ಮತ್ತೊಬ್ಬನ ಜೊತೆ ಪ್ರೇಯಸಿ ಎಂಗೇಜ್ಡ್ : ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೂಸೈಡ್

Suvarna News   | Asianet News
Published : Feb 08, 2020, 01:31 PM ISTUpdated : Feb 08, 2020, 01:35 PM IST
ಮತ್ತೊಬ್ಬನ ಜೊತೆ ಪ್ರೇಯಸಿ ಎಂಗೇಜ್ಡ್  : ಡೆತ್ ನೋಟ್ ಬರೆದಿಟ್ಟು ಪ್ರಿಯಕರ ಸೂಸೈಡ್

ಸಾರಾಂಶ

ಪ್ರಿಯತಮೆ ಮತ್ತೋರ್ವನ ಜೊತೆ ಎಂಗೇಜ್ ಆಗುತ್ತಿದ್ದಂತೆ ಪ್ರಿಯತಮ ಮನನೊಂದು ಆತ್ಮಹತ್ಯಗೆ ಶರಣಾಗಿದ್ದಾನೆ. ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡಿದ್ದಾನೆ. 

ಮಂಡ್ಯ  (ಫೆ.08): ತಾನು ಪ್ರೀತಿಸಿದ ಹುಡುಗಿಗೆ ನಿಶ್ಚಿತಾರ್ಥವಾಗಿದ್ದಕ್ಕೆ ಮನನೊಂದು ಪ್ರಿಯತಮನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದ ದರ್ಶನ್ ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕನ. 

ರಾಮೇಗೌಡ ಎಂಬುವವರ ಪುತ್ರ ದರ್ಶನ್ ಚಿಕ್ಕಂದಿನಿಂದಲೇ ಯುವತಿಯೋರ್ವಳನ್ನು ಪ್ರೀತಿಸುತ್ತದ್ದು, ಆಕೆಗೆ ನಿಶ್ಚಿತಾರ್ಥವಾದ ಸುದ್ದಿ ತಿಳಿಯುತ್ತಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 
 
ಬೆಂಗಳೂರಿನಲ್ಲಿ ನೆಲೆಸಿದ್ದ ದರ್ಶನ್ ಎರಡು ಸಾಲಿನ ಡೆತ್ ನೋಟ್ ಬರೆದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ‌ ಸಾವಿಗೆ ನೀನೇ ಕಾರಣ ಎಂದು ಪ್ರಿಯತಮೆಯ ಹೆಸರು ಬರೆದಿಟ್ಟಿದ್ದಾನೆ.

ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್...

ಏಂಗೇಜ್‌ಮೆಂಟ್ ಆದ ದಿನ ರಾತ್ರಿ ತನ್ನ ತಾಯಿಗೆ ದೂರವಾಣಿ ಕರೆ ಮಾಡಿದ ದರ್ಶನ್ ತಾಯಿ ಬಳಿ ನಿಶ್ಚಿತಾರ್ಥಕ್ಕೆ ಹೋಗಿದ್ದೆಯಾ ಎಂದು ವಿಚಾರಿಸಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  

ಇನ್ನು ದರ್ಶನ್ ಪ್ರೀತಿ ಮಾಡುತ್ತಿದ್ದ ಹುಡುಗಿಗೆ ಹುಡುಗ ನಿಶ್ಚಯವಾದ ಬಳಿಕ ಆಕೆಯ ತಂಟೆಗೆ ಬಾರದಂತೆ ಎಚ್ಚರಿಕೆಯನ್ನು ನೀಡಲಾಗಿತ್ತು. ಆಕೆಯ ಪೋಷಕರು ದರ್ಶನ್ ಗೆ ಈ ಬಗ್ಗೆ ಬೆರಸಿದ್ದರೆಂದು ಆರೋಪಿಸಲಾಗಿದ್ದು,  ಬೆಂಗಳೂರಿನಲ್ಲಿ ತಾನು ನೆಲೆಸಿದ್ದ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡಿದ್ದಾನೆ. 

PREV
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ