ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಉಡುಪಿ [ಜೂ.19] : ಉಡಪಿ ಜಿಲ್ಲೆಯ ಮಣಿಪಾಲ ಮಂಚಿಕೆರೆಯಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಗುಡ್ಡೆ ಪ್ರದೇಶದಲ್ಲಿ ಬಿರುಕು ಕಾಣಿಸಿದ್ದು, ಇದರಿಂದ ಮನೆ, ಬಾವಿಗೆ ಹಾನಿಯಾಗಿದೆ. 2014 ರಲ್ಲಿಯೂ ಇದೇ ರೀತಿಯಾದ ಬಿರುಕು ಕಾಣಿಸಿಕೊಂಡಿತ್ತು. ಇದೀಗ ಹಳೇ ಬಿರುಕುಗಳು ಮತ್ತಷ್ಟು ವಿಸ್ತಾರಗೊಂಡು ಆತಂಕ ಎದುರಾಗಿದೆ.
undefined
ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಕೆಂಪುಕಲ್ಲಿನ ತಳದ ಜೌಗುಮಣ್ಣು ಕುಸಿದು ಬಿರುಕು ಉಂಟಾಗಿರುವ ಸಾಧ್ಯತೆ ಇದೇ ಎಂದು ಶಂಕಿಸಲಾಗಿದೆ. ಅಲ್ಲದೇ ಇಲ್ಲಿನ ನಿವಾಸಿಗಳು ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ.