ಕೊಡಗಿನ ದೀಪಾ ಬಾಸ್ತಿ ಕೂಡ ಬೂಕರ್‌ ಗೆದ್ದಿದ್ದಾರೆ, ಅವರನ್ನ ಯಾಕೆ ದಸರಾ ಉದ್ಘಾಟನೆಗೆ ಆಹ್ವಾನಿಸಿಲ್ಲ: ವಿಜಯೇಂದ್ರ ಪ್ರಶ್ನೆ!

Published : Aug 25, 2025, 04:53 PM IST
Mysuru Dasara Banu mushtaq

ಸಾರಾಂಶ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ಸರ್ಕಾರ ಅವರ ಸಾಧನೆಯನ್ನು ಗುರುತಿಸಿ ಆಹ್ವಾನ ನೀಡಲಾಗಿದೆ ಎಂದಿದೆ.

ಬೆಂಗಳೂರು (ಆ.25): ಬೂಕರ್‌ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ್‌ ಅವರಿಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯ ಈ ನಿರ್ಧಾರ ಪರಾಮರ್ಶಿಸಬೇಕು ಎಂದು ಹೇಳಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರದ ಮಂತ್ರಿಗಳು ದಸರಾ ಅನ್ನೋದು ನಾಡಹಬ್ಬ. ಬಾನು ಮಸ್ತಾಕ್‌ ರಾಜ್ಯಕ್ಕೆ ಗೌರವ ತಂದಿದ್ದಾರೆ ಆ ನಿಟ್ಟಿನಲ್ಲಿ ಅವರಿಗೆ ಉದ್ಘಾಟನೆಯ ಗೌರವ ನೀಡಲಾಗಿದೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಾನು ಮುಸ್ತಾಕ್‌ ಅವರ ಆಯ್ಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಅವರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್‌ ಹೆಸರು ಘೋಷಣೆ ಮಾಡಿದ್ದಾರೆ. ಬಾನು ಮುಸ್ತಾಕ್‌ ಅವರು ಹಿಂದೂ ಪರಂಪರೆ, ಹಿಂದೂ ಆಚಾರ ವಿಚಾರಗಳ ಮೇಲೆ ನಂಬಿಕೆ ಇಟ್ಟು ಬಂದರೆ ಸ್ವಾಗತ ಮಾಡುತ್ತೇವೆ. ಬಾನು ಮುಸ್ತಾಕ್‌ ಹಾಗೂ ಕೊಡಗಿನ ದೀಪಾ ಬಸ್ತಿ ಇಬ್ಬರಿಗೂ ಸೇರಿ ಬೂಕರ್ ಪ್ರಶಸ್ತಿ ಬಂದಿದೆ. ಆದರೆ, ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್‌ ಅವರನ್ನು ಮಾತ್ರ ಕರೆದಿದೆ. ಯಾಕೆ ಸಿದ್ದರಾಮಯ್ಯ ದೀಪಾ ಬಾಸ್ತಿ ಅವರನ್ನು ಕರೆದಿಲ್ಲ? ಯಾಕೆ ದೀಪಾ ಬಾಸ್ತಿ ಅವರನ್ನು ಕರೆಯಬೇಕು ಅಂತ ಸರ್ಕಾರಕ್ಕೆ ಅನಿಸಲಿಲ್ಲ. ಕೊಡಗಿನ ಬಗ್ಗೆ ಸಿಎಂಗೆ ಆಸಕ್ತಿ ಕಡಿಮೆಯೇ. ದಸರಾ ಧಾರ್ಮಿಕ ಸಂಪ್ರದಾಯ ಒಳಗೊಂಡ ಕಾರ್ಯಕ್ರಮ. ನಮಗೆ ಆಚಾರ ವಿಚಾರ, ಸಂಪ್ರದಾಯ ಎಲ್ಲವೂ ಗೊತ್ತಿದೆ ಎಂದು ಹೇಳಿದ್ದಾರೆ.

ಡಿಕೆಶಿ RSS ಗೀತೆ ಹೇಳಿದ್ದಕ್ಕೆ ಕ್ಷಮೆ ಕೇಳುವಂತೆ ಹರಿಪ್ರಸಾದ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿದವರನ್ನೇ ಬಚಾವ್ ಮಾಡಲು ಹೊರಟ ಪಕ್ಷ ಕಾಂಗ್ರೆಸ್. ಅಂತವರಿಂದ ದೇಶ ಭಕ್ತಿ ನಿರಿಕ್ಷೆ ಮಾಡಲು ಸಾಧ್ಯವಿಲ್ಲ. ಡಿಕೆಶಿ ನಮಸ್ತೆ ಸದಾ ವತ್ಸಲೆ ಹಾಡಿದ್ದಾರೆ ಅಂದ್ರೆ ಅವರಿಗೆ ಜ್ಞಾನೋದಯ ಆಗಿದೆ. ಕೆಲ‌ನಾಯಕರು RSS ಬಗ್ಗೆ ವಿಷ ಕಕ್ಕುತ್ತಿದ್ದಾರೆ. RSS ವಿಷ ಕಂಠನಂತೆ ಎಲ್ಲವನ್ನೂ ಸಹಿಸಿಕೊಂಡಿದೆ. ದೇಶವನ್ನ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಇದೆ. ಪ್ರಿಯಾಂಕ್ ಖರ್ಗೆ ಹೇಳಿಕೆ ಕೂಡ ಗಮನಿಸಿದ್ದೇನೆ ಎಂದು ಹೇಳಿದ್ದಾರೆ.

ಬಾನು ಮುಸ್ತಾಕ್‌ ಬರೆದ ಹಾರ್ಟ್‌ಲ್ಯಾಂಪ್‌ಗೆ ಬೂಕರ್‌ ಪ್ರಶಸ್ತಿ

1990 ಮತ್ತು 2023 ರ ನಡುವೆ ಬರೆಯಲಾದ ಹಾರ್ಟ್ ಲ್ಯಾಂಪ್‌ನ 12 ಕಥೆಗಳು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿನ ಮಹಿಳೆಯರು ಮತ್ತು ಹುಡುಗಿಯರ ಜೀವನವನ್ನು ವಿವರಿಸುತ್ತವೆ. ಪ್ರಗತಿಪರ ಕನ್ನಡ ಸಾಹಿತ್ಯದಲ್ಲಿ ವಕೀಲೆ ಮತ್ತು ಪ್ರಮುಖ ಧ್ವನಿಯಾಗಿರುವ, ಮಹಿಳಾ ಹಕ್ಕುಗಳ ಪ್ರಮುಖ ಪ್ರತಿಪಾದಕಿ ಮತ್ತು ಭಾರತದಲ್ಲಿ ಜಾತಿ ಮತ್ತು ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ಪ್ರತಿಭಟನಾಕಾರರಾಗಿದ್ದಾರೆ ಮತ್ತು ಸಹಾಯ ಕೋರಿ ಅವರ ಬಳಿಗೆ ಬಂದ ಮಹಿಳೆಯರ ಅನುಭವಗಳಿಂದ ಕಥೆಗಳನ್ನು ಬರೆಯಲು ಸ್ಫೂರ್ತಿ ಪಡೆದಿದ್ದಾರೆ. 2022 ರಲ್ಲಿ ಗೀತಾಂಜಲಿ ಶ್ರೀ ನಂತರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನ್ನಡ ಭಾಷೆಯಿಂದ ಅನುವಾದಿಸಲಾದ 'ಹಾರ್ಟ್ ಲ್ಯಾಂಪ್' ಪುಸ್ತಕವು ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಪುಸ್ತಕವಾಗಿದೆ. ದೀಪಾ ಬಾಸ್ತಿ ಈ ಪುಸ್ತಕವನ್ನು ಇಂಗ್ಲೀಷ್‌ಗೆ ಅನುವಾದ ಮಾಡುವ ಮೂಲಕ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ