
ಉತ್ತರ ಕನ್ನಡ(ನ.10): ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಭಾಗಶಃ ಪ್ರದೇಶಗಳಲ್ಲಿ ಪಡಿತರದಲ್ಲಿ ಕುಚಲಕ್ಕಿ ನೀಡಲು ಮುಖ್ಯಮಂತ್ರಿ ಸಮ್ಮತಿ ನೀಡಿದ್ದಾರೆ. ಕ್ವಿಂಟಾಲ್‌ಗೆ 2540 ರೂ. ನೀಡಿ ಕರಾವಳಿಯ ರೈತರ ಅಕ್ಕಿ ಖರೀದಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಿನ್ನೆ(ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕರಾವಳಿ ಭಾಗಗಳಲ್ಲಿ ಕುಚಲಕ್ಕಿಗೆ ಹೆಚ್ಚು ಬೇಡಿಕೆಯಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಪಡಿತರದಲ್ಲಿ ಕುಚಲಕ್ಕಿ ನೀಡಲು ಪ್ರತಿ ತಿಂಗಳು ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಬೇಕಾಗುತ್ತಿದ್ದು, ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದೆ. ಅದಕ್ಕಾಗಿ 18 ಲಕ್ಷ ಭತ್ತ ಸಂಸ್ಕರಿಸಿಕೊಳ್ಳಬೇಕಾಗಿದೆ. ಇನ್ನೊಂದು ವಾರದ ಬಳಿಕ ರಾಜ್ಯದ ಕರಾವಳಿಯಲ್ಲೂ ಭತ್ತದ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ ಅಂತ ತಿಳಿಸಿದ್ದಾರೆ.
ಬೆಂಬಲ ಬೆಲೆಗಾಗಿ ಕಬ್ಬು ಬೆಳೆಗಾರರ ಹೋರಾಟ: ಬೇಡಿಕೆಯ ಅರ್ಧ ಬೆಲೆ ನಿಗದಿ, ತಪ್ಪದ ಆಕ್ರೋಶ
ಕೇಂದ್ರ, ರಾಜ್ಯ ಸರಕಾರದ ನಿಯಮ ಪ್ರಕಾರ ಭತ್ತ ಖರೀದಿಗೆ ಕ್ವಿಂಟಾಲ್‌ಗೆ 2040 ರೂ. ಇದೆ. ಆದರೆ, ಕೇರಳ ಸರಕಾರ 2250 ರೂ. ದರದಲ್ಲಿ ಕರ್ನಾಟಕದ ಭತ್ತ ಖರೀದಿಸುತ್ತಿದ್ದದ್ದರಿಂದ ರಾಜ್ಯದ ಭತ್ತಗಳು ಕೇರಳದ ಪಾಲಾಗುತ್ತಿತ್ತು. ಈ ಕಾರಣ ರಾಜ್ಯ ಸರಕಾರ ಸಬ್ಸಿಡಿ 500 ರೂ. ಸೇರಿಸಿ ಒಟ್ಟಾರೆ 2540 ರೂ.ಗೆ ಭತ್ತ ಖರೀದಿಸಲು ನಿರ್ಧರಿಸಿದೆ. ತರಾತುರಿಗೆ ಭತ್ತ ಮಾರುವ ಬದಲು ಉತ್ತಮ ದರಕ್ಕೆ ನಾವು ಖರೀದಿಸುತ್ತೇವೆ. ರೈತರು ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕು ಎಂದು ಸಚಿವರು ತಿಳಿಸಿದ್ದಾರೆ.
ಹಿಂದೂ ಧರ್ಮದ ವಿರುದ್ಧ ಸತೀಶ್ ಜಾರಕಿಹೊಳಿ ಅವಹೇಳನಕಾರಿ ಹೇಳಿಕೆ
ಹಿಂದೂ ಧರ್ಮದ ವಿರುದ್ಧ ಸತೀಶ್ ಜಾರಕಿಹೊಳಿ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರ ಸಂಬಂಧಿಸಿ ಡಿಕೆಶಿ ಹಾಗೂ ಸಿದ್ಧರಾಮಯ್ಯ ಅವರ ನಿಲುವೇನು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್ ಹೆಬ್ಬಾರ್
ಸತೀಶ್ ಜಾರಕಿಹೊಳಿ ಹಿಂದೂ ಧರ್ಮ ಅಶ್ಲೀಲ ಎಂದು ಬಳಕೆ ಮಾಡಿದ್ದನ್ನು ಬಿಜೆಪಿ ಖಂಡಿಸಿದೆ. ಅವರ ವಿರುದ್ಧ ಈಗಾಗಲೇ ಬಿಜೆಪಿ ಪ್ರತಿಭಟನೆಗಳನ್ನು ಕೂಡಾ ನಡೆಸಿದೆ. ದುರಂತವೆಂದರೆ, ಜಗತ್ತಿನ ಯಾವುದೇ ಧರ್ಮವನ್ನು ಅವಹೇಳನ ಮಾಡಿದ್ರೆ ಏನಾಗುತ್ತೆಂತ ಎಲ್ಲರಿಗೂ ಗೊತ್ತಿದೆ. ಇಷ್ಟೆಲ್ಲಾ ಅವಮಾನವಾದಾಗ ಎಲ್ಲಾ ಧರ್ಮಗಳು ಸಮಾನ ಅನ್ನೋ ಡಿಕೆಶಿ ಹಾಗೂ ಸಿದ್ಧರಾಮಯ್ಯ ಸುಮ್ಮನಿದ್ದದ್ದು ಯಾಕೆಂತ ಗೊತ್ತಿಲ್ಲ. ಸಿದ್ದರಾಮಯ್ಯನವರೇ ನಿಮ್ಮ ಪಕ್ಷದ ಕಾರ್ಯಾಧ್ಯಕ್ಷ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ. ತಪ್ಪಾಗಿದೆ ಅಂತಾ ಹೇಳದಷ್ಟು ಕೂಡಾ ಒರಟುತನ ತೋರಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ನಿಲುವೇನು ಅಂತಾ ಸ್ಪಷ್ಟಪಡಿಸಬೇಕಿದೆ. ಅಂತ ತಿಳಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಲಘುವಾಗಿ ಮಾತನಾಡಿದವರನ್ನು ನೀವು ಸಮರ್ಥನೆ ಮಾಡ್ತೀರಾ..?ಅಥವಾ ಹಿಂದೂ ಸಮುದಾಯದ ಮೇಲೆ ಸಹಾನುಭೂತಿ ತೋರಿ, ಅವರ ಮಾತನ್ನು ಖಂಡಿಸ್ತೀರಾ..? ಕ್ರಮ ಕೈಗೊಳ್ತೀರಾ...ತಪ್ಪಾಗಿದೆ ಎಂದು ಹೇಳಿಸ್ತೀರಾ..ಅಥವಾ ಅಸಹಾಯಕರಾಗಿ ಇರ್ತೀರಾ..? ಈ ಪ್ರಶ್ನೆಗೆ ಡಿಕೆಶಿ ಹಾಗೂ ಸಿದ್ಧರಾಮಯ್ಯ ಉತ್ತರಕೊಡಬೇಕಿದೆ. ಬಿಜೆಪಿಯ ಕಾರ್ಯಕರ್ತರು ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ದೂರು ನೀಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ನಡೆಯಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.