
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಡಿ.22); ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬಸ್ ಓಡಿಸೋಕೆ ಬಿಎಂಟಿಸಿ ಮತ್ತೆ ಸಜ್ಜಾಗಿದೆ. ನಿಲ್ದಾಣದಿಂದ ರೈಲ್ವೆ ಇಲಾಖೆ ಬಸ್ ಬಿಡೋದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಬಿಎಂಟಿಸಿ ಕೂಡ ಕಾರ್ಯಪ್ರವೃತಿಯಾಗಿದೆ. ರೈಲ್ವೆ ನಿಲ್ದಾಣದಲ್ಲಿ ಆಟೋ, ಟ್ಯಾಕ್ಸಿಗಳ ಹಾವಳಿ ತಪ್ಪಿಸಲು ಸಿಟಿ ರೈಲ್ವೆ ನಿಲ್ದಾಣದಿಂದ ಶೀಘ್ರದಲ್ಲೇ ಸಿಟಿ ಬಸ್ ಗಳು ಕಾರ್ಯಾಚರಣೆಗೆ ಬಿಎಂಟಿಸಿ ಹಾಗೂ ರೈಲ್ವೆ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ.
ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಆಟೋ,ಟ್ಯಾಕ್ಸಿ ಗಳ ಹಾವಳಿ ತಪ್ಪಿಸಲು ರೈಲ್ವೆ ಇಲಾಖೆ ಬಿಎಂಟಿಸಿ ಮತ್ತೊಂದು ಪ್ಲಾನ್ ರೂಪಿಸಿದೆ. ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬಿಎಂಟಿಸಿ ಬಸ್ ನಿಲ್ದಾಣವಿದ್ದರೂ ಕೂಡ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್ಗಳು ನೇರವಾಗಿ ಆಗಮಿಸಲು ಸಾಧ್ಯವಿಲ್ಲದ ಕಾರಣ ಪ್ರಯಾಣಿಕರು ಆಟೋ, ಟ್ಯಾಕ್ಸಿ ಮೊರೆ ಹೋಗಬೇಕಿತ್ತು. ಇದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡ್ತಿದ್ರು. ಇದನ್ನು ತಪ್ಪಿಸುವ ಸಲುವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದೊಳಗೆ ಬಿಎಂಟಿಸಿ ಬಸ್ ಸಂಚಾರಕ್ಕೆ ನೈರುತ್ಯ ರೈಲ್ವೆ ಅನುಮತಿ ನೀಡಿದೆ. ಹೀಗಾಗಿ ಸಿಟಿ ರೈಲ್ವೆ ನಿಲ್ದಾಣದಿಂದ ಬಸ್ ಸೇವೆಯನ್ನ ಬಿಎಂಟಿಸಿ ಆರಂಭಿಸಿಸಲು ಮುಂದಾಗಿದೆ. ಹೀಗಾಗಿ bmtc ಬಸ್ಗಳು ಇನ್ಮುಂದೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಪ್ರವೇಶಿಸಲಿವೆ. ಪ್ರಯಾಣಿಕರ ಅವಶ್ಯಕತೆ ಮತ್ತು ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದಿಂದ ಬಿಎಂಟಿಸಿ ಬಸ್ ಸೇವೆಯನ್ನು ಪ್ರಾರಂಭಿಸಲಾಗುತ್ತದೆ. ರೈಲು ನಿಲ್ದಾಣದ ಗೇಟ್ ನಂ 3ರಿಂದ ನಗರದ ವಿವಿಧ ಭಾಗಗಳಿಗೆ ಬಸ್ ಸಂಚಾರ ಮಾಡಲಿವೆ.
ಬಸ್ ಡ್ರೈವರ್, ಕಂಡಕ್ಟರ್‌ಗಳ ಬಳಿ ಯುಪಿಐನಲ್ಲಿ ಲಂಚ: 6 ಸಸ್ಪೆಂಡ್
ನೈಋತ್ಯ ರೈಲ್ವೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಲವು ದಿನಗಳ ಹಿಂದೆ ಬಸ್ ಸೇವೆ ಆರಂಭಿಸುವ ಕುರಿತು ಮಾತುಕತೆ ನಡೆಸಿದ್ದವು. ಬಿಎಂಟಿಸಿಯ ಅಧಿಕಾರಿಗಳ ತಂಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ಕೂಡ ಮಾಡಿತ್ತು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ 3ನೇ ಪ್ರವೇಶ ದ್ವಾರ ಫ್ಲಾಟ್ ಫಾರಂ ನಂ 1ಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ. ಬಸ್ ಇಲ್ಲಿಗೆ ಆಗಮಿಸಿದರೆ ಜನರಿಗೆ ಅನುಕೂಲವಾಗಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ರೈಲ್ವೆ ಟಿಕೆಟ್ ಕೌಂಟರ್ ತೆರೆಯಲಾಗಿದೆ.
35 ಸಾವಿರ ಬಿಎಂಟಿಸಿ ನೌಕರರಿಗೆ ತಲಾ 5 ಲಕ್ಷ ರೂ. ಆರೋಗ್ಯ ವಿಮೆ
ಇದುವರೆಗೂ ರೈಲ್ವೆ ನಿಲ್ದಾಣ ಬಳಿ ಸಂಚಾರ ದಟ್ಟಣೆ ಉಂಟಾಗುತ್ತದೆ, ಸ್ಥಳಾವಕಾಶದ ಕೊರತೆ ಇದೆ ಎಂಬ ಕಾರಣಕ್ಕೆ ರೈಲು ನಿಲ್ದಾಣದೊಳಗೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಜನರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಸುರಂಗ ಮಾರ್ಗದ ಮೂಲಕ ರೈಲು ನಿಲ್ದಾಣ ತಲುಪಬೇಕಿತ್ತು. ಬಿಎಂಟಿಸಿ ಬಸ್ ನಿಲ್ದಾಣದಿಂದ ವಯಸ್ಸಾದವರು, ಮಹಿಳೆಯರು ಲಗೇಜ್ ಹೊತ್ತು ಸುಮಾರು ದೂರ ನಡೆಯಬೇಕಿತ್ತು. ಬಸ್ ರೈಲ್ವೆ ನಿಲ್ದಾಣಕ್ಕೆ ಬರದ ಕಾರಣ ಆಟೋ ಚಾಲಕರು ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು.ಇದೀಗ ಬಿಎಂಟಿಸಿ ಬಸ್ಗಳು ಸಂಚಾರ ಶುರುಮಾಡುವುದರಿಂದ ಖಾಸಗಿ ವಾಹನಗಳ ಸುಲಿಗೆಗೆ ಕಡಿವಾಣ ಬೀಳೋ ಸಾಧ್ಯತೆ ಇದೆ.