ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾದ ಸಿಲಿಕಾನ್‌ ಸಿಟಿ: ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

By Girish GoudarFirst Published Aug 14, 2022, 12:55 PM IST
Highlights

ಬೆಂಗಳೂರಲ್ಲಿ ಸಾಲು ಸಾಲು ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌

ಬೆಂಗಳೂರು(ಆ.14):  75 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಿಲಿಕಾನ್‌ ಸಿಟಿ ಸಕಲ ಸಜ್ಜುಗೊಂಡಿದೆ.  ಸಾತಂತ್ರ್ಯೋತ್ಸವ ಸಂಭ್ರಮದಂದು ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸರೂ ಕೂಡ ಸಜ್ಜಾಗಿದ್ದಾರೆ. ನಗರದಲ್ಲಿ ಸಾಲು ಸಾಲು ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. 

ಈ ಬಾರಿ ಭದ್ರತೆಗೆ ಹೆಚ್ಚುವರಿ ಪೊಲೀಸರು ಕರೆಸಿಕೊಳ್ಳಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ.  ಎರಡು ವರ್ಷಗಳ ಬಳಿಕ ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಹೀಗಾಗಿ ಮೈದಾನದ ಸುತ್ತ ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 10, ಎಸಿಪಿಗಳು 19, ಇನ್ಸ್ಪೆಕ್ಟರ್ 50, ಪಿಎಸ್ಐ 100, ಮಹಿಳಾ ಪಿಎಸ್‌ಐ 15, ಎಎಸ್ಐ 80,ಕಾನ್ಸ್ಟೇಬಲ್ 650, ಗಸ್ತಿನಲ್ಲಿ 150 ಪೊಲೀಸ್, ಕೆಎಸ್ಆರ್ಪಿ 10 ತುಕಡಿ, ಕ್ಯುಆರ್ಟಿ 1, ಡಿ ಸ್ವ್ಯಾಟ್ 1, ಆರ್ಎಎಫ್ 1 ಸೇರಿ 1 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದೆ. 

ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

ವಿವಾದಿತ ಕೇಂದ್ರವಾದ ಈದ್ಗಾ ಮೈದಾನ 

ಚಾರಮಾರಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಗಣೇಶೋತ್ಸವದ ಕಿಚ್ಚು ಹೊತ್ತಕೊಂಡಿದೆ. ಹೀಗಾಗಿ ಈದ್ಗಾ ಮೈದಾದನ ಸುತ್ತ ಭದ್ರತೆಗಾಗಿ ಹೆಚ್ಚುವರಿ ಆಯುಕ್ತರು 1, ಡಿಸಿಪಿ ಗಳು 3, ಎಸಿಪಿಗಳು 6, ಇನ್ಸ್ಪೆಕ್ಟರ್ 15, ಪಿಎಸ್ ಐ 45, ಮಹಿಳಾ ಪಿಎಸ್ಐ 5, ಎಎಸ್ಐ 30, ಕಾನ್ಸ್ಟೇಬಲ್ 300, ಗಸ್ತಿನಲ್ಲಿರುವ ಪೊಲೀಸರು 20, ಕೆಎಸ್ಆರ್ಪಿ 5 ತುಕಡಿ, ಸಿಎಆರ್  2 ತುಕಡಿ, ಆರ್ಎಎಫ್ 1 ತಂಡಗಳನ್ನ ನಿಯೋಜನೆ ಮಾಡಲಾಗಿದೆ. 

ಕಾಂಗ್ರೆಸ್ ಕಾಲ್ನಡಿಗೆ

ಇನ್ನು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾಲ್ನಡಿಗೆ ಜಾಥಾವನ್ನ ಹಮ್ಮಿಕೊಂಡಿದೆ. ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಡಿಸಿಪಿ ಗಳು 4,  ಎಸಿಪಿಗಳು 15, ಇನ್ಸ್ಪೆಕ್ಟರ್ಸ್ 20, ಪಿಎಸ್ಐ 24, ಮಹಿಳಾ ಪಿಎಸ್ಐ 03, ಎಎಸ್ಐ 15, ಕಾನ್ಸ್ಟೇಬಲ್ 500, ಕೆಎಸ್ಆರ್ಪಿ 05 ತುಕಡಿ, ಸಿಎಆರ್ 6  ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. 

ಭದ್ರತೆಗೆ ಹೆಚ್ಚಿನ ಪೊಲೀಸರು ಅಗತ್ಯವಿರುವ ಹಿನ್ನೆಲೆಯಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ಪೊಲೀಸ್ ಸಿಬ್ಬಂದಿಗೆ ಬುಲಾವ್ ನೀಡಲಾಗಿದೆ.  ಎಸಿಬಿ, ಸಿಐಡಿ, ಲೋಕಾಯುಕ್ತ, ಸಿಸಿಬಿ ಸೇರಿ ಎಲ್ಲಾ ಸಿಬ್ಬಂದಿಗೆ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಐಜಿ ರೇಂಜ್‌ನ ಪೊಲೀಸ್ ಸಿಬ್ಬಂದಿಗಳಿಗೆ ಬುಲಾವ್ ನೀಡಲಾಗಿದೆ. ಕೇಂದ್ರ ವಲಯದ ಐದು ಜಿಲ್ಲೆಗಳ ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ಈಗಾಗಲೇ ಸಂಬಂಧಪಟ್ಟ ವಲಯಕ್ಕೆ ಮೆಮೋ ನೀಡಲಾಗಿದ್ದು ಭದ್ರತೆಗೆ ಸಿಬ್ಬಂದಿ ನೀಡುವಂತೆ ಸೂಚಿಸಲಾಗಿದೆ ಅಂತ ತಿಳಿದು ಬಂದಿದೆ. 
 

click me!