ಮಂಡ್ಯ: KRS ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಿ

By Kannadaprabha News  |  First Published Sep 30, 2019, 10:38 AM IST

KRS ಅಣೆಕಟ್ಟು ಹಾಗೂ ಆಸುಪಾಸಿನ ಅದ್ಭುತ ಸೌಂದರ್ಯವನ್ನು ಈಗ ಆಗಸದಿಂದಲೂ ನೋಡಿ ಆನಂದಿಸಬಹುದು. ಶ್ರೀರಂಗಪಟ್ಟಣ ದಸರಾ ಅಂಗವಾಗಿ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶದಲ್ಲಿ ಆಯೋಜಿಸಿದ್ದ ಹೆಲಿಪ್ಯಾಡ್‌ ರೇಡ್‌ ಹಾಗೂ ಬೋಟಿಂಗ್‌ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.


ಮಂಡ್ಯ(ಸೆ.30): ಶ್ರೀರಂಗಪಟ್ಟಣ ದಸರಾ ಅಂಗವಾಗಿ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶದಲ್ಲಿ ಆಯೋಜಿಸಿದ್ದ ಹೆಲಿಪ್ಯಾಡ್‌ ರೇಡ್‌ ಹಾಗೂ ಬೋಟಿಂಗ್‌ ವ್ಯವಸ್ಥೆಗೆ ಶಾಸಕ ಸಿ.ಎಸ್‌.ಪುಟ್ಟರಾಜು ಪಾಂಡವಪುರದಲ್ಲಿ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಸಿ.ಎಸ್‌.ಪುಟ್ಟರಾಜು, ದಸರಾ ಹಬ್ಬದ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆಆರ್‌ ಎಸ್‌ ಹಿನ್ನೀರಿನ ಪ್ರದೇಶದಲ್ಲಿ ಪ್ರವಾಸಿಗರಿಗಾಗಿ ಏಲಿರೇಡ್‌ ಹಾಗೂ ಬೋಟಿಂಗ್‌ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಕಲ್ಪಿಸಿಕೊಡಲಾಗಿದೆ ಎಂದರು.

Tap to resize

Latest Videos

ಒಮ್ಮೆ 6 ಜನರಿಗೆ ಮಾತ್ರ ಅವಕಾಶ:

ಪ್ರವಾಸಿಗರು ಏಲಿರೇಡ್‌, ಬೋಟಿಂಗ್‌ ವ್ಯವಸ್ಥೆಯಲ್ಲಿ ಭಾಗವಹಿಸಬಹುದು. ಇದು ಸೆ.29ರಿಂದ ಅ.8ರವರೆಗೆ ಇರಲಿದೆ. ನಂತರ ಪ್ರವಾಸಿಗರಿಂದ ಬರುವ ಪ್ರತಿಕ್ರಿಯೆ ನೋಡಿ ನಂತರ ಇದನ್ನು ಮುಂದುವರೆಸುವ ಬಗ್ಗೆ ತೀರ್ಮಾನಿಸಲಾಗುವುದು. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಪ್ರತಿಯೊಬ್ಬ ಪ್ರವಾಸಿಗರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಂಡ್ಯ: ಹಳ್ಳಿಯಲ್ಲಿ ರೈತರ ಸೂಪರ್‌ ಮಾರ್ಕೆಟ್‌!

ಪ್ರತಿಷ್ಠಿತ ಚಿಪ್ಸಾನ್‌ ಏರ್‌ ಲೈನ್‌ ಸಂಸ್ಥೆ ವತಿಯಿಂದ ಏಲಿರೇಡ್‌ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೆಲಿರೇಡ್‌(ಹೆಲಿಕ್ಯಾಪ್ಟರ್‌ ರೇಡ್‌)ಗೆ 2600 ರು. ಬೆಲೆ ನಿಗಧಿ ಮಾಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿ 6 ಮಂದಿ ಮಾತ್ರ ಒಮ್ಮೆ ಹೋಗಲು ಅವಕಾಶವಿದೆ. ಪ್ರತಿ ರೇಡ್‌ 8 ನಿಮಿಷಗಳ ಕಾಲ ಗಾಳಿಯಲ್ಲಿ ಸಂಪೂರ್ಣ ಕೆಆರ್‌ಎಸ್‌ ಅಣೆಕಟ್ಟೆಯನ್ನು ಸುತ್ತಾಡಿಸುತ್ತಾರೆ ಎಂದರು.

ಕೆಆರ್‌ ಎಸ್‌ ಅಣೆಕಟ್ಟೆಯನ್ನು ಮೇಲಿಂದು ವೀಕ್ಷಣೆ ಮಾಡುವುದಂತು ನಿಜಕ್ಕೂ ಅದ್ಬುತವಾದ ದೃಶ್ಯ. ಇಡೀ ಕೆಆರ್‌ ಎಸ್‌ ಅಣೆಕಟ್ಟೆಯ ಸಂಪೂರ್ಣ ವಿಸ್ತೀರ್ಣವನ್ನು ನೋಡಬಹುದೆ. ಏಲಿರೇಡ್‌ನಲ್ಲಿ ಸುತ್ತಾಡುವ ಈ ದೃಶ್ಯವಂತ ಪ್ರತಿಯೊಬ್ಬ ಪ್ರವಾಸಿಗರನ್ನು ಗಮನಸೆಳೆಯುತ್ತದೆ ಎಂದು ಹೇಳಿದರು.

ಬೋಟಿಂಗ್‌ಗೆ ವ್ಯವಸ್ಥೆ:

ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸ್ಪೀಡ್‌ ಬೋಚ್‌, ಝಡ್ಸ್‌ ಕ್ರೀ, ಕಾಯಿಡ್‌ ಹಾಗೂ ತೆಪ್ಪದ ಮೂಲಕ ನೀರಿನಲ್ಲಿ ಜಾಲಿರೇಡ್‌ ಮಾಡಬಹುದು. ಸ್ಪೀಡ್‌ ಬೋಚ್‌ ರೇಡ್‌ ಗೆ -150 ರು. ಝಡ್ಸ್‌ ಕ್ರೀ- 400 ರು. ಕಾಯಿಡ್‌- 100 ಹಾಗೂ ತೆಪ್ಪಕ್ಕೆ ತಲಾ 50 ರು. ಬೆಲೆ ನಿಗಧಿ ಮಾಡಿದ್ದಾರೆ.

ಮಂಡ್ಯ: ಇಲ್ಲಿ ಕುರಿ, ಮೇಕೆ ಮಾಂಸವೇ ಪ್ರಸಾದ..!

ಬೋಟಿಂಗ್‌ನಲ್ಲಿ ಜಾಲಿಯಾಗಿ ಒಂದು ರೇಡ್‌ ಹೊರಟರೆ ಸಮುದ್ರದಲ್ಲಿ ಹೋಗುವ ಅನುಭವನ್ನು ನೀಡುತ್ತಿದೆ. ಇಷ್ಟುದಿನ ಕೇವಲ ನೀರನ್ನು ನೋಡಿ ಸಂಭ್ರಮಿಸುತ್ತಿದ್ದ ಪ್ರವಾಸಿಗರಿಗೆ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶದಲ್ಲಿ ಬೋಟಿಂಗ್‌ ಮಾಡುವ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಿಕೊಟ್ಟಿದೆ.

ಬೋಟಿಂಗ್‌ ಹಾಗೂ ಏಲಿರೇಡ್‌ ಸೆ.29 ರಿಂದ ಅ.8ರವರೆಗೆ ನಡೆಸಯಲಿದೆ. ಪ್ರತಿ ದಿನ ಬೆ.9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ನಡೆಯಲಿದೆ. ಪ್ರವಾಸಿಗರು ಏಲಿರೇಡ್, ಬೋಟಿಂಗ್‌ನ್ನಲ್ಲಿ ಸುತ್ತಾಡಿ ಸಂಭ್ರವಿಸಬಹುದು.

click me!