ಆನೆಯನ್ನು ಚೆನ್ನಾಗಿ ಸಾಕಿದ್ದೀರಿ ಎಂದು ಪ್ರಧಾನಿ ಅವರು ಹೇಳಿದರು. ಪ್ರಧಾನಿ ಬಂದು ಹೋದ ಮೇಲೆ ಜನ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗಿದೆ. ಇದೀಗ ತುಂಬಾ ಜನ ಬಂದು ನಮ್ಮನ್ನು ಮಾತನಾಡಿಸಿಕೊಂಡು ಹೋಗುತ್ತಾರೆ ಎಂದು ಎಂದು ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರದ ಬೊಮ್ಮ ಸಂತಸ ವ್ಯಕ್ತಪಡಿಸಿದರು.
ಮೈಸೂರು (ಏ.11) : ಪ್ರಧಾನಿ ಮಾತನಾಡಿದ ಕ್ಷಣ ಪದಗಳಿಗೆ ನಿಲುಕದ ಸಂತಸ ತಂದಿದೆ. ಪ್ರಧಾನಿ ನಮ್ಮನ್ನು ನೋಡಲು ಬರುತ್ತಾರೆ ಎಂದಾಗ ಬಹಳ ಖುಷಿ ಆಯ್ತು. ಆದರೆ ಅವರೇ ಬಂದು ನಮ್ಮನ್ನು ಮಾತನಾಡಿಸಿದ್ದು ನಮ್ಮ ಸಂತೋಷ ಇಮ್ಮಡಿಯಾಗುವಂತೆ ಮಾಡಿತು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ದ ಎಲಿಫೆಂಟ್ ವಿಸ್ಪರರ್ಸ್(The Elephant Whisperers)’ ಸಾಕ್ಷ್ಯ ಚಿತ್ರಕ್ಕೆ ಸ್ಫೂರ್ತಿಯಾಗಿರುವ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರದ ಬೊಮ್ಮ ಹೇಳಿದ್ದಾರೆ.
ಸೋಮವಾರ ಏಷ್ಯಾನೆಟ್ ಸುವರ್ಣನ್ಯೂಸ್(Asianet suvarna news) ಜೊತೆ ಮಾತನಾಡಿದ ಅವರು, ಆನೆಯನ್ನು ಚೆನ್ನಾಗಿ ಸಾಕಿದ್ದೀರಿ ಎಂದು ಪ್ರಧಾನಿ ಅವರು ಹೇಳಿದರು. ಪ್ರಧಾನಿ ಬಂದು ಹೋದ ಮೇಲೆ ಜನ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ ಆಗಿದೆ. ಇದೀಗ ತುಂಬಾ ಜನ ಬಂದು ನಮ್ಮನ್ನು ಮಾತನಾಡಿಸಿಕೊಂಡು ಹೋಗುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
undefined
ತೆಪ್ಪಕಾಡು ಆನೆ ಶಿಬಿರಕ್ಕೆ 'ನಮೋ' ಭೇಟಿ, ಬೊಮ್ಮ-ಬೆಳ್ಳಿ ದಂಪತಿಗೆ ಸನ್ಮಾನ
ನಮಗೆ ತಮಿಳುನಾಡು ಸಿಎಂರಿಂದ 1 ಲಕ್ಷ ರು
ನಾನು ಮತ್ತು ನನ್ನ ಪತ್ನಿಗೆ ತಮಿಳುನಾಡು ಮುಖ್ಯಮಂತ್ರಿ(Chief Minister of Tamil Nadu) ಅವರು ತಲಾ ₹1 ಲಕ್ಷ ನೀಡಿ ಗೌರವಿಸಿದ್ದಾರೆ. ಪ್ರಧಾನಿ ಮೋದಿ(PM Narendra Modi) ಅವರು ಬಂಡೀಪುರಕ್ಕೆ(Bandipur national park) ಭೇಟಿ ನೀಡುವ ಒಂದು ತಿಂಗಳ ಮೊದಲು ತಮಿಳುನಾಡು ಮುಖ್ಯಮಂತ್ರಿಗಳು ನನ್ನನ್ನು ಹಾಗೂ ಬೆಳ್ಳಿಯನ್ನು ಚೆನ್ನೈಗೆ ಕರೆಸಿ ಗೌರವಿಸಿದ್ದರು. ತಲಾ .1 ಲಕ್ಷ ನೀಡಿದ್ದರು. ನಂತರ ಅಧಿಕಾರಿಗಳು ಬಂದು ಕ್ಯಾಂಪ್‌ನಲ್ಲಿರೋ 60 ಜನ ಮಾವುತ, ಕಾವಾಡಿಗಳಿಗೂ ತಲಾ .1 ಲಕ್ಷ ಕೊಟ್ಟಿದ್ದಾರೆ ಎಂದರು. .1ಲಕ್ಷದಿಂದ ನಮ್ಮ ಬದುಕಲ್ಲಿ ಯಾವುದೇ ಬದಲಾವಣೆ ಆಗಲ್ಲ. ಹಣ ಬೇಕು ನಿಜ, ಆದರೆ ಬದುಕಲ್ಲಿ ಪ್ರೀತಿಯೂ ಮುಖ್ಯ. ಇಲ್ಲಿ ನಮ್ಮನ್ನು ಯಾರೂ ಬಂದು ನೋಡಲ್ಲ. ಅಂಥದ್ದರಲ್ಲಿ ಖುದ್ದು ಪ್ರಧಾನಿಯೇ ಬಂದು ನಮ್ಮನ್ನು ಮಾತನಾಡಿಸಿದ್ದು ನಮಗೆ ಮಾತ್ರವಲ್ಲ, ಕ್ಯಾಂಪ್ ಅಧಿಕಾರಿಗಳು ಮತ್ತು ತಮಿಳುನಾಡಿಗೇ ಖುಷಿ ತಂದಿದೆ ಎಂದರು.
ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ-ಬೊಮ್ಮನ್ನನ್ನು ಭೇಟಿ ಮಾಡಲಿರುವ ಪ್ರಧಾನಿ