ಬ್ರಾಹ್ಮಣ ಮಹಾಸಂಘ ಹೊಸ ನೇಮಕಾತಿ: ಮಹಿಳಾ ವಿಭಾಗ ಬಲವರ್ಧನೆಗೆ ವಿಶೇಷ ಒತ್ತು

Published : Nov 09, 2025, 06:41 PM IST
Brahmin Association

ಸಾರಾಂಶ

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ), ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವು ಇಂದು ಭವ್ಯವಾಗಿ ನೆರವೇರಿತು.

ಬೆಂಗಳೂರು (ನ.09): ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ), ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವು ಇಂದು ಭವ್ಯವಾಗಿ ನೆರವೇರಿತು. ಸಂಘಟನೆಯ ವಿಸ್ತರಣೆ, ಯುವ ನಾಯಕತ್ವದ ಬೆಳೆತ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ, ರಾಜ್ಯಾಧ್ಯಕ್ಷರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಅಧ್ಯಕ್ಷೆಯಾಗಿ ಶ್ರೀಮತಿ ಪೂರ್ಣಿಮಾ ಜಿ.ಎಲ್. ಅವರನ್ನು ಪ್ರಧಾನಿ ಜವಾಬ್ದಾರಿಯೊಂದಿಗೆ ನೇಮಿಸಲಾಯಿತು.

ಇವರ ನೇತೃತ್ವದಲ್ಲಿ ಜಿಲ್ಲಾ ಘಟಕವು ಸಂಘಟನೆ ಬಲವರ್ಧನೆಗಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ನಿರ್ಧಾರ ವ್ಯಕ್ತವಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಶ್ರೀನಾಥ್ ಟಿ.ಆರ್., ಶ್ರೀ ಆರ್.ಎನ್. ವೇಣುಗೋಪಾಲ್ ಮತ್ತು ಶ್ರೀ ಅಮರನಾಥ್ ಎಂ, ಖಜಾಂಚಿಯಾಗಿ ಶ್ರೀ ನಾರಾಯಣ ಎಸ್.ಎಸ್, ಕಾರ್ಯದರ್ಶಿಯಾಗಿ ಶ್ರೀ ವಿಜಯ್ ಕುಮಾರ್ ಎ, ಮಾಧ್ಯಮ ವಕ್ತಾರರಾಗಿ ಶ್ರೀ ದ್ವಾರಕಾನಾಥ್ ಎಲ್, ಹಾಗೂ ನಿರ್ದೇಶಕರಾಗಿ ಶ್ರೀ ವೈ.ಎಸ್. ರಾಮಪ್ರಸಾದ್ ಅವರನ್ನು ನೇಮಿಸಲಾಯಿತು.

ಮಹಿಳಾ ವಿಭಾಗದ ಬಲವರ್ಧನೆಗಾಗಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಶ್ರೀಮತಿ ಜಯಶ್ರೀ ಎಸ್. ಅವರ ನೇಮಕವು ವಿಶೇಷ ಗಮನ ಸೆಳೆಯಿತು. ಮಹಿಳಾ ಘಟಕದಲ್ಲಿ ಉಪಾಧ್ಯಕ್ಷೆಯಾಗಿ ಶ್ರೀಮತಿ ರಾಧಿಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ಭಾರತಿ ಆರ್. ಶಂಕರ್ ಮತ್ತು ಶ್ರೀಮತಿ ಸುಮಾ ಎಚ್.ಎಲ್, ಕಾರ್ಯದರ್ಶಿಯಾಗಿ ಶ್ರೀಮತಿ ವಿದ್ಯಾ ವಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ನಾಗರಾಜ್ ಹಾಗೂ ನಿರ್ದೇಶಕರಾಗಿ ಶ್ರೀಮತಿ ಸೌಮ್ಯ ಬಿ.ಎಸ್. ಅವರನ್ನು ನೇಮಕ ಮಾಡಲಾಗಿದೆ.

ಪ್ರತಿಜ್ಞೆ

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಜಿ.ಆರ್. ಪ್ರದೀಪ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಜೋಶಿ ಅವರು ವೈಯಕ್ತಿಕವಾಗಿ ಉಪಸ್ಥಿತರಿದ್ದು, ಎಲ್ಲಾ ನೇಮಕಾತಿ ಪತ್ರಗಳನ್ನು ಅಧಿಕೃತವಾಗಿ ವಿತರಿಸಿ, ಹೊಸ ಹುದ್ದೆದಾರರಿಗೆ ಶುಭಾಶಯಗಳನ್ನು ಕೋರಿದರು. ಹೊಸ ಹುದ್ದೆದಾರರು ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ನಿಷ್ಠೆ, ಜವಾಬ್ದಾರಿ ಮತ್ತು ಸೇವಾ ಮನೋಭಾವದೊಂದಿಗೆ ಮುಂದುವರಿಸುವುದಾಗಿ ಪ್ರತಿಜ್ಞೆ ವ್ಯಕ್ತಪಡಿಸಿದರು. ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದ ಒಗ್ಗಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ಸತತ ಕಾರ್ಯನಿರ್ವಹಿಸುವ ನಿರ್ಧಾರವನ್ನು ಪುನರುಚ್ಚರಿಸಿದೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?