ವೀರಶೈವ ಸಮಾಜದ ಕೇಂದ್ರ ಬಿಂದು ಮುರುಘಾಶ್ರೀ: ಬಿ.ಎಸ್. ಯಡಿಯೂರಪ್ಪ ಅಭಿಮತ

Kannadaprabha News   | Kannada Prabha
Published : Sep 28, 2026, 11:25 AM IST
BS Yediyurappa

ಸಾರಾಂಶ

ರಿಪ್ಪನ್‍ಪೇಟೆಯಲ್ಲಿ ನಡೆದ ಶ್ರೀಬಸವೇಶ್ವರ ವೀರಶೈವ ಸಮಾಜದ ಅಭಿನಂದನಾ ಕಾರ್ಯಕ್ರಮ ಹಾಗೂ ಆನಂದಪುರಂ ಶ್ರೀಗಳ ಅಮೃತ ಮಹೋತ್ಸವದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದ್ದರು. ಕೇವಲ ಮಾತನಾಡುವುದಕ್ಕಿಂತ ಅಭಿವೃದ್ಧಿ ಕಾರ್ಯಗಳು ಸಾಧನೆಯಾಗಬೇಕು ಎಂದು ಅವರು ಕರೆ ನೀಡಿದರು. ಶಾಸಕ ಬೇಳೂರು, ಸಂಸದ ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು, ಮಠಮಾನ್ಯಗಳ ಕೊಡುಗೆಯನ್ನು ಸ್ಮರಿಸಿದರು.

ರಿಪ್ಪನ್‍ಪೇಟೆ: ಧರ್ಮ ಪ್ರಚಾರದ ಮೂಲಕ ಸಮಾಜವನ್ನು ಒಗ್ಗೂಡಿಸುವುದರೊಂದಿಗೆ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಶ್ರೀಗಳ ಕಾರ್ಯ ಪ್ರಶಂಸನೀಯ. ನಾವು ಮಾತನಾಡುವುದೇ ಸಾದನೆಯಾಗದೆ ಮಾಡಿದ ಆಭಿವೃದ್ಧಿ ಕಾರ್ಯಗಳು ಸಾಧನೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ರಿಪ್ಪನ್‍ಪೇಟೆ ಶ್ರೀಬಸವೇಶ್ವರ ವೀರಶೈವ ಸಮಾಜ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಜಗದ್ಗುರುಗಳ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಸಮಾಜ ಬಾಂಧವರ ಅಭಿನಂದನೆ ಸ್ವೀಕರಿಸಿ ಮಾತನಾಡಿ ಜನಪರ ಹೋರಾಟದೊಂದಿಗೆ ಬದುಕಿದವರು.ಸಾಮಾನ್ಯ ಜನರ ಪ್ರೀತಿ ವಿಶ್ವಾಸವೇ ನನ್ನ ಹೋರಾಟಕ್ಕೆ ಶಕ್ತಿ ಎಂದ ಅವರು ಮಕ್ಕಳಿಗೆ ಶಿಕ್ಷಣ ಕೊಡುವುದರೊಂದಿಗೆ ವಿದ್ಯಾವಂತರನ್ನಾಗಿ ಮಾಡಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಂತೆ ಕರೆ ನೀಡಿದರು.

ಧರ್ಮನಿಷ್ಟೆ ಉತ್ಸಾಹ ಕಾಳಜಿಯಿಂದ ಯುವಕರಲ್ಲಿ ಇತಿಹಾಸ ತತ್ವ ಪ್ರಚಾರಕ್ಕಾಗಿ ಕಾರ್ಯನಿರ್ವಹಿಸಿದ ನನಗೆ ಸಮಾಜದವರು ನೀಡಲಾದ ಅಭಿನಂದನಾ ಆಶೀರ್ವಾದ ವಿನಮ್ರವಾಗಿ ಸ್ವಿಕರಿಸಿರುವುದಾಗಿ ಹೇಳಿದರು.

ಬಿಎಸ್‌ವೈ ನಮಗೆ ರಾಜಕೀಯ ಗುರುಗಳು ಎಂದ ಬೇಳೂರು

ಮುಖ್ಯ ಅತಿಥಿಗಳಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಧಾರ್ಮಿಕವಾಗಿ ಎಲ್ಲಾ ಸಮುದಾಯದವರನ್ನು ಸಂಘಟಿಸುವ ಮೂಲಕ ಸರಳವಾದ ನಡೆದಾಡುವ ದೇವರು ಆನಂದಪುರಂ ಶ್ರೀಗಳು ಆದರ್ಶಗಳು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿ ಅನಂದಪುರಂ ಶ್ರೀಗಳು 75 ವರ್ಷ ತಮ್ಮ ಅನುಭವ ತ್ಯಾಗ ಸಮಾಜದ ಚಿಂತನೆ ಶಿಕ್ಷಣ ಸಂಸ್ಕಾರ ಕಳಕಳಿಯಿಂದಾಗಿ ಸಮಾಜದ ಯುವಜನರು ಸಮಾಜದಲ್ಲಿ ಸಮಾನತೆ ಸೇವಾ ಕಾರ್ಯ ಪ್ರತಿಪಾದಿಸುತ್ತಾ ಬಂದಿದ್ದಾರೆ, ಸಮಾಜದಲ್ಲಿ ಎಲ್ಲರು ಒಂದೆ ಅಭಿವೃದ್ಧಿ ಚಿಂತನೆ ಜನ ಸಾಮಾನ್ಯರ ರೈತರ ದ್ವನಿಯಾಗಿ ಮಠ ಮಂದಿರಗಳ ಬೆಳವಣಿಗಗೆ ಹೆಚ್ಚು ಅನುದಾನವನ್ನು ಕೊಟ್ಟ ಕೀರ್ತಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಹೇಳಿ ವ್ಯಕ್ತಿ ಶಕ್ತಿಯಾಗಿದ್ದವರು ಎಂದು ಹೇಳುವ ಮೂಲಕ ನಮಗೆ ರಾಜಕೀಯ ಗುರುಗಳು ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ಜಗಜ್ಯೋತಿ ಬಸವಣ್ಣನವರು 12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಹೇಳಿದಂತೆ ಸಮಾಜದ ಏಳಿಗೆ ಹಾಗೂ ನಾವೆಲ್ಲರೂ ಒಟ್ಟಾಗಿ ಸಾಗುವ ಮೂಲಕ ಕಾಯಕ ನಿರಂತರವಾಗಿರಲಿ. ಯಡಿಯೂರಪ್ಪನವರು ಮಠಮಾನ್ಯಗಳ ಪುನಶ್ಚೇತನಕ್ಕೆ ಅವರ ಕೊಡುಗೆ ಅನನ್ಯವಾಗಿದೆ. ಯಾವುದೇ ಜಾತಿ ಮತ ಪಂಥಗಳ ಭೇದಗಳಿಲ್ಲದೆ ಎಲ್ಲಾ ಸಮುದಾಯವನ್ನು ಗೌರವಿಸಿದ ಕೀರ್ತಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಲಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಭಾಗವಹಿಸಿ ಮಾತನಾಡಿ ರೈತನಾಯಕ ಯಡಿಯೂರಪ್ಪನವರು ತಮ್ಮ ಅಧಿಕಾರವಧಿಯಲ್ಲಿ ಕೊಟ್ಟ ಕೊಡುಗೆ ಅಪಾರ. ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ. ಜನರ ಪ್ರೀತಿ ವಿಶ್ವಾಸ ಗಳಿಕೆಯೇ ಮುಖ್ಯ.ಅನ್ನದಾನರ ಮುಖದಲ್ಲಿ ನಗು ನೋಡುವುದೇ ನಮ್ಮ ಗುರಿಯಾಗಿದೆ ಎಂದರು.

ಆನಂದಪುರಂ ಮುರುಘಾಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ 75 ವರ್ಷದ ಅಮೃತ ಮಹೋತ್ವವ ಸಂದರ್ಭದಲ್ಲಿ ವೀರಶೈವ ಸಮಾಜ ಬಾಂಧವರ ಗೌರವಂದನೆ ಸ್ವೀಕರಿಸಿ ಅಶೀರ್ವಚನ ನೀಡಿದ ಶ್ರೀಗಳು ರಿಪ್ಪನ್‍ಪೇಟೆ ವೀರಶೈವ ಲಿಂಗಾಯಿತ ಸಮಾಜ ಮುರುಘಾಮಠದ ರಾಜದಾನಿಯಿದ್ದಂತೆ. ಕೆಳದಿ ಶಿವಪ್ಪನಾಯಕ ಮತ್ತು ಚನ್ನಮ್ಮಾಜಿಯವರು ಹೋರಾಡಿದ ಈ ಮಲೆನಾಡಿನ ಪುಣ್ಯ ಭೂಮಿಯಿದು. ಗುರುಗಳಿಗೆ ಮಾತೃ ಗರ್ಭದಿಂದ ಹೊರ ಬಂದ ದಿನ ಜನ್ಮದಿನವಾಗುವುದಿಲ್ಲ. ತಮ್ಮ ಪಟ್ಟಾಧಿಕಾರದ ದಿನವನ್ನು ಹುಟ್ಟಿದ ದಿನವನ್ನಾಗಿ ಆಚರಿಸಿಕೊಳ್ಳುತ್ತೇವೆ ಎಂದ ಅವರು ನಮಗೆ ಸಮಾಜದವರು ಬಹು ಪ್ರೀತಿಯಿಂದ ಆಚರಿಸುತ್ತಿರುವ ಅಮೃತ ಮಹೋತ್ವವವು 49 ವಸಂತಗಳಾಗಿವೆ ಎಂದು ಮಾರ್ಮಿಕವಾಗಿ ನುಡಿದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮೀಜಿ ಉಪದೇಶಾಮೃತ ನೀಡಿ ಮೋದಿ ಬಿಟ್ಟರೆ ಅಭಿವೃದ್ಧಿಯ ಹರಿಕಾರ ರಾಘವೇಂದ್ರ, ದಾನಕೊಡುವುದರಲ್ಲಿ ಬೇಳೂರು, 180 ಜನಸ್ವಾಮಿಗಳನ್ನು ಶಿಕಾರಿಪುರದಲ್ಲಿ ಸಂಘಟಿಸಿ ಕವಿಯತ್ರಿ ಅಕ್ಕಮಹಾದೇವಿ ಅನುಭವ ಮಂಟಪ ಕಟ್ಟಿದವರು ವಿಶ್ವಗುರುಬಸವಣ್ಣನವರಾದರೆ ಅನುಭವ ಮಂಟಪದ ಪೀಠ ಏರಿದವರು ಅಲ್ಲಮಪ್ರಭು ನಮ್ಮ ಜಿಲ್ಲೆಯವರು . ಪ್ರಪ್ರಥಮಭಾರಿ ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾದವರು ಕುವೆಂಪು. ನಾಲ್ಕು ಭಾರಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಕೀರ್ತಿ ಯಡಿಯೂರಪ್ಪನವರದು. ಅಪ್ಪನ ಹೆಗಲ ಮೇಲೆ ಏರಿ ಜಾತ್ರೆ ಸಂಭ್ರಮಿಸಿದ ಮಗುವನ್ನು ಕೇಳಿದರೆ ಜಾತ್ರೆಯೆ ಸ್ವರ್ಗ ಎಂದು ಸಂಭ್ರಮಿಸಿದ ಮಗುವಿಗೆ ಅಪ್ಪನ ಕೈ ತಪ್ಪಿಸಿಕೊಂಡರೆ ಅದೇ ನರಕವಾಗಿ ಗೋಚರಿಸುತ್ತದೆ, ಹಾಗೇಯೆ ಗುರು ಪೀಠವನ್ನು ನಂಬಿ ಕೈ ಹಿಡಿದರೆ ಜೀವನ ಪಾವನ ಅದೇ ಕೈ ಬಿಟ್ಟರೆ! ಎಂಬುದನ್ನು ಅರಿತು ಕೊಂಡಲ್ಲಿ ಜೀವನ ಸಾರ್ಥಕವಾಗುವುದೆಂದ ಅವರು ಮಲ್ಲಗೌಡರನ್ನು ಸುಸಂಸ್ಕೃತರನ್ನಾಗಿ ಮಾಡಿ ನಾಡಿಗೆ ಪರಿಚಯಿಸಿದ ಕೀರ್ತಿ ಶ್ರೀಗಳಿಗೆ ಸಲ್ಲಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಡಾ.ಕೆ.ಬಿ.ಕ ಮಲಾಕ್ಷಪ್ಪ, ಉಪಾಧ್ಯಕ್ಷ ಜಿ.ಎಂ.ದುಂಡರಾಜಪ್ಪಗೌಡ, ಎಂ.ಆರ್.ಶಾಂತವೀರಪ್ಪಗೌಡ, ಶಿವಮೊಗ್ಗ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ, ಅಖಿಲಭಾರತ ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಉಮೇಶ್, ಹಾಜರಿದ್ದರು.

PREV
Read more Articles on
click me!

Recommended Stories

Commonwealth ಪವರ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ವಿಜಯಪುರ ಯುವಕ
ಬೆಂಗಳೂರು ಉಪನಗರ ರೈಲು ಯೋಜನೆ 4 ಕಾರಿಡಾರ್‌ಗಳ ಕಾಮಗಾರಿ ಬಿರುಸಿನ ವೇಗ, ₹986 ಕೋಟಿ ಟೆಂಡರ್ ಆಹ್ವಾನ