ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ತಹಶಿಲ್ದಾರ್‌ನ್ನು ಹುದ್ದೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಬಳ್ಳಾರಿ (ಸೆ.07): ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಹಡಗಲಿ ತಹಸೀಲ್ದಾರ್ ವಿಜಯಕುಮಾರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಭಾನುವಾರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಅಧ್ಯಕ್ಷ ಸೆ.5ರಂದು ದೂರು ಸಲ್ಲಿಸಿ, ಮರಳು ಸಾಗಾಣಿಕೆಯ ಗುತ್ತಿಗೆದಾರರು ಪರ್ಮಿಟ್ ಪಡೆದಿದ್ದರೂ ಮರಳು ಸಾಗಣೆ ವಾಹನಗಳಿಂದ ಹಣ ಬೇಡುತ್ತಿದ್ದಾರೆ. ಅಲ್ಲದೆ, ತಹಸೀಲ್ದಾರ್ ಜತೆ ನಡೆದ ಸಂಭಾಷಣೆ ಧ್ವನಿಮುದ್ರಿಕೆಯನ್ನು ದೂರುದಾರರು ಸಲ್ಲಿಸಿದ್ದಾರೆ.
ಸರ್ಕಾರಿ ವೈದ್ಯ ಈಗ ಆಟೋ ಡ್ರೈವರ್!
ಅರ್ಜಿಯಲ್ಲಿ ಕಾಣಿಸಿರುವ ಇತರ ದೂರುಗಳು ಹಾಗೂ ನೀಡಿರುವ ಪುರಾವೆಗಳಿಂದ ತಹಸೀಲ್ದಾರ್ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ತಹಸೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ವಿಶ್ವಜಿತ್ ಮೆಹತಾ ಅವರನ್ನು ಹಡಗಲಿ ತಹಸೀಲ್ದಾರ್ ಆಗಿ ತಾತ್ಕಾಲಿಕವಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.