಗಿಸಬೇಕು. ವಕೀಲರ ಪರಿಷತ್ತಿಗೆ .10 ಸಾವಿರ ದಂಡ ಪಾವತಿಸಬೇಕು ಎಂದು ಶಿಸ್ತು ಸಮಿತಿ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

ಏನಿದು ಪ್ರಕರಣ?:

ಖಾನಾಪುರ-ಗೋವಾ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್‌-4ಎ) ಅಗಲೀಕರಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ಖಾನಾಪುರದ ರೈತ ಸುಭಾಷ ಪೂಜಾರಿ ಅವರು, 2018ರ ಸೆಪ್ಟೆಂಬರ್‌ನಲ್ಲಿ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕೋವಿಡ್‌ ವೇಳೆ ಅನಾರೋಗ್ಯಕ್ಕೀಡಾಗಿ ಪವರ್‌ ಆಫ್‌ ಅಟಾರ್ನಿಯನ್ನು ತಮ್ಮ ಮಗಳಿಗೆ ನೀಡಿ, ಕಾನೂನು ಹೋರಾಟ ಮುಂದುವರಿಸಿದ್ದರು.

ನಿಯಮಾನುಸಾರ 2018ರ ನವೆಂಬರ್‌ 18ರಂದು ಪರಿಹಾರ ಬಿಡುಗಡೆಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ವಕಾಲತ್ತು ವಹಿಸಿದ್ದ ವಕೀಲ ಪ್ರಭು ಯತ್ನಟ್ಟಿಅವರನ್ನು ಕೇಳಿದಾಗ ಅಸಮರ್ಪಕ ಉತ್ತರ ಕಂಡು, ಅನುಮಾನಗೊಂಡಿದ್ದಾರೆ. ಬಳಿಕ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಹಣ ಬಿಡುಗಡೆಯಾಗಿರುವ ಬಗ್ಗೆ ಎಲ್ಲ ದಾಖಲೆಗಳನ್ನು ಪಡೆದು, ತಮ್ಮ ಹೆಸರಿಗೆ ಬಂದ ಖಾತೆಯ ಎಲ್ಲ ದಾಖಲೆ ಪಡೆದಿದ್ದಾರೆ. ಅವುಗಳ ಪ್ರಕಾರ ರೈತ ನೀಡಿದ ಪವರ್‌ ಆಫ್‌ ಅಟಾರ್ನಿ ಬಳಸಿ, ಪರಿಹಾರವಾಗಿ ಬಂದಿದ್ದ ಒಟ್ಟು . 99,68,582 ಮೊತ್ತವನ್ನು ಬೆಳಗಾವಿಯಲ್ಲಿನ ಬ್ಯಾಂಕ್‌ ಒಂದರ ಚೆಕ್‌ ಮೂಲಕ ತನ್ನ ಖಾತೆಗೆ ಜಮೆ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಇತರೆ ವಕೀಲರಿಂದ ಮಾಹಿತಿ ಪಡೆದ ರೈತ, ವಕೀಲರ ಶಿಸ್ತು ಸಮಿತಿ ಮುಂದೆ ಪ್ರಕರಣದ ಸಂಪೂರ್ಣ ದಾಖಲೆ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದರು.

click me!