
ಬೆಂಗಳೂರು(ಆ.14): ನಾಳೆ ನೀವು ಬಿಎಂಟಿಸಿ ಬಸ್‌ನಲ್ಲಿ ಸಂಚಾರ ಮಾಡ್ತೀರಾ?, ಹಾಗಾದರೆ ಬಿಎಂಟಿಸಿಯಿಂದ ನಿಮಗೆ ಬಂಪರ್ ಆಫರ್ ಸಿಗಲಿದೆ. ಹೌದು, ನಾಳೆ ಒಂದು ದಿನ ಬಿಎಂಟಿಸಿ ಬಸ್‌ನಲ್ಲಿ ನಗರದ ಯಾವ ಮೂಲೆಗೆ ಹೋದರೂ ಟೆಕೆಟ್ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. 75ನೇ ಸ್ವಾತಂತ್ರ್ಯೋತ್ಸವ ಹಾಗೂ ಬಿಎಂಟಿಸಿಗೆ 25 ವರ್ಷಾಚರಣೆಯ ಸಂಭ್ರಮಕ್ಕೆ ಆ.15 ರಂದು ಬಿಎಂಟಿಸಿ ಬಸ್ ಪ್ರಯಾಣ ಸಂಪೂರ್ಣವಾಗಿ ಉಚಿತವಾಗಿರಲಿದೆ.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ಗೆ 25 ನೇ ವರ್ಷಕ್ಕೆ ಕಾಲಿಟ್ಟ ಬೆನ್ನಲ್ಲೇ ಬಸ್ ಸಂಚಾರ ಫುಲ್ ಫ್ರೀಯಾಗಿದೆ. ನಾಳೆ(ಸೋಮವಾರ) ಬೆಳಗ್ಗೆಯಿಂದ ಇಡೀ ದಿನ ಬಿಎಂಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗಾರ್ಡನ್ ಸಿಟಿಯಲ್ಲಿ ಎಲ್ಲಿ ಬೇಕಾದರೂ ನಾಳೆ ಒಂದು ದಿನ ಉಚಿತವಾಗಿ ಸಂಚಾರ ಭಾಗ್ಯ ನಗರದ ಜನತೆಗೆ ಲಭ್ಯವಾಗಲಿದೆ. ಸರ್ಕಾರದ ಒಪ್ಪಿಗೆ ಕೊಟ್ಟ ಬೆನ್ನಲ್ಲೇ ಉಚಿತ ಪ್ರಯಾಣಕ್ಕೆ ಬಿಎಂಟಿಸಿ ಅವಕಾಶ ಮಾಡಿಕೊಟ್ಟಿದೆ. ನಾಳೆ ಸುಮಾರು 3.5 ಕೋಟಿ ಲಾಸ್ ಆದ್ರೂ ಫ್ರೀ ಸಂಚಾರಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಇಡೀ ದಿನ ವೋಲ್ವೋ ಸೇರಿ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಆ.15ರಂದು ಮತ್ತೆ 75ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ, ಯಲಹಂಕದಿಂದ ಆರಂಭ
ಬಿಎಂಟಿಸಿಯ ಒಂದು ದಿನದ ಆದಾಯ 3.5 ಕೋಟಿಯಷ್ಟು ಇದ್ದು, ಆ ಇಡೀ ಆದಾಯವನ್ನ ಸಾರ್ವಜನಿಕರಿಗೆ ಉಚಿತ ಸೇವೆಗೆ ಮೀಸಲಿಡಲಿಟ್ಟಿದ್ದು ಖುಷಿಯ ವಿಚಾರ. ಈ ವಿಚಾರದ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಇದು ಪ್ರಯಾಣಿಕರಿಗಾಗಿ ನಾವು ಸರ್ಕಾರ ಹಾಗೂ ನಿಗಮ ಜೊತೆಯಾಗಿ ಮಾಡ್ತಿರೋ ಸಣ್ಣ ಗಿಫ್ಟ್ ಅಷ್ಟೆ.ಈ ವಿಚಾರಕ್ಕೆ ಸರ್ಕಾರ ಸಹ ಒಪ್ಪಿದ್ದು, ಪ್ರತಿ ಪ್ರಯಾಣಿಕರು ಇದರ ಲಾಭಪಡೆಯಬೇಕಾಗಿ ವಿನಂತಿ ಮಾಡಿದ್ದಾರೆ.
ಇಷ್ಟೇ ಅಲ್ಲ ಪ್ರಯಾಣಿಕರ ಜೊತೆಗೆ ಸಿಬ್ಬಂದಿಗಳಿಗೂ ಗುಡ್ ನ್ಯೂಸ್ ಇದೆ. ಕಳೆದ ಒಂದು ವರ್ಷದಿಂದ ಯಾವುದೇ ಅಪಘಾತ ಮಾಡದ ಮತ್ತು ಕೆಲಸದಲ್ಲಿ ಶಿಸ್ತು ಕಾಪಾಡಿಕೊಂಡಿರುವ ಸಿಬ್ಬಂದಿಗೆ ಚಿನ್ನದ ನಾಣ್ಯ ಮತ್ತು ಬೆಳ್ಳಿ ನಾಣ್ಯ ವಿತರಣೆಗೆ ಸಿದ್ದತೆ ಮಾಡಲಾಗಿದೆ. ಈ ಕಾರ್ಯಕ್ರಮ ಆಗಸ್ಟ್ 16 ರಂದು ನಡೆಯಲಿದ್ದು 168 ಸಿಬ್ಬಂದಿಗೆ ಚಿನ್ನ, 2968 ಸಿಬ್ಬಂದಿಗೆ ಬೆಳ್ಳಿ ನಾಣ್ಯ ವಿತರಣೆ ಮಾಡಲಾಗುವುದು.
ಇನ್ನು 75 ನೇ ಅಮೃತ ಮಹೋತ್ಸವ ಹಿನ್ನಲೆ ಆಗಸ್ಟ್ 14 ರಂದು 75 ಎಲೆಕ್ಟ್ರಿಕ್ ಬಸ್ ಲೋಕಾರ್ಪಣೆಯಾಗಲಿದೆ. ಈಗಾಗಲೇ 90 ಎಲೆಕ್ಟ್ರಿಕ್ ಬಸ್ಗಳು ಕಾರ್ಯಾಚರಣೆ ನಾಡೆಸ್ತಿವೆ. ಅದರ ಜೊತೆಗೆ ಹೊಸ 75 ಎಲೆಕ್ಟ್ರಿಕ್ ಬಸ್ ಸೇರ್ಪಡೆಯಾಗಲಿವೆ. ಅಮೃತ ಮಹೋತ್ಸವದ ಸಂಭ್ರಮದ ಜೊತೆಗೆ ಬಿಎಂಟಿಸಿ ರಜತ ಮಹೋತ್ಸವ ಸಂಭ್ರಮವು ಜೋರಾಗಿದ್ದು ಸಾರಿಗೆ ನಿಗಮದಲ್ಲಿ ಸಂಭ್ರಮ ಕಳೆಗಟ್ಟಿದೆ.