ಮೋದಿ ಉತ್ಸವದಲ್ಲಿ ಜೆಡಿಎಸ್‌ ಶಾಸಕ ಸಾರಾ ಭಾಗಿ : ಕುತೂಹಲ ಮೂಡಿಸಿದ ನಡೆ

By Kannadaprabha News  |  First Published Oct 7, 2021, 8:55 AM IST
  • ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮ
  • ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಪಾಲ್ಗೊಂಡಿದ್ದರು. ಸಾ.ರಾ.ಮಹೇಶ್‌ ಅವರ ಈ ನಡೆ ತೀವ್ರ ಕುತೂಹಲ 

 ಮೈಸೂರು (ಅ.07):  ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ (SA Ramadas) ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ (Modi Yuga utsav) ಕಾರ್ಯಕ್ರಮದಲ್ಲಿ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಪಾಲ್ಗೊಂಡಿದ್ದರು. ಸಾ.ರಾ.ಮಹೇಶ್‌ ಅವರ ಈ ನಡೆ ತೀವ್ರ ಕುತೂಹಲ ಮೂಡಿಸಿತು.

ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾ.ರಾ. ಮಹೇಶ್‌ ಅವರು, ಪ್ರಧಾನಿ ಮೋದಿ (PM Narendra Modi) ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು (Happy Birthday) ಎಂದು ಬರೆದ ಅಂಚೆ ಪತ್ರವನ್ನು ಅಂಚೆ ಪೆಟ್ಟಿಗೆಗೆ ಹಾಕಿದರು. ಈ ವೇಳೆ ಸಾ.ರಾ. ಮಹೇಶ್‌ ಅವರಿಗೆ ಕೇಸರಿ ಶಾಲು ಹೊದಿಸಿ ಸ್ವಾಗತಿಸಲಾಯಿತು. ಕಾರ್ಯಕ್ರಮ ಮುಗಿಯುವವರೆಗೂ ಕೇಸರಿ ಶಾಲು ಹಾಕಿಕೊಂಡಿದ್ದರು. 

Latest Videos

undefined

ಜೆಡಿಎಸ್ ಸೋಲು : ಮೋಸದ ರಾಜಕಾರಣ ಸಾಮಾನ್ಯವಾಗಿದೆ ಎಂದು ಸಾ ರಾ ಅಸಮಾಧಾನ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು, ಈ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ. ಮಹೇಶ್‌ ಅವರು ಪಾಲ್ಗೊಂಡಿರುವುದು ವಿಶೇಷ. ಅವರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭ ಕೋರಿರುವುದು ಮತ್ತೂ ವಿಶೇಷವಾಗಿದ್ದು, ಅಂತರಂಗದಲ್ಲಿ ಅವರು ನಮ್ಮವರು ಎಂಬ ಅಭಿಮಾನವಿದೆ. ಆದರೆ ಅವರು ಬೇರೆಡೆ ಇದ್ದಾರೆ ಎಂದರು.

ಈ ಮೊದಲು ಸಾ.ರಾ. ಮಹೇಶ್‌ ಅವರು, ಬಿಜೆಪಿಯಲ್ಲೇ ಇದ್ದು, ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಜೆಡಿಎಸ್‌ ಸೇರಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಶಾಸಕ ಎಸ್‌.ಎ. ರಾಮದಾಸ್‌ ಅವರ ಆಪ್ತವಲಯದಲ್ಲಿರುವ ನಾಯಕರಲ್ಲಿ ಸಾ.ರಾ. ಮಹೇಶ್‌ ಕೂಡ ಒಬ್ಬರು.

ಇಲ್ಲಿಂದಲೇ ಚುನಾವಣೆ ಸ್ಪರ್ಧೆ

ರಾಜಕೀಯ ಮಾಡುವುದಾದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌ನಿಂದ ಮತ್ತು ಚುನಾವಣೆಗೆ ನಿಲ್ಲುವುದಾದರೆ ಅದು ಕೆ.ಆರ್‌. ನಗರದಿಂದ ಮಾತ್ರ ಇಲ್ಲದಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ವಿರೋಧಿಗಳಿಗೆ ಜೆಡಿಎಸ್‌ನಿಂದ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಹರದನಹಳ್ಳಿಯಲ್ಲಿ ಗ್ರಾಪಂ ಕಟ್ಟಡ ಭೂಮಿಪೂಜೆ ಮತ್ತು 1.75 ಲಕ್ಷದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಾ.ರಾ. ಮಹೇಶ್‌ ಕೆ.ಆರ್‌. ನಗರದಿಂದ ಬೇರೆ ಕ್ಷೇತ್ರೆಕ್ಕೆ ಹಾಗೂ ಬೇರೆ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಗುಸು ಗುಸು ಸುದ್ದಿಗೆ ನೇರವಾಗಿ ಉತ್ತರಿಸಿದರು.

ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾದ ಜೆಡಿಎಸ್ ಶಾಸಕ ಸಾ ರಾ

ಮೂರು ಬಾರಿ ಚುನಾವಣೆಯಲ್ಲಿಯೂ ಒಬ್ಬಬ್ಬರು ನನ್ನನ್ನು ಸೋಲಿಸಲೇಬೇಕೆಂಬ ಹಟದಿಂದ ಬೇರೆ ಪಕ್ಷಕ್ಕೆ ಹೋದರು, ಆದರೆ ಕೆ.ಆರ್‌. ನಗರ ತಾಲೂಕಿನ ಮತದಾನ ಪ್ರಭುಗಳು ಮಾತ್ರ ನನ್ನ ಕೈ ಬೀಡದೆ ಹ್ಯಾಟ್ರಿಕ್‌ ಗೆಲಿವಿಗೆ ಕಾರಣವಾಗಿದ್ದಾರೆ, ಅವರ ಋುಣ ನನ್ನ ಮೇಲಿದೆ ಅದನ್ನು ತೀರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ತಾಲೂಕಿನ ಜನರು ಸ್ಮರಿಸಿದರು.

click me!