ಕಾಲುವೆಯಲ್ಲಿ ಹೂಳೆತ್ತದ ಪರಿಣಾಮ ಗ್ರಾಮಕ್ಕೆ ನೀರು ಹರಿದು ಬೆಳೆ ನಾಶವಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸೂರಾಪುರ ಗ್ರಾಮದಲ್ಲಿ ಜರುಗಿದೆ.
ಚಾಮರಾಜನಗರ(ಮೇ 21): ಕಾಲುವೆಯಲ್ಲಿ ಹೂಳೆತ್ತದ ಪರಿಣಾಮ ಗ್ರಾಮಕ್ಕೆ ನೀರು ಹರಿದು ಬೆಳೆ ನಾಶವಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸೂರಾಪುರ ಗ್ರಾಮದಲ್ಲಿ ಜರುಗಿದೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾ.ಪಂ ವ್ಯಾಪ್ತಿಯ ಸೂರಾಪುರ ಗ್ರಾಮದ ಕಾಲುವೆಗಳಲ್ಲಿ ಹೂಳು ತೆಗೆಯದ ಹಿನ್ನಲೆ ಮೂರು ಎಕರೆ ಅರಿಶಿನ ಬೆಳೆ, ನಾಟಿ ಮಾಡಿದ್ದ ಭತ್ತದ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟಉಂಟಾಗಿದೆ. ಚರಂಡಿಗಳಿಂದ ಕೊಳಚೆ ನೀರು ಹೊರ ಹರಿದು ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.
20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!
ಹೌದು ವ್ಯವಸಾಯಕ್ಕೆ ಅನುಕೂಲಕ್ಕೆ ನಾಲೆಯಲ್ಲಿ ಬಿಟ್ಟನೀರು, ಗ್ರಾಮದ ಚರಂಡಿ ನೀರಿನ ಜೊತೆ ಸೇರಿ ಗ್ರಾಮದ ಮನೆ ಬಾಗಿಲಿಗೆ ಚಾಚಿಕೊಂಡಿದೆ. ಕಸ, ಕೊಳಚೆ ನೀರು ಮಿಶ್ರಿತಗೊಂಡು ಗ್ರಾಮಸ್ಥರಲ್ಲಿ ರೋಗದ ಹರಡುವ ಅತಂಕದಲ್ಲಿದ್ದಾರೆ. ಗ್ರಾಮದ ಸಮೀಪವಿರುವ ಕಾಲುವೆಯಲ್ಲಿ ಗಿಡ, ಗಂಟಿಗಳು ಬೆಳೆದು, ರಾಶಿ ರಾಶಿ ಕಸ ಕಡ್ಡಿಗಳಿಂದ ಹೂಳು ತುಂಬಿಕೊಂಡಿದೆ. ಇದರಿಂದ ಕಾಲುವೆಗೆ ಬಂದ ನೀರು ಸರಾಗವಾಗಿ ಹರಿದು ಹೋಗದೆ ಸಮೀಪದ ಜಮೀನಿಗೆ ನುಗ್ಗಿ, ರೈತರು ಬೆಳೆದಿದ ಅರಿಶಿನ, ಭತ್ತದ ಬೆಳೆಯು ಸಂಪೂರ್ಣ ನಾಶವಾಗಿದೆ. ಫಲ ಕೊಡುವ ಸಮಯದಲ್ಲಿ ಬೆಳೆ ಕಳೆದುಕೊಂಡ ರೈತ ರವಿ ಈ ಘಟನೆಯಿಂದಾಗಿ ಚಿಂತೆಗೀಡಾಗಿದ್ದಾರೆ.
ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು: ಕರಾವಳಿ ರಾಜ್ಯಗಳ ಜನರಿಗೆ ಲಾಭ
ಈ ಬಗ್ಗೆ ಪಿಡಿಒ ಹಾಗೂ ಕಬಿನಿ ನೀರಾವರಿ ಅಕಾರಿಗಳಿಗೆ ಮಾಹಿತಿ ನೀಡಿದರು. ಇಲ್ಲಿಯ ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ಭೇಟಿ ನೀಡದೆ ಸುಮ್ಮನಿದ್ದಾರೆ ಎಂದು ಆರೋಪ ಮಾಡಿದರು. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆಗಳು ಕಾಲುವೆ ನೀರಿನಿಂದ ನಾಶವಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.