ಬೆಂಗಳೂರು ಹೊರವಲಯದ 1,500 ಎಕರೆಯಲ್ಲಿ ಬೃಹತ್ 'ನಗರ ವನ' ನಿರ್ಮಾಣ; ಈ ಪ್ರದೇಶಗಳ ಭೂಮಿಗೆ ಬಂಪರ್ ಬೆಲೆ!

Sathish Kumar KH   | Kannada Prabha
Published : Oct 09, 2026, 08:50 AM IST
Bengaluru Nagaravana Ramalingareddy

ಸಾರಾಂಶ

ಬೆಂಗಳೂರಿನ ಹೊರವಲಯದ 1500 ಎಕರೆ ಪ್ರದೇಶದಲ್ಲಿ 'ನಗರ ವನ' ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿದ್ದು, ಮುಖ್ಯಮಂತ್ರಿಗಳ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಈ ಯೋಜನೆಯು ಸಂಪೂರ್ಣ ಪರಿಸರಯುಕ್ತವಾಗಿದ್ದು, ಔಷಧೀಯ ಸಸ್ಯಗಳನ್ನು ಬೆಳೆಸಲಾಗುವುದು.

ಬೆಂಗಳೂರು (ಅ.09): ಬೆಂಗಳೂರು ನಗರದ ಹೊರವಲಯದ 1500 ಎಕರೆ ಪ್ರದೇಶದಲ್ಲಿ ನಗರ ವನ ಪ್ರಾಜೆಕ್ಟ್ ಸಿದ್ಧಪಡಿಸಿದ್ದು ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿ ಮುಖ್ಯಮಂತ್ರಿಯವರ ಬಳಿ ಅನುಮೋದನೆಗಾಗಿ ಇದೆ. ಬೆಂಗಳೂರು ನಗರ ವಾಸಿಗಳಿಗೆ ನಿಜಕ್ಕೂ ಸಿಹಿ ಸುದ್ದಿಯಾಗಲಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬನ್ನೇರುಘಟ್ಟ ರಸ್ತೆಯ ಎಎಂಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ 72ನೆಯ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಗರದಲ್ಲಿ ಅಂದಾಜು 1.40 ಕೋಟಿ ಜನಸಂಖ್ಯೆಯಿದ್ದು ಉತ್ತಮ ಗಾಳಿ ಮಳೆಗೆ ಪ್ರಮುಖ ಆಧಾರವಾಗಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾತ್ರ ಇದೆ. ನಗರದೊಳಗಿನ ಜಾರಕ ಬಂಡೆ, ಪಣತ್ತೂರ್, ಮಂಡೂರು, ಕಲ್ಕೆರೆ, ಹಾಗೂ ಹೆನ್ನಾಗರ ಸೇರಿ ಸುಮಾರು 1500 ಎಕರೆ ಪ್ರದೇಶದಲ್ಲಿ ನಗರ ವನ ಪ್ರಾಜೆಕ್ಟ್ ಸಿದ್ಧಪಡಿಸಿದ್ದು ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿ ಸಿಎಂ ಬಳಿ ಅನುಮೋದನೆಗೆ ಇದೆ ಎಂದರು.

ಸಂಪೂರ್ಣ ಪರಿಸರಯುಕ್ತ

ನಗರವನ ಪರಿಕಲ್ಪನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಸಂಪೂರ್ಣ ಪರಿಸರಯುಕ್ತವಾಗಿರುತ್ತದೆ. ರಸ್ತೆ, ಕಟ್ಟಡ, ಡಾಂಬರು ಮುಕ್ತ ಅಷ್ಟೇ ಅಲ್ಲ, ಅಲ್ಲಿರುವ ನೀಲಗಿರಿ, ಸರ್ವೆ, ಅಕೇಸಿಯಾ ಮರಗಳನ್ನು ತೆರವು ಮಾಡಿ ಶುದ್ಧ ಗಾಳಿ ನೀಡುವ, ಮಳೆಯನ್ನು ಆಕರ್ಷಿಸುವ, ಪ್ರಾಣಿ ಪಕ್ಷಿ ಸಂಕುಲಗಳಿಗೆ ಉಪಯುಕ್ತವಾಗುವ ಮರಗಳನ್ನು ನೆಡಲಾಗುವುದು. ಇದರ ಜೊತೆಗೆ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ನೆಟ್ಟು ಪೋಶಿಸಲಾಗುವುದು. ನಗರದಲ್ಲಿರುವ ಸಣ್ಣ ಪುಟ್ಟ ಪಾರ್ಕ್ ಗಳನ್ನು ನೈಸರ್ಗಿಕವಾಗಿ ಉನ್ನತೀಕರಿಸಲಾಗುವುದು ಎಂದರು.

ಎಎಂಸಿ ಕಾಲೇಜಿನ ಮುಖ್ಯಸ್ಥ ಡಾ.ಕೆ.ಆರ್.ಪರಮಹಂಸ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಗೀತಾ ಪರಮಹಂಸ ಅರಣ್ಯ ಇಲಾಖೆಯ ವರಿಷ್ಟ ಅಧಿಕಾರಿಗಳಾದ ಮೀನಾಕ್ಷಿ ನೇಗಿ, ಕುಮಾರ್ ಪುಷ್ಕರ್, ಬಿಸ್ವಜಿತ್ ಮಿಶ್ರ, ಮನೋಜ್ ಕುಮಾರ್ ಚಿತ್ರ ನಿರ್ಮಾಣ ತಂಡ ಮತ್ತು ಕಾರ್ಯ ಪಡೆ ಯೋಧರನ್ನು ಸನ್ಮಾನಿಸಲಾಯಿತು. ಎಸಿಎಫ್ ಗಣೇಶ್, ಬಾಬುರೆಡ್ಡಿ ಇದ್ದರು.

PREV
Read more Articles on
click me!

Recommended Stories

ಕೊಟ್ಟೂರು ಪಟ್ಟಣಕ್ಕೆ ವರ್ತುಲ ರಸ್ತೆ ಭಾಗ್ಯ: ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆ ಪೂರ್ಣ, ಟ್ರಾಫಿಕ್ ಕಿರಿಕಿರಿಗೆ ಮುಕ್ತಿ!
'ಕೆಲವರು ಟ್ರೆಡಿಷನ್‌ಗೆ ಗುಳೇ ಹೋಗ್ತಾರೆ' ಹೇಳಿಕೆಗೆ ಡಿಸಿಎಂ ಡಾ ಜಿ ಪರಮೇಶ್ವರ್ ಸ್ಪಷ್ಟನೆ