ಕುಂದಾನಗರಿ ಬೆಳಗಾವಿಯಲ್ಲಿ ಉದ್ಯಮ ಸ್ಥಾಪಿಸಲು ಬಾಲಿವುಡ್ ನಟ ಆಸಕ್ತಿ

Suvarna News   | Asianet News
Published : Dec 18, 2019, 08:50 AM IST
ಕುಂದಾನಗರಿ ಬೆಳಗಾವಿಯಲ್ಲಿ ಉದ್ಯಮ ಸ್ಥಾಪಿಸಲು ಬಾಲಿವುಡ್ ನಟ ಆಸಕ್ತಿ

ಸಾರಾಂಶ

ಬೆಳಗಾವಿಯಲ್ಲಿ ಉದ್ಯಮ ಪ್ರಾರಂಭಿಸಲು ಮುಂದಾದ ಸುನಿಲ್ ಶೆಟ್ಟಿ| ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿರುವ ಶ್ರೀ ಶಿವನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುನಿಲ್ ಶೆಟ್ಟಿ|  ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನ ಬೆಳಗುಂದಿ, ರಾಕಸಕೊಪ್ಪ, ಜಾಂಬೊಟಿ ಮತ್ತಿತರ ಗ್ರಾಮಗಳ ವೀಕ್ಷಣೆ|

ಬೆಳಗಾವಿ(ಡಿ.18): ಬಾಲಿವುಡ್‌ ಖ್ಯಾತ ನಟ ಕನ್ನಡಿಗ ಸುನಿಲ್ ಶೆಟ್ಟಿ ಬೆಳಗಾವಿ ನಗರದ ಹೊರವಲಯದಲ್ಲಿ ಉದ್ಯಮ ಪ್ರಾರಂಭಿಸಲು ಆಸಕ್ತಿ ಹೊಂದಿದ್ದಾರೆ.

ಬೆಳಗಾವಿಯಲ್ಲಿನ ಪರಿಸರ ಸವಿಲೆಂದೇ ಅವರು ಭಾನುವಾರ ಕುಂದಾನಗರಿಗೆ ಆಗಮಿಸಿದ್ದರು. ಅಲ್ಲದೆ, ಡಿ.15 ರಂದು ಬೆಳಗುಂದಿ ಗ್ರಾಮದ ಹೊರವಲಯದಲ್ಲಿರುವ ಉದ್ಯಮಿ ಒಬ್ಬರ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೋಮವಾರ ಬೆಳಗ್ಗೆ ನಟ ಸುನಿಲ್ ಶೆಟ್ಟಿ ಅವರು, ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿರುವ ಶ್ರೀ ಶಿವನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನ ಬೆಳಗುಂದಿ, ರಾಕಸಕೊಪ್ಪ, ಜಾಂಬೊಟಿ ಮತ್ತಿತರ ಗ್ರಾಮಗಳ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಸುತ್ತಲಿನ ಅರಣ್ಯದಲ್ಲಿ ಟ್ರಕ್ಕಿಂಗ್‌ ಕೂಡ ನಡೆಸಿ, ನಂತರ ಮರಳಿದ್ದಾರೆ. ಅಲ್ಲದೇ ಸುನೀಲ ಶೆಟ್ಟಿಅವರು ಬೆಳಗಾವಿಯಲ್ಲಿ ರೆಸಾರ್ಟ್‌ ಹಾಗೂ ಜಿಮ್‌ ಉದ್ಯಮ ಸ್ಥಾಪಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ