ಬಣ್ಣದ ಮಾತಿಗೆ ಗಂಡನ ಬಿಟ್ಟು ಬಂದ ಗರ್ಭಿಣಿ: ಕೈಕೊಟ್ಟ ಪ್ರಿಯಕರ

Suvarna News   | Asianet News
Published : Feb 08, 2020, 01:35 PM IST
ಬಣ್ಣದ ಮಾತಿಗೆ ಗಂಡನ ಬಿಟ್ಟು ಬಂದ ಗರ್ಭಿಣಿ: ಕೈಕೊಟ್ಟ ಪ್ರಿಯಕರ

ಸಾರಾಂಶ

ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಓಡಿ ಬಂದ ವಿವಾಹಿತ ಮಹಿಳೆ| ಕೊಪ್ಪಳದಲ್ಲಿ ನಡೆದ ಘಟನೆ |ಬೆಂಗಳೂರಿಗೆ ದುಡಿಯಲು ಹೋಗೋಣ ಎಂದು ಹೇಳಿ ಮಹಿಳೆಯನ್ನ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋದ ಪ್ರಿಯಕರ|  

ಕೊಪ್ಪಳ[ಫೆ.08]: ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ಓಡಿ ಬಂದಿದ್ದ ಗರ್ಭಿಣಿ ಮಹಿಳೆಯ ಪರಿಸ್ಥಿತಿ ಅತಂತ್ರವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅತ್ತ ಪತಿಯೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲ ಎಂಬಂತಾಗಿದೆ ಈ ಮಹಿಳೆಯ ಸ್ಥಿತಿ. ಯಂಕಮ್ಮ ಎಂಬಾಕೆಯೇ ಪ್ರಿಯಕರನದಿಂದ ಮೋಸ ಹೋದ ಮಹಿಳೆಯಾಗಿದ್ದಾರೆ.

ಏನಿದು -ಪ್ರಕರಣ? 

ಕಳೆದ ನಾಲ್ಕು ವರ್ಷಗಳ ಹಿಂದೆ ಕುಕನೂರು ತಾಲೂಕಿನ‌ ಬೆಣಕಲ್ ಗ್ರಾಮದ  ಮುದಕಪ್ಪನ ಜೊತೆ ಯಂಕಮ್ಮನ ವಿವಾಹವಾಗಿತ್ತು. ಆದರೆ, ವಿವಾಹದ ಪೂರ್ವದಲ್ಲಿಯೇ ಮೆಳ್ಳಿಕೇರಿಯ ವಿನೋದರೆಡ್ಡಿ ಎಂಬಾತನನ್ನ  ಯಂಕಮ್ಮ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಮದುವೆ ಬಳಿಕವೂ ವಿನೋದರೆಡ್ಡಿ ಜೊತೆ ಯಂಕಮ್ಮ ಸಂಪರ್ಕ ಹೊಂದಿದ್ದಳು. 

ಈ ವಿಷಯ ತಿಳಿದ ಯಂಕಮ್ಮನ  ಗಂಡ ಮುದಕಪ್ಪ ಡೈವೋರ್ಸಗೆ  ಅರ್ಜಿ ಸಲ್ಲಿಸಿದ್ದನು. ಡೈವೋರ್ಸ ವಿಷಯ ತಿಳಿದ ಯಂಕಮ್ಮ ವಿನೋದ ರೆಡ್ಡಿ ಜೊತೆ ಓಡಿ ಬಂದಿದ್ದಳು. ಬೆಂಗಳೂರಿಗೆ ದುಡಿಯಲು ಹೋಗೋಣ ಎಂದು ಹೇಳಿ  ವಿನೋದ ರೆಡ್ಡಿ ಯಂಕಮ್ಮಳನ್ನ ಕೊಪ್ಪಳದ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳಲಾಗಿದೆ. ಆದರೆ, ಇಲ್ಲಿಯವರೆಗೂ ವಿನೋದರೆಡ್ಡಿ ಸಂಪರ್ಕಕ್ಕೆ ಸಿಗುತ್ತಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಂಕಮ್ಮ ಈಗ 9 ತಿಂಗಳ ಗರ್ಭಿಣಿಯಾಗಿದ್ದಾಳೆ.  ಅತ್ತ ಮೊದಲನೇ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲದೆ ಯಂಕಮ್ಮ ಪರದಾಡುತ್ತಿದ್ದಾಳೆ.  ಯಂಕಮ್ಮ 4 ತಿಂಗಳು ಸ್ವಾದಾರ್ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಳು.  ತುಂಬು ಗರ್ಭಿಣಿಯಾದ ಬಳಿಕ ಸ್ವಾದಾರ್ ಕೇಂದ್ರದ  ಸಿಬ್ಬಂದಿ ಯಂಕಮ್ಮ ಹೊರಹಾಕಿದ್ದಾರೆ.  ಸಧ್ಯ ಯಂಕಮ್ಮ ಇನ್ನೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಮುಂದಿನ ತಿಂಗಳು  ಹೆರಿಗೆಯಾಗಲಿದೆ.  ಹೀಗಾಗಿ ಯಂಕಮ್ಮಳಿಗೆ ಯಾವ ದಾರಿಯೂ ಕಾಣದ ಹಾಗೆ ಆಗಿದೆ. ನನಗೆ ವಿನೋದ ರೆಡ್ಡಿಯನ್ನು ಹುಡುಕಿಕೊಡಿ ಎಂದು ಯಂಕಮ್ಮ ಬೇಡಿಕೊಳ್ಳುತ್ತಿದ್ದಾರೆ. 
 

PREV
click me!

Recommended Stories

ನವೋದಯ ಪ್ರವೇಶ ಪರೀಕ್ಷೆಯಲ್ಲಿ ಶಿಕ್ಷಕನಿಂದಲೇ ಮೋಸ! ಮಗನಿಗೆ ಅಕ್ರಮವಾಗಿ ಉತ್ತರ ಹೇಳಿಕೊಟ್ಟ ತಂದೆ!
ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!