ಅಕ್ಕ, ತಮ್ಮ ಆತ್ಮಹತ್ಯೆ: 2 ದಿನದ ನಂತರ ಸಿಕ್ತು ಮೃತದೇಹ

Suvarna News   | Asianet News
Published : Jan 07, 2020, 02:30 PM IST
ಅಕ್ಕ, ತಮ್ಮ ಆತ್ಮಹತ್ಯೆ: 2 ದಿನದ ನಂತರ ಸಿಕ್ತು ಮೃತದೇಹ

ಸಾರಾಂಶ

ಅಕ್ಕ ಹಾಗೂ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ. ಎರಡು ದಿನಗಳ ನಂತರ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಗದಗ(ಜ.07): ಅಕ್ಕ ಹಾಗೂ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ. ಎರಡು ದಿನಗಳ ನಂತರ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ವಿಷ ಸೇವಿಸಿ ಅಕ್ಕ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ಗದಗ ನಗರದ ರಿಂಗ್ ರೋಡ್ ಬಳಿಯ ಮುಂಡರಗಿ ರಸ್ತೆಯ ಜಮೀನಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ತಮ್ಮ ಈರಣ್ಣ ಗಂಟಿ 35, ಅಕ್ಕ ಅನಸೂಯಾ ತುಬಾಕಿ 38 ಆತ್ಮಹತ್ಯೆ ಮಾಡಿಕೊಂಡವರು.

ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಿಷೇಧ: ಕಲ್ಲುಕುಟಿಕರ ಹೊಟ್ಟೆಗೆ ಪೆಟ್ಟು..!

ಮೃತರಿಬ್ಬರೂ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ನಿವಾಸಿಗಳಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜಮೀನು ಮಾಲೀಕರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್ಪಿ ಪ್ರಲ್ಹಾದ್, ಪಿಎಸ್ಐ ಎಂ ಜಿ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಳ ಹೆತ್ತು ಲವರ್ ಜೊತೆ ಓಡಿಹೋದ ಪತ್ನಿ, ಮಕ್ಕಳನ್ನೇ ಮಾರೋಕೆ ಹೊರಟ ತಂದೆ..!

PREV
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು