ಕಟ್ಟಿಗೆ ಆಯುತ್ತಿದ್ದ ಮಹಿ​ಳೆಗೆ ತಗು​ಲಿದ ಬೇಟೆಗಾರರ ಗುಂಡು..!

Kannadaprabha News   | Asianet News
Published : Dec 06, 2020, 11:20 AM IST
ಕಟ್ಟಿಗೆ ಆಯುತ್ತಿದ್ದ ಮಹಿ​ಳೆಗೆ ತಗು​ಲಿದ ಬೇಟೆಗಾರರ ಗುಂಡು..!

ಸಾರಾಂಶ

ಬೇಟೆಯಾ​ಡಲು ಬಂದ​ವ​ರಿಂದ ಕೃತ್ಯ ಸಾಧ್ಯ​ತೆ| ಆರೋಪಿತರಿಗಾಗಿ ಬಲೆ ಬೀಸಿದ ಪೊಲೀಸರು| ಕಾರವಾರ ತಾಲೂಕಿನ ಗೋಯರ್‌ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ| ಈ ಕುರಿತಂತೆ ಕದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು| 

ಕಾರವಾರ(ಡಿ.06): ತಾಲೂಕಿನ ಗೋಯರ್‌ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ಆಯುತ್ತಿದ್ದ ಮಹಿಳೆಗೆ ಬೇಟೆಗಾರರು ಹಾರಿಸಿದ ಗುಂಡು ತಗುಲಿದ್ದು, ತೀವ್ರ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ರಸಿಕಾ ರಮೇಶ ದೇಸಾಯಿ ಗಾಯಗೊಂಡ ಮಹಿಳೆ. ಶುಕ್ರವಾರ ಬೆಳಗ್ಗೆ 7 ಗಂಟೆಯ ವೇಳೆಗೆ ಪತಿಯೊಂದಿಗೆ ಕಟ್ಟಿಗೆ ಆಯಲು ಅರಣ್ಯಕ್ಕೆ ತೆರಳಿದಾಗ ಬಂದೂಕಿನಿಂದ ಬಂದ ಗುಂಡು ರಸಿಕಾ ಅವರ ಎಡಭುಜಕ್ಕೆ ತಗುಲಿದೆ. ತೀವ್ರ ರಕ್ತಸ್ರಾವವಾಗಿ ಎಚ್ಚರ ತಪ್ಪಿ ಬಿದ್ದಿದ್ದ ಅವರನ್ನು ಪತಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ: ಸುಲಿಗೆಕೋರನ ಮೇಲೆ ಗುಂಡಿನ ದಾಳಿ

ಈ ಕುರಿತಂತೆ ಕದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೇಟೆಯಾಡಲು ಬಂದವರು ಪ್ರಾಣಿ ಎಂದು ಭಾವಿಸಿ ಮಹಿಳೆಗೆ ಗುಂಡು ಹೊಡೆದಿರುವ ಬಗ್ಗೆ ಅನುಮಾನವಿದ್ದು, ಆರೋಪಿತರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 

PREV
click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ