ಶಿವಮೊಗ್ಗ : ಜಿಂಕೆ ಬೇಟೆಯಾಡಿದ ಮೂವರ ಬಂಧನ

By Kannadaprabha News  |  First Published Sep 30, 2019, 10:34 AM IST

ಜಿಂಕೆ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಘಟನೆ ನಡೆದಿದೆ. 


ಬಾಳೆಹೊನ್ನೂರು [ಸೆ.30]: ಇಲ್ಲಿಗೆ ಸಮೀಪದ ಮಾಗುಂಡಿ ಗ್ರಾಮದ ಕಾಫಿ ತೋಟವೊಂದರಲ್ಲಿ ಜಿಂಕೆ ಬೇಟೆಯಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಮಾಗುಂಡಿ ಕೌಶಿಕ್‌ ಎಂಬವರ ತೋಟದಲ್ಲಿ ಶನಿವಾರ ಬೆಳಗ್ಗಿನ ಜಾವ ಸ್ಥಳೀಯರಾದ ಶಶಿಕುಮಾರ್‌, ಶ್ರೀನಿವಾಸ್‌ ಹಾಗೂ ವೆಂಕಟೇಶ್‌ ಎಂಬವರು ಅಕ್ರಮವಾಗಿ ಜಿಂಕೆ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆಯಿತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳನ್ನು ಮಾಂಸ ಸಮೇತ ಬಂಧಿಸಿ, ವಿಚಾರಣೆ ನಡೆಸಿ ಚಿಕ್ಕಮಗಳೂರಿನ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಆರ್‌ಎಫ್‌ಓ ನಿರಂಜನ್‌ ತಿಳಿಸಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪರಶುರಾಮ್‌, ಮಂಜುನಾಥ್‌, ಅಭಿಲಾಷ್‌, ಪ್ರಕಾಶ್‌, ಬಸವನಂದಿಕೋಲು ಮಠ, ಶಿವಶಂಕರ್‌ ಭಾಗವಹಿಸಿದ್ದರು.

click me!