ಬೆಂಗಳೂರಿನಲ್ಲಿ ವೋಲ್ವೊಗೆ ಬ್ರೇಕ್, ಎಲೆಕ್ಟ್ರಿಕ್ ಬಸ್ ಸಂಚಾರ ಶುರು..!

By Web DeskFirst Published Jun 19, 2019, 6:33 PM IST
Highlights

ವೋಲ್ವೊ ಬಸ್ ಸಂಚಾರ ಎತ್ತಂಗಡಿಗೆ ಸಾರಿಗೆ ಇಲಾಖೆ ಚಿಂತನೆ| ವೋಲ್ವೊ ಬಸ್ ಗಳಿಂದ ನಷ್ಟ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಎತ್ತಂಗಡಿಗೆ ಪ್ಲಾನ್ | ವೋಲ್ವೊ ಬದಲಿಗೆ ಎಲೆಕ್ಟ್ರಿಕ್ ಬಸ್ . 

ಬೆಂಗಳೂರು, ]ಜೂ.19]: ಸತತವಾಗಿ ನಷ್ಟದಲ್ಲಿ ನಡೆಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಹವಾನಿಯಂತ್ರಿತ ವೋಲ್ವೊ ಬಸ್‌ಗಳನ್ನು ಎತ್ತಂಗಡಿ ಮಾಡಲು ಸಾರಿಗೆ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿದೆ.

ವೋಲ್ವೊ ಬಸ್ ಗಳಿಂದ ಕಳೆದ ಒಂದು ವರ್ಷದಿಂದ 86 ಕೋಟಿ ರು. ನಷ್ಟವಾಗಿದೆ. ಹೀಗಾಗಿ ಬೆಂಗಳೂರಿನಿಂದ ವೋಲ್ವೋ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲು ಚಿಂತನೆಗಳು ನಡೆದಿವೆ ಎಂದು ಸುವರ್ಣ ನ್ಯೂಸ್ ಗೆ ಬಿಎಂಟಿಸಿ ಎಂಡಿ ಪೊನ್ನುರಾಜನ್ ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ವೋಲ್ವೋ ಬಸ್‌ ಕೆಸ್ಸಾರ್ಟಿಸಿಗೆ ವರ್ಗ?

800ಕ್ಕೂ ಹೆಚ್ಚು ವೋಲ್ವೊ ಬಸ್ ಗಳಿದ್ದು, ಇವುಗಳನ್ನು ನಗರದ‌‌ ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಚಾರ ‌ನಡೆಸಲಿವೆ. ಇನ್ನು ವೋಲ್ವೊ ಬಸ್ ಪರ್ಯಾಯವಾಗಿ ಎಲೆಕ್ಟ್ರಿಕ್ ಬಸ್ ಗಳು ಸೇವೆ ಆರಂಭಿಸಲಿವೆ ಎಂದು ಪೊನ್ನುರಾಜನ್ ಹೇಳಿದರು.

ಕೋಲಾರ, ಮೈಸೂರು, ದಾಣಗೆರೆ ಸೇರಿದಂತೆ ಬೆಂಗಳೂರಿಗೆ ಹತ್ತಿರ ಇರುವ ನಗರ ಪಟ್ಟಣಗಳಲ್ಲಿ ಈ ವೋಲ್ವೊ ಬಸ್ ಸಂಚರ ಆರಂಭಿಸುವ ಸಾದ್ಯತೆಗಳಿದ್ದು, ಇವುಗಳನ್ನು ಕೆಎಸ್ ಆರ್ ಟಿಗೆ ವರ್ಗಾಯಿಸುವ ಮಾತುಗಳು ಸಹ ಕೇಳಿಬರುತ್ತಿವೆ.
 

click me!