ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದರೆ ನೆಲಸಮ

Kannadaprabha News   | Asianet News
Published : Jan 13, 2020, 10:37 AM IST
ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದರೆ ನೆಲಸಮ

ಸಾರಾಂಶ

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿದಲ್ಲಿ ಮನೆ ನೆಲಸಮವಾಗಲಿದೆ. ಸರ್ಕಾರಿ ಜಾಗವನ್ನು ಬಳಸುವ ಮುನ್ನ ಇರಲಿ ಎಚ್ಚರ !

ಕೋಲಾರ  [ಜ.13]:  ಜಿಲ್ಲೆಯ ಕೆ.ಜಿ.ಹಳ್ಳಿ ಗ್ರಾಮದ ಸರ್ವೆ ನಂ. 73 ಸರ್ಕಾರಿ ಭೂಮಿಯಾಗಿದ್ದು ಇಲ್ಲಿ ಸರ್ಕಾರಿ ಶಾಲಾ ಸಮುಚ್ಚಯ, ಅಂಬೇಡ್ಕರ್ ಭವನ, ಸಮುದಾಯ ಭವನ ಇತರೆ  ಸರ್ಕಾರಿ ಇಲಾಖೆಗಳಿಗೆ ಸುಮಾರು 35 ಎಕರೆ ಪ್ರದೇಶವನ್ನು ನೀಡಲಾಗಿದೆ. ಈ ಸ್ಥಳವನ್ನು ಗುರುತಿಸುವ ಸಲುವಾಗಿ ಭೂಮಾಪನ ಇಲಾಖೆ ನಡೆಸುತ್ತಿರುವ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. 

ಸರ್ವೇ ವರದಿ ಬರುವ ತನಕ ಖಾಸಗಿ ವ್ಯಕ್ತಿಗಳು ಸರ್ಕಾರದ ವಶದಲ್ಲಿರುವ ಜಮೀನಿನಲ್ಲಿ ಪಾಯ ಹಾಕುವುದಾಗಲೀ, ಮನೆಕಟ್ಟುವುದಾಗಲಿ ಮಾಡಬಾರದೆಂದು ಮಾಲೂರು ತಾಲೂಕು ತಹಸೀಲ್ದಾರ್ ನಾಗವೇಣಿ ಗ್ರಾಮಸ್ಥರಿಗೆ ತಿಳಿಸಿದರು. 

ರಾಗಿಗೆ ಬೆಂಬಲ ಬೆಲೆ ಘೋಷಣೆ: ಕ್ವಿಂಟಾಲ್‌ಗೆಷ್ಟು..?...

ಖಾಸಗಿ ವ್ಯಕ್ತಿಗಳು ಸರ್ಕಾರದ ಜಮೀನಿನಲ್ಲಿ ಮನೆಗೆ ಪಾಯ ಹಾಕಿ ಮನೆ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಕಂದಾಯ ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. 

ಕೋಲಾರ: 'ಆಶ್ರಯ' ನೀಡಿದ್ದ ಮನೆ ರಾತ್ರೋ ರಾತ್ರಿ ಧ್ವಂಸ..!...

ಸಾರ್ವಜನಿಕರು ಯಾರೂ ಇಲ್ಲಿ ಮನೆ ಕಟ್ಟಬಾರದು. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ನಡೆದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಹಾಗೂ ಅವರು ಕಟ್ಟಿರುವ ಮನೆ ಮತ್ತು ಪಾಯಗಳನ್ನು ನೆಲಸಮಗೊಳಿಸುವುದು ಎಂದು ಎಚ್ಚರಿಸಿದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!