60 ವರ್ಷ ಮೇಲ್ಪಟ್ಟ ವೃದ್ಧರಿಗೆ ಇಲ್ಲಿದೆ ಗುಡ್ ನ್ಯೂಸ್.. ನೀವಿನ್ನು ಪರದಾಡುವ ಅವಶ್ಯಕತೆ ಇಲ್ಲ. ಏನದು ವಿಚಾರ..?
ಪೊನ್ನಂಪೇಟೆ (ನ.30): ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಪೊನ್ನಂಪೇಟೆಯಲ್ಲಿ ನಡೆದ ನೂತನ ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬೇಕಾದಷ್ಟುಹಣ ಇದೆ. ಕೊಡಗು ಜಿಲ್ಲಾಧಿಕಾರಿ ಖಾತೆಯಲ್ಲಿ 60 ಕೋಟಿ ಇದೆ.
ಬೆಳಗಾವಿ ಡಿಸಿ ಖಾತೆಯಲ್ಲಿ 250 ಕೋಟಿ ಇದೆ. ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಿ ಪೈಸೆಯಷ್ಟೂಹಣವಿಲ್ಲ ಅಂತ ಹೇಳ್ತಾರೆ.
ಹಾಸನ ಕೇಂದ್ರಾಡಳಿತ ಪ್ರದೇಶ ಅಲ್ಲ: ಜೆಡಿಎಸ್ ವಿರುದ್ಧ ಹರಿಹಾಯ್ದ ಸಚಿವ ಅಶೋಕ್ ...
ಆದರೆ, ನಮ್ಮ ಬಳಿ ಕೋಟಿ ಇದೆ. ಸರ್ಕಾರದಲ್ಲಿ ಆರ್ಥಿಕ ಸಮಸ್ಯೆ ಇಲ್ಲ ಎಂದರು. ಇನ್ನು ಮುಂದೆ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. 60 ವರ್ಷ ಆದವರಿಗೆ ಆಧಾರ್ ಮೂಲಕ ಪಿಂಚಣಿ ನೀಡಲಾಗುತ್ತದೆ. ಅರ್ಜಿಯನ್ನು ಬ್ರೋಕರ್ ಸಹಾಯವಿಲ್ಲದೆ ಹಾಗೂ ಪಿಂಚಣಿಯನ್ನು 15 ದಿನದ ಒಳಗಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.