ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ, ಮೋಹನ್ ಭಾಗವತ್

Published : Nov 09, 2025, 04:09 PM IST
rss chief mohan bhagwat on registration controversy love jihad statement

ಸಾರಾಂಶ

ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ, ಮೋಹನ್ ಭಾಗವತ್, ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಹಿಂದೂ ರಾಷ್ಟ್ರ ಪರಿಕಲ್ಪನೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಬೆಂಗಳೂರು (ನ.09) ದೇಶದ 140 ಕೋಟಿ ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆಯೆ ಹಿಂದು ರಾಷ್ಟ್ರ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಹಿಂದೂ ರಾಷ್ಟ್ರ ಪರಿಕಲ್ಪನೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಹಿಂದು ರಾಷ್ಟ್ರಕ್ಕೆ ಜನರು ಮನಸ್ಸು ಮಾಡಬೇಕು ಎಂದಿದ್ದಾರೆ.

ಬಲಿಷ್ಠ ಭಾರತಕ್ಕೆ ಹಿಂದೂ ರಾಷ್ಟ್ರ

ಬಲಿಷ್ಠ ಭಾರತ ಕಟ್ಟುವುದು ಆರ್‌ಎಸ್ಎಸ್ ಗುರಿಯಾಗಿದೆ. ಇದಕ್ಕಾಗಿ ಅವರಿತ ಪ್ರಯತ್ನ ಮಾಡುತ್ತೇವೆ. ಬಲಿಷ್ಠ ಭಾರತ ಕಟ್ಟಲು ಹಿಂದೂ ಸಮಾಜದ ನೆರವು ಬೇಕಿಗೆ. ಹೀಗಾಗಿ ಈ ಬಲಿಷ್ಠ ಭಾರತಕ್ಕಾಗಿ ಹಿಂದೂ ಸಮಾಜವನ್ನು ತಯಾರಿಗೊಳಿಸುತ್ತಿದ್ದೇವೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಯಾವುದೇ ಧರ್ಮ, ಜಾತಿ ಇರಲಿ, ಭಾರತ ಮಾತೆಯ ಪುತ್ರರಾಗಿ, ಹಿಂದೂಗಳಾಗಿ ಕೆಲಸ ಮಾಡಬೇಕು. ಎಲ್ಲಾ ಧರ್ಮದವರಿಗೂ ಸಂಘದಲ್ಲಿ ಅವಕಾಶವಿದೆ. ಸಂಘದಿಂದ ಯಾರಿಗೂ ಯಾವುದೇ ನಿರೀಕ್ಷೆಗಳು ಇರಬಾರದು. ಜಾತಿ-ಧರ್ಮಗಳ ಹೆಸರಿನಲ್ಲಿ ಸಂಘ ಏನೂ ಮಾಡುವುದಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದರೆ.

ಟೀಕೆಗಳ ಕುರಿತು ಮಾತನಾಡಲ್ಲ, ನಮಗೆ ಮಾಡಲು ಸಾಕಷ್ಟು ಕೆಲಸವಿದೆ

ಸಂಘದ ಟೀಕೆಗಳ ಕುರಿತು ಮಾತನಾಡಿದ ಮೋಹನ್ ಭಾಗವತ್, ಹಲವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಆರೋಪ, ಟೀಕೆಗಳನ್ನು ಮಾಡುತ್ತಾರೆ. ಆದರೆ ನಾವು ಉತ್ತರ ನೀಡಲು ಹೋಗುವುದಿಲ್ಲ. ಸಂಘಕ್ಕೆ ಮಾಡಲು ಸಾಕಷ್ಟು ಕೆಲಸವಿದೆ. ಟೀಕೆಗಳು, ಆರೋಪಗಳಿಗೆ ಪ್ರಚಾರ ಸಿಗುತ್ತದೆ. ಅದು ಜನಪ್ರಿಯತೆ ಪಡೆದುಕೊಳ್ಳುತ್ತದೆ. ಕರ್ನಾಟಕದಲ್ಲೂ ಅದೇ ಆಗುತ್ತಿದೆ. ನಾವು ಯಾಕೆ ಇದಕ್ಕೆಲ್ಲಾ ಬೆಂಬಲ ನೀಡಬೇಕು. ಸ್ವಯಂ ಸೇವಕರಿಗೆ ಎಲ್ಲಾ ರಾಜಕೀಯ ಪಕ್ಷಗಳ ಬಾಗಿಲು ಬಂದ್ ಆಗಿತ್ತು. ಹಾಗಾಗಿ ಬಿಜೆಪಿಗೆ ಹೋದರು. ಬೇರೆ ಪಕ್ಷಗಳಲ್ಲಿ ಸ್ವಯಂ ಸೇವಕರು ಯಾಕಿಲ್ಲ ಎಂದ ಆಯಾ ಪಕ್ಷದವರನ್ನೇ ಕೇಳಿ. ಸಂಘ ರಾಷ್ಟ್ರ ನೀತಿಯನ್ನು ಬೆಂಬಲಿಸುತ್ತದೆ. ರಾಜನೀಯನ್ನಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಹಿಂದೂ ಧರ್ಮವೂ ನೋಂದಣಿಯಾಗಿಲ್ಲ

19225ರಲ್ಲಿ ಸಂಘ ಸ್ಥಾಪನೆಯಾಯಿತು. ಬ್ರಿಟಿಷರ ಕಾಲದಲ್ಲಿ ಸಂಘ ರಿಜಿಸ್ಟ್ರೇಶನ್ ಆಗುವುದನ್ನು ನೀವು ನಿರೀಕ್ಷೆ ಮಾಡುತ್ತೀರಾ? ಬ್ರಿಟಿಷರ ವಿರುದ್ಧವೇ ಹೋರಾಟ ಮಾಡಿದ್ದೆವು. ಸ್ವತಂತ್ರ ಭಾರತದಲ್ಲಿ ನೋಂದಣಿ ಕಡ್ಡಾಯವಲ್ಲ. ಆರ್‌ಎಸ್ಎಸ್ ಸ್ವತಂತ್ರ ಸಂಸ್ಥೆ ಎಂದು ಕೋರ್ಟ್ ಹೇಳಿದೆ. ಮೂರು ಬಾರಿ ಬ್ಯಾನ್ ಮಾಡಲಾಗಿದೆ. ಕೋರ್ಟ್ ನಿಷೇಧ ತೆಗೆದುಹಾಕಿದೆ. ಸಂಘ ಅಸಂವಿಧಾನಿಕವಲ್ಲ. ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!