ಗೌರಿ, ಗಣೇಶ ಹಬ್ಬಕ್ಕೆ ಕೆಎಂಎಫ್‌ ನಿಂದ ಬಂಪರ್‌ ಕೊಡುಗೆ

By Suvarna News  |  First Published Aug 16, 2020, 8:18 AM IST

ಇನ್ನೆನು ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿದೆ. ಇದೇ ಸಂದರ್ಭದಲ್ಲಿ  ಕೆಎಂಎಫ್ ಬಂಪರ್ ಆಫರ್ ನೀಡುತ್ತಿದೆ.


ಬೆಂಗಳೂರು (ಆ.16):  ಕೆಎಂಎಫ್‌ ಸ್ವಾತಂತ್ರ್ಯ ದಿನಾಚರಣೆ, ಗಣೇಶ, ಗೌರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಂಪರ್‌ ಕೊಡುಗೆ ನೀಡಿದೆ. ಇಂದಿನಿಂದ ಆ.30ರವರೆಗೆ ನಡೆಯಲಿರುವ ‘ನಂದಿನಿ ಸಿಹಿ ಉತ್ಸವ’ದಲ್ಲಿ ಶೇ.10 ರಷ್ಟುರಿಯಾಯಿತಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ.

"

Tap to resize

Latest Videos

ಶನಿವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಹಾಲಿನ ಗುಣಮಟ್ಟಕಾಯ್ದುಕೊಂಡು ಗ್ರಾಹಕರಿಗೆ ಸದಾ ಕಾಲ ಉತ್ತಮ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸಲು ಕೋಲಾರ ಹಾಲು ಒಕ್ಕೂಟದಿಂದ ಕಲ್ಯಾಣ ನಗರ, ಚನ್ನಸಂದ್ರದಲ್ಲಿ ಹೊಸದಾಗಿ ನಿರ್ಮಿಸಿರುವ ನಂದಿನಿ ಶೀತಲ ಕೊಠಡಿ, ನಂದಿನಿ ಪಾರ್ಲರ್‌ ಉದ್ಘಾಟಿಸಲಾಯಿತು.

ಆಯುರ್ವೇದಿಕ್‌ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ ..

ಯಾವುದಕ್ಕೆ ರಿಯಾಯ್ತಿ?:

ಕೆಎಂಎಫ್‌ ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವಂತೆ ಈ ಬಾರಿಯೂ ಶನಿವಾರ (ಆ.15)ದಿಂದ 30ರವರೆಗೆ ನಂದಿನಿ ಸಿಹಿ ಉತ್ಸವ ಆಯೋಜಿಸಿದೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗೌರಿ, ಗಣೇಶ ಹಬ್ಬದ ಅಂಗವಾಗಿ 15 ದಿನಗಳ ಕಾಲ ಮೈಸೂರು ಪಾಕ್‌, ಪೇಡಾ, ಕೇಸರ್‌, ಏಲಕ್ಕಿ ಪೇಡ, ಡ್ರೈಫ್ರೂಟ್ಸ್‌ರ್‍, ಚಾಕೋಲೆಟ್‌ ಬರ್ಫಿ, ಜಾಮೂನು, ರಸಗುಲ್ಲಾ ಸೇರಿದಂತೆ ಎಲ್ಲ ಸಿಹಿ ತಿಂಡಿಗಳನ್ನು ಶೇ.10ರಷ್ಟುರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಎಲ್ಲಾ ನಂದಿನಿ ಪಾರ್ಲರ್‌ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್‌ ಮಾರ್ಕೆಟ್‌ಗಳಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ರಾಜ್ಯಾದ್ಯಂತ 80 ರು.ಮೌಲ್ಯದ ನಂದಿನಿ ಪನ್ನೀರ್‌ 200 ಗ್ರಾಂ ಪ್ಯಾಕಿನೊಂದಿಗೆ 75 ರು.ಬೆಲೆಯ 100 ಗ್ರಾಂ ನಂದಿನಿ ಚೀಸ್‌ ಸ್ಲೈಸ್‌ ಪ್ಯಾಕ್‌ ಉಚಿತವಾಗಿ ಪಡೆಯಬಹುದು.

ನೂತನ ಉತ್ಪನ್ನಗಳ ಬಿಡುಗಡೆ:

ನಂದಿನಿ ಕೇಸರ್‌ ಕುಲಿ (10 ರು.), ನಂದಿನಿ 1.ಕೆ.ಜಿ. ಟಿನ್‌ ಪ್ಯಾಕ್‌(450 ರು.)ಅನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು ಎಂದು ಕೆಎಂಎಫ್‌ ಪ್ರಕಟಣೆ ತಿಳಿಸಿದೆ.
 

click me!