
ಚಾಮರಾಜನಗರ: ಸ್ಯಾಟ್‌ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯವನ್ನು ಮೊದಲ ಬಾರಿಗೆ ಗಡಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಾಣಿಗಮಂಗಲ ಗ್ರಾಮದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸ್ಯಾಟಲೈಟ್ ಬಿಎಸ್ಎನ್ಎಲ್ ಟವರ್ ಸಂಪರ್ಕವನ್ನು ಗಡಿ ಭಾಗದ ಗ್ರಾಮಸ್ಥರಿಗೆ ಚಾಲನೆ ನೀಡಿ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿದರು .
ಅತ್ಯಾಧುನಿಕ ತಂತ್ರಜ್ಞಾನದ ಇತ್ತೀಚಿನ ದಿನಗಳಲ್ಲಿ ಗಡಿ ಗ್ರಾಮಗಳಲ್ಲಿ ದೂರವಾಣಿ ಸಂಪರ್ಕಗಳಿಲ್ಲದೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಫಲರಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ತಾಲೂಕಿನಲ್ಲಿ ಪ್ರಧಾನಮಂತ್ರಿ ಆತ್ಮ ನಿರ್ಭಾರ್ ಅವಾಸ್ ಯೋಜನೆಯಡಿ ಮೇಡ್ ಇನ್ ಇಂಡಿಯಾ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿರುವ ಸ್ಯಾಟಲೈಟ್ ನೆಟ್‌ವರ್ಕ್ ಸೌಲಭ್ಯ ಇದಾಗಿದೆ.
ನೆಟ್ವರ್ಕ್ ಇಲ್ಲದೆ ವಂಚಿತರಾಗಿರುವ ಗ್ರಾಮಗಳಿಗೆ ನೆಟ್ವರ್ಕ್ ಸೌಲಭ್ಯ ಕಲ್ಪಿಸಲು ಉತ್ತಮ ಮಾರ್ಗವಾಗಿದೆ ಬಿಎಸ್ಎನ್ಎಲ್ ನೆಟ್‌ವರ್ಕ್ ಸೌಲಭ್ಯ ಈ ಗ್ರಾಮಕ್ಕೆ ದೊರಕಿಸಿ ಕೊಡುವಲ್ಲಿ ಅಧಿಕಾರಿಗಳ ಕಾರ್ಯವೈಖರಿ ಶ್ಲಾಘನೀಯ ವಿಚಾರವಾಗಿದೆ. ಗ್ರಾಮಸ್ಥರು ವಿವಿಧ ಸೌಲಭ್ಯಗಳನ್ನು ಪಡೆಯಲು ನೆಟ್‌ವರ್ಕ್ ಸಮಸ್ಯೆಯಿಂದ ಇತರೆ ಗ್ರಾಮಗಳಿಗೆ ತೆರಳಿ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದ ಇತ್ತೀಚಿನ ದಿನಗಳಲ್ಲಿ ಉತ್ತಮ ಕೆಲಸವಾಗಿದೆ ಎಂದರು.
ಬಿಎಸ್ಎನ್ಎಲ್ ಎಜಿಎಂ ವ್ಯವಸ್ಥಾಪಕ ಶರತ್ ಕುಮಾರ್ ಮಾತನಾಡಿ ಬಿಎಸ್ಎನ್ಎಲ್ ವತಿಯಿಂದ ಉತ್ತಮ ಸೌಲಭ್ಯ ನೀಡುವ ಗುರಿ ಹೊಂದಿದ್ದೇವೆ , ಅರಣ್ಯ ಇಲಾಖೆಯವರು ನಮಗೆ ಮುಕ್ತಾವಕಾಶ ಕಲ್ಪಿಸಿದರೆ ಎಲ್ಲಾ ಗ್ರಾಮಗಳಿಗೂ ಹನೂರು ತಾಲೂಕಿನಲ್ಲಿ ನೆಟ್ವರ್ಕ್ ಸೌಕರ್ಯ ಒದಗಿಸಲಾಗುವುದು. ಶಾಸಕ ಎಂ.ಆರ್. ಮಂಜುನಾಥ್ ಅವರ ಅವಿರತ ಶ್ರಮದಿಂದ ಗಾಣಿಗಮಂಗಲಕ್ಕೆ ಬಿಎಸ್ಎನ್ಎಲ್ ಸ್ಯಾಟಲೈಟ್ ನೆಟ್‌ವರ್ಕ್ ಕಲ್ಪಿಸಲು ಸಂಪೂರ್ಣ ಸಹಕಾರ ನೀಡಿದ್ದಾರೆ ನಾಗರಿಕರು ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು.
ಇದನ್ನೂ ಓದಿ: ಒಂದು ಕಪ್ ಚಹಾಕ್ಕಿಂತಲೂ ಕಡಿಮೆ ಬೆಲೆ, ಜಿಯೋ ಬಳಕೆದಾರರಿಗೆ 10GB ಡೇಟಾ ಸೂಪರ್ ಆಫರ್
ಇದೇ ಸಂದರ್ಭದಲ್ಲಿ ಮುಖಂಡರಾದ ರವಿ ಬಾಬು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಎಸ್.ಆರ್. ಮಹದೇವ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್ವರ್ಕ್?