ರಾಷ್ಟ್ರಮಟ್ಟದ ಇಂಡಿಯಾ ಕ್ವಿಜ್‌: ವಿಜೇತ ಬೆಂಗಳೂರು ವಿದ್ಯಾರ್ಥಿಗೆ ಬಂಪರ್ ಪ್ರೈಸ್

Suvarna News   | Asianet News
Published : Aug 16, 2020, 08:04 AM IST
ರಾಷ್ಟ್ರಮಟ್ಟದ ಇಂಡಿಯಾ ಕ್ವಿಜ್‌:  ವಿಜೇತ ಬೆಂಗಳೂರು ವಿದ್ಯಾರ್ಥಿಗೆ ಬಂಪರ್ ಪ್ರೈಸ್

ಸಾರಾಂಶ

ರಾಷ್ಟ್ರ ಮಟ್ಟದ ಕ್ವಿಜ್ ಕಾಂಪಿಟೇಷನ್ನಲ್ಲಿ ಬೆಂಗಳೂರು ವಿದ್ಯಾರ್ಥಿಯೋರ್ವ ವಿಜೇತರಾಗಿದ್ದು, ಬಂಪರ್ ಬಹುಮಾನ ಪಡೆದುಕೊಂಡಿದ್ದಾರೆ.

ಬೆಂಗಳೂರು (ಆ.16): ಸಕ್ಸಸ್‌ ಫಿಲ್ಮ್ಸ್ ಇಂಡಿಯಾದ ‘ರಾಷ್ಟ್ರಮಟ್ಟದ ಇಂಡಿಯಾ ಕ್ವಿಜ್‌’ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ್ದ 13 ಸ್ಪರ್ಧಿಗಳ ಪೈಕಿ ಬೆಂಗಳೂರಿನ ವಿ.ವಿ.ಪುರಂ ಜೈನ್‌ ಕಾಲೇಜಿನ ವಿದ್ಯಾರ್ಥಿ ಮಿತ್ರ ಹೆಗಡೆ ವಿಜೇತರಾಗಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: 4000 ಹುದ್ದೆಗಳಿಗೆ ನೇಮಕಾತಿ .

ಈ ಪ್ರಶಸ್ತಿಯು 50 ಸಾವಿರ ರು. ನಗದು, ಗಿಫ್ಟ್‌ ಓಚರ್ಸ್‌ ಹಾಗೂ ಫಲಕ ಒಳಗೊಂಡಿದೆ. ಪ್ರಥಮ ರನ್ನರ್‌ ಅಪ್‌ ಪ್ರಶಸ್ತಿಯನ್ನು ಮಂಗಳೂರಿನ ಕಸ್ತೂರ್‌ ಬಾ ಮೆಡಿಕಲ್ ಕಾಲೇಜಿನ ಡಾ. ಸುಶಾಂತ್‌ ಮತ್ತು ಗುಜರಾತಿ ಚಿತ್ರನಟಿ ಹಿಮಾಂಗಿನಿ ಹಂಚಿಕೊಂಡಿದ್ದಾರೆ. ಈ ಪ್ರಶಸ್ತಿಯು 25 ಸಾವಿರ ರು. ನಗದು ಒಳಗೊಂಡಿದೆ.

ದ್ವಿತೀಯ ರನ್ನರ್‌ ಅಪ್‌ ಪ್ರಶಸ್ತಿಯು ತಿರುವನಂತಪುರದ ವೈದ್ಯೆ ಡಾ. ದೀಪ್ತಿ ಸ್ಯಾಮ್ಯುಯೆಲ…, ಬಹುರಾಷ್ಟ್ರೀಯ ಕಂಪೆನಿ ಕೆಮ್‌ ಟ್ರೀಟ್‌ ಇಂಡಿಯಾ ಲಿಮಿಟೆಡ್‌ನ ಮುಖ್ಯಸ್ಥ ಮುಕುಲ… ಗುಪ್ತಾ ಮತ್ತು ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಕೆಪಿಎಂಜಿಯ ಹಿರಿಯ ಪಾಲುದಾರ ನವೀನ್‌ ಅಗರವಾಲ್ ಪಾಲಾಗಿದೆ. ಈ ಮೂವರು ತಲಾ 15 ಸಾವಿರ ರು. ನಗದು ಸೇರಿದಂತೆ ವಿಜೇತರು ಓಚರ್ಸ್‌ ಹಾಗೂ ಫಲಕಗಳನ್ನು ಪಡೆದು ಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಸಲುವಾಗಿ ಶನಿವಾರ ಸುಮಾರು ಮೂರುವರೆ ತಾಸುಗಳ ಕಾಲ ನಾಲ್ಕು ಸುತ್ತಿನಲ್ಲಿ ನಡೆದ ಕ್ವಿಜ್‌ ಸ್ಪರ್ಧೆಯು ಕೊನೆಯ ತನಕ ಕುತೂಹಲ ಮೂಡಿಸಿತ್ತು.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!