ನಮಗೆ ಹೇಳೋದಕ್ಕೆ ಸಿದ್ದರಾಮಯ್ಯ ಯಾರು..?

By Kannadaprabha News  |  First Published Nov 30, 2020, 7:29 AM IST

ನಮ್ಮ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು ಎಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ  ವಾಗ್ದಾಳಿ ನಡೆಸಿದ್ದಾರೆ. 


ಪೊನ್ನಂಪೇಟೆ (ನ.30): ಶಾಸಕರು ದೆಹಲಿಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಭಾನುವಾರ ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ನನ್ನನ್ನೂ ಆಹ್ವಾನಿಸಿದ್ದರು. ಬೇರೆ ಕಾರ್ಯಕ್ರಮ ಇದ್ದುದರಿಂದ ನನಗೆ ಹೋಗಲಾಗಲಿಲ್ಲ. ದೆಹಲಿಗೆ ಹೋಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು. ಯಡಿಯೂರಪ್ಪ ಅವರೇ ಉಳಿದ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tap to resize

Latest Videos

ಶಿರಾ, ರಾರಾ ಯಶಸ್ಸು ಕೇವಲ ಟ್ರೈಲರ್‌, ಇನ್ನೂ ಸಿನಿಮಾ ಬಾಕಿ ಇದೆ: ವಿಜಯೇಂದ್ರ

ಸಿದ್ದಾರಾಮಯ್ಯ, ಡಿ.ಕೆ. ಶಿವಕುಮಾರ್‌ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ವಿಪಕ್ಷದವರಿಗೆ ಹತಾಶೆ ಕಾಡುತ್ತಿದೆ. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು..? 

ನಮ್ಮ ಸರ್ಕಾರ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ವಲಸಿಗರು, ಮೂಲ ಅನ್ನೋ ಪ್ರಶ್ನೆ ನಮ್ಮಲ್ಲಿ ಇಲ್ಲ ಎಂದ ವಿಜಯೇಂದ್ರ, ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡಬೇಕೆಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರು ಹೇಳುವುದು ಸರಿ ಇದೆ. ಬೇರೆಯವರು ಹೇಳುವುದು ಸರಿ ಇದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ ಎಂದರು.

click me!