ಮದ್ಯ ಸೇವನೆ ಆರೋಗ್ಯಕ್ಕೆ ಹಾನಿ ಎಂದೇ ಮದುವೆಯಲ್ಲಿ ಎಣ್ಣೆ ಪಾರ್ಟಿ

Published : Jun 19, 2019, 02:17 PM ISTUpdated : Jun 19, 2019, 03:36 PM IST
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿ ಎಂದೇ ಮದುವೆಯಲ್ಲಿ ಎಣ್ಣೆ ಪಾರ್ಟಿ

ಸಾರಾಂಶ

ಕೋಟೆನಾಡಿನಲ್ಲೊಂದು‌ ವಿಚಿತ್ರ ಕೊಡುಗೆ| ಮದುವೆಗೆ ಬಂದವರಿಗೆ ಉಚಿತ ಎಣ್ಣೆ ವ್ಯವಸ್ಥೆ| ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಮದುವೆ|

ಚಿತ್ರದುರ್ಗ[ಜೂ.19]: ಕೋಟೆನಾಡಿನ ಮದುವೆ ಆಹ್ವಾನ ಪತ್ರಿಕೆಯೊಂದು ಭಾರೀ ಸೌಂಡ್ ಮಾಡುತ್ತಿದೆ.  ಮದುವೆಗೆ ಬರುವ ಅತಿಥಿಗಳಿಗೆ ಉಚಿತ ಎಣ್ಣೆ ವ್ಯವಸ್ಥೆ ಕಲ್ಪಿಸಿರುವುದೇ ಇದಕ್ಕೆ ಕಾರಣವಾಗಿದೆ. 

ಹೌದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ವೆಂಕಟೇಶ್-ದಿವ್ಯಾ ಮದುವೆಗೆ ತೆರಳುವವರಿಗೆ ಈ ಕೊಡುಗೆ ನೀಡಲಾಗುತ್ತದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಎಣ್ಣೆ ಬಾಟಲ್ ಚಿತ್ರದ ಸಮೇತ ಮುದ್ರಣ ಮಾಡಲಾಗಿದೆ. 

ಮದುವೆಗೆ ಆಗಮಿಸುವ ಅತಿಥಿಗಳಿಗೆ ರಾತ್ರಿ 8 ಗಂಟೆಯಿಂದ ಉಚಿತ ಎಣ್ಣೆ ವ್ಯವಸ್ಥೆ ಅರೇಂಜ್ ಮಾಡುವ ಮೂಲಕ ಅತಿಥಿಗಳನ್ನು ತೃಪ್ತಿ ಪಡಿಸುವುದು ಮದುಮಗನ ಚಿಂತನೆಯಾಗಿದೆ. ಬಂದವರಿಗೆ ಎಣ್ಣೆ ವ್ಯವಸ್ಥೆ ಮಾಡಲು ಆಹ್ವಾನ ಪತ್ರಿಕೆಯಲ್ಲಿ ಪ್ರತ್ಯೇಕ ವ್ಯಕ್ತಿಯ ಹೆಸರನ್ನೂ ಮುದ್ರಣ ಮಾಡಲಾಗಿದೆ. 

ಅತಿಥಿಗಳಿಗೆ ಫ್ರೀ ಎಣ್ಣೆ ವ್ಯವಸ್ಥೆ ಕಲ್ಪಿಸಿದ್ದರೂ, ಆಹ್ವಾನ ಪತ್ರಿಕೆಯ ಮೂಲೆಯೊಂದರಲ್ಲಿ 'ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ' ಎಂಬ ಸಾಲುಗಳನ್ನು ಪ್ರಿಂಟ್ ಮಾಡಲು ಮರೆತಿಲ್ಲ. 

PREV
click me!

Recommended Stories

ಬೆಂಗಳೂರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಅಗ್ನಿ ಅವಘಡ: ನಡುರಸ್ತೆಯಲ್ಲೇ ಭಸ್ಮವಾದ ಕಾರು
ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!