ಚುಂಚನಗಿರಿಯಲ್ಲಿ ವಧು-ವರರ ಸಮಾವೇಶ: 250 ವಧುಗಳಿಗೆ, 11,750 ವರರ ನೋಂದಣಿ!

By Suvarna NewsFirst Published Nov 14, 2022, 4:23 PM IST
Highlights

ಆದಿಚುಂಚನಗಿರಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಬೃಹತ್ ವಧು-ವರರ ಸಮಾವೇಶ ಆಯೋಜಿಸಲಾಗಿತ್ತು.  ನೋಂದಣಿ ಮಾಡಿದವರ ಪೈಕಿ 250 ಮಂದಿ ಹೆಣ್ಣು ಮಕ್ಕಳು, ಹಾಗೂ 11,750 ಮಂದಿ ಯುವಕರಿದ್ದಾರೆ. 

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ನ.14): ಈಗಿನ ಕಾಲದಲ್ಲಿ ಮದುವೆ ಎಂಬುದೇ ದೊಡ್ಡ ಸವಾಲು. ಮಧ್ಯಮವರ್ಗ, ಅದರಲ್ಲೂ ರೈತಾಪಿ ಯುವಕರಿಗೆ ಹೆಣ್ಣು ಕೊಡಲು ಮೂಗು ಮುರಿಯುವವರೆ ಹೆಚ್ಚು. ಹೆಣ್ಣೆತ್ತವರ ನಿರೀಕ್ಷೆ ತಲುಪಲಾಗದೆ ಅದೆಷ್ಟೋ ಯುವಕರು ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಅಂತಹ ಒಬ್ಬಂಟಿ ಯುವಕರಿಗೆ ಬಾಳ ಸಂಗಾತಿ ಸಿಗಲಿ ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಬೃಹತ್ ವಧು-ವರರ ಸಮಾವೇಶ ಆಯೋಜಿಸಲಾಗಿತ್ತು. ವಧು-ವರರ ಅನ್ವೇಷಣೆಗಾಗಿ ಬಂದಿದ್ದ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತು ನೋಂದಣಿ ಮಾಡಿಕೊಂಡರು. ವಿಪರ್ಯಾಸ ಏನಂದ್ರೆ ಬರೋಬ್ಬರಿ 11,750 ಹುಡುಗರು ವಧು ಅನ್ವೇಷಣೆಗೆ ಹೆಸರು ನೋಂದಾವಣೆ ಮಾಡಿಕೊಂಡರೆ  250 ಹುಡುಗಿಯರು ವರಾನ್ವೇಷಣೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಭಾನುವಾರ ರಾಜ್ಯಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶ ನಡೆಯಿತು. ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟ ಆಶ್ರಯದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಜನರು ವಧು-ವರರ ಆಯ್ಕೆಗೆ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಬಂದವರಿಗೆ ಉಚಿತ ಊಟ ವಸತಿ ಮತ್ತು ವಾಹನ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶಕ್ಕೆ ಬಂದಿದ್ದವರ ಪೈಕಿ ಯುವಕರೇ ಹೆಚ್ಚಾಗಿದ್ದು, ಅಲ್ಲಿಯೂ ವಧುಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ಮಂಡ್ಯ ಜಿಲ್ಲೆ‌ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದವರ ಪೈಕಿ ಸುಮಾರು 12 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮಠದ ಮಾಹಿತಿ ಕೇಂದ್ರ ಎದುರು ಸಾಲುಗಟ್ಟಿ ನಿಂತಿದ್ದ ಯುವಕರು ಬಾಳಸಂಗಾತಿ ಆಯ್ಕೆಗೆ ರಿಜಿಸ್ಟರ್ ಮಾಡಿಕೊಂಡರು. ನೋಂದಣಿ ಮಾಡಿದವರ ಪೈಕಿ 250 ಮಂದಿ ಹೆಣ್ಣು ಮಕ್ಕಳು, ಹಾಗೂ 11,750 ಮಂದಿ ಯುವಕರಿದ್ದಾರೆ. ಇದರಿಂದ ವಧುವಿಗಾಗಿ ನೋಂದಣಿ‌ ಮಾಡಿಕೊಂಡ ಸಾವಿರಾರು ಯುವಕರಿಗೆ ಮತ್ತೆ ನಿರಾಶೆ ಉಂಟಾಗಿದೆ.

ಡಿ.12ರಂದು ಸರ್ವಧರ್ಮ ಸಾಮೂಹಿಕ ವಿವಾಹ
ಬೀಳಗಿ: ತಾಲೂಕಿನ ರೊಳ್ಳಿ ಪುನರ್ವಸತಿ ಕೇಂದ್ರದಲ್ಲಿ ಸರ್ವ ಧರ್ಮದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ತೃತೀಯ ಬಾರಿಗೆ 1008 ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಡಿ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಿನ ಹಿರಿಯ ಮುಖಂಡರಾದ ಶಿವಾನಂದ ನಿಂಗನೂರ ತಿಳಿಸಿದರು.

ಬೀಳಗಿ ಕ್ರಾಸ್‌ ಬಳಿಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ 1994ರಲ್ಲಿ 51 ಸಾಮೂಹಿಕ ವಿವಾಹಗಳನ್ನು, 2012ರಲ್ಲಿ ದ್ವಿತೀಯ ಬಾರಿಗೆ 201 ಸಾಮೂಹಿಕ ವಿವಾಹಗಳನ್ನು ಮಾಡಲಾಗಿದೆ. ಸಮಸ್ತ ತಾಲೂಕಿನ ಹಾಗೂ ರೊಳ್ಳಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ 2022 ಡಿ. 12ರಂದು ತೃತೀಯ ಬಾರಿಗೆ 1008 ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಲಿವೆ. ಸಕಲ ಸಿದ್ಧತೆಗಾಗಿ 24 ಸಮಿತಿಗಳನ್ನು ರಚನೆ ಮಾಡಲಾಗಿದೆ.

ಗಂಡಿನ ಮನೆಯವರು ತಂದ ಲೆಹೆಂಗಾ ಮೆಚ್ಚದ ವಧು: ನಿಂತ ಮದುವೆ

ಕಾರ್ಯಕ್ರಮದಲ್ಲಿ ವಿಜಯಪುರದ ಶ್ರೀಸಿದ್ಧೇಶ್ವ ಸ್ವಾಮಿಗಳು, ಅವಧೂತ ವಿನಯ ಗುರುಜಿ, ಗವಿಸಿದ್ಧೇಶ್ವರ ಶ್ರೀಗಳು ಕೊಪ್ಪಳ, ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಸುತ್ತೂರು, ಸಿದ್ಧಲಿಂಗೇಶ್ವರ ಸ್ವಾಮಿಗಳು ಶ್ರೀಸಿದ್ದಗಂಗಾಮಠ ತುಮಕೂರು, ಡಾ.ತೊಂಟದ ಸಿದ್ದರಾಮ ಸ್ವಾಮಿಗಳು ತೊಂಟದಾರ್ಯಮಠ ಗದಗ, ಶಿವಾನಂದ ಶಿವಯೋಗಿಗಳು ರಾಜೇಂದ್ರ ಸ್ವಾಮಿಗಳು ಕೋಡಿಮಠ, ಶ್ರೀಮನ್ನನಿರಂಜನ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ನಿಡಸೋಸಿ, ಶಿವಾನಂದ ಭಾರತಿ ಸ್ವಾಮಿಗಳು ಇಂಚಲ, ವಿಜಯಮಹಾಂತ ಸ್ವಾಮಿಗಳು ಇಳಕಲ್‌, ಡಾ.ಮುರುಘರಾಜೇಂದ್ರ ಸ್ವಾಮಿಗಳು ಮುಗಳಖೋಡ, ಷ.ಬ್ರ.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಗಿರಿಸಾಗರ, ಫಕೀರ ದಿಂಗಾಲೇಶ್ವರ ಸ್ವಾಮಿಗಳು ಶಿರಹಟ್ಟಿ, ಅದೃಷ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಕನ್ನೇರಿಮಠ, ಬಸವ ಮೃತ್ಯುಂಜಯ ಸ್ವಾಮಿಗಳು ಕೂಡಲಸಂಗಮ, ನಿರಂಜನಾನಂದಪುರಿ ಸ್ವಾಮಿಗಳು ಕಾಗಿನೆಲೆ, ಅಲ್ಪಸಂಖ್ಯಾತ ಸಮೂದಾಯದ ಮೌಲ್ವಿಗಳು ಸೇರಿದಂತೆ ಸುಮಾರು 75 ಜನ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿವಾಹ ಮಾಡಿಕೊಳ್ಳುಲು ಇಚ್ಚಿಸುವ ಎಲ್ಲ ಧರ್ಮದ ವಧು-ವರರು ಹೆಚ್ಚಿನ ಮಾಹಿತಿಗಾಗಿ ಮೊ.ನಂ. 9611341827, 8880123499, 7259168004, 9353090000 ಸಂಪರ್ಕಿಸಿ.

ಮದುವೆಯಂಥ ಶುಭ ಸಂದರ್ಭದಲ್ಲಿಯೂ ಕಪ್ಪು ಬಳೆ ಧರಿಸುವುದೇಕೆ?

ಈ ಸಂದರ್ಭದಲ್ಲಿ ಆನಂದ ಇಂಗಳಗಾಂವಿ, ನಾಗೇಶ ಗೋಳಶಟ್ಟಿ, ಶಿದ್ಧಲಿಂಗೇಶ ನಾಗರಾಳ, ಬಸವರಾಜ ಮಂಟೂರ, ಸತೀಶ ಅಂಗಡಿ, ಸಿದ್ದು ದೂತ್ತರಗಾಂವಿ, ಚಂದ್ರಕಾಂತ ಅಡ್ಡಿ, ಚಂದ್ರಶೇಖರ ಕಾಖಂಡಕಿ, ನಂದು ಚಿಂತಾಮನಿ ಸೇರಿದಂತೆ ಮತ್ತಿತರರು ಇದ್ದರು.

click me!