ಬೆಂಗಳೂರಿನ ಟಾಪ್-5 ಜನದಟ್ಟಣೆ ಮೆಟ್ರೋ ನಿಲ್ದಾಣಗಳು ಯಾವುವು?

By Sathish Kumar KH  |  First Published Jan 7, 2025, 5:11 PM IST

ಬೆಂಗಳೂರಿನಲ್ಲಿ ಅತಿ ಹೆಚ್ಚು ಜನದಟ್ಟಣೆಯ ಟಾಪ್-5 ಮೆಟ್ರೋ ನಿಲ್ದಾಣಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮೆಜೆಸ್ಟಿಕ್ ಜೊತೆಗೆ ಇನ್ನೂ ನಾಲ್ಕು ಅನಿರೀಕ್ಷಿತ ನಿಲ್ದಾಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.


ಬೆಂಗಳೂರು (ಜ.07): ಕರ್ನಾಟಕದಲ್ಲಿ ಏಕೈಕ ಮೆಟ್ರೋ ನಗರವಾಗಿರುವ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಜನದಟ್ಟಣೆಯ ಟಾಪ್-5 ಮೆಟ್ರೋ ನಿಲ್ದಾಣ ಯಾವುವು ಎಂಬ ಚರ್ಚೆ ಶುರುವಾಗಿದೆ. ಅದರಲ್ಲಿ ಮೆಜೆಸ್ಟಿಕ್ ಒಂದನ್ನು ಮಾತ್ರ ಎಲ್ಲರೂ ಗುರುತಿಸಬಹುದು. ಆದರೆ, ಉಳಿದ ನಾಲ್ಕು ಮೆಟ್ರೋ ನಿಲ್ದಾಣಗಳು ಮಾತ್ರ ನೀವು ಊಹಿಸಲೂ ಸಾಧ್ಯವಿಲ್ಲ ಎಂದೇ ಹೇಳಬಹುದು.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಮೆಟ್ರೋ ಸಂಚಾರ ಆರಂಭವಾಗಿ 13 ವರ್ಷಗಳು ಪೂರ್ಣಗೊಂಡಿವೆ. ಇದೀಗ ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಯಾವುದೆಂದು ಕೇಳಿದರೆ ಯಾರು ಬೇಕಾದರೂ ಮೆಟ್ರೋ ಸಂಚಾರ ಎಂದು ಸುಲಭವಾಗಿ ಹೇಳುತ್ತಾರೆ. ಕಾರಣ, ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ನಮ್ಮ ಮೆಟ್ರೋ ಟ್ರಾಫಿಕ್‌ ಮುಕ್ತವಾಗಿ ಹಾಗೂ ಸುಖಕರ ಪ್ರಯಾಣ ಸೇವೆ ಒದಗಿಸುವಲ್ಲಿ ಪ್ರಮುಖ ಸ್ಥಾನದಲ್ಲಿ ನಿಂತಿದೆ. ಆದರೆ, ಈ ಮೆಟ್ರೋ ನಿಲ್ದಾಣಗಳಲ್ಲಿ ಕೆಲವೊಮ್ಮೆ ಕಾಲಿಡಲೂ ಸಾಧ್ಯವಾಗುವುದಿಲ್ಲ. ಅಷ್ಟೊಂದು ಬ್ಯೂಸಿ ಆಗಿಬಿಡುತ್ತವೆ. ಅದರಲ್ಲಿಯೂ ಸರ್ಕಾರಿ ಕೆಲಸದ ದಿನಗಳಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣವಂತೂ ಜಾತ್ರೆಯನ್ನೂ ಮೀರಿಸುವಂತಿರುತ್ತದೆ. ಇದೇ ರೀತಿ ಕೆಲವೊಂದು ಮೆಟ್ರೋ ನಿಲ್ದಾಣಗಳಿಂದ ಅತಿಹೆಚ್ಚಿನ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಹಾಗಾದರೆ, ಬೆಂಗಳೂರಿನ ಯಾವ ಮೆಟ್ರೋ ನಿಲ್ದಾಣಗಳು ಟಾಪ್-5 ಬ್ಯೂಸಿಯೆಸ್ಟ್ ನಿಲ್ದಾಣಗಳು ಎಂಬ ಚರ್ಚೆ ಶುರುವಾಗಿದೆ.

Tap to resize

Latest Videos

ನಮ್ಮ ಚಿಂತನೆಗೆ ಬರುವ ಜನದಟ್ಟಣೆ ಮೆಟ್ರೋ ನಿಲ್ದಾಣಗಳು:  ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಅತಿಹೆಚ್ಚಿನ ಜನರು ಸೇರುವಂತಹ ತಾಣಗಳಾದ ಹಾಗೂ ಮಾರುಕಟ್ಟೆ ಪ್ರದೇಶಳನ್ನೂ ಹೊಂದಿರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ನಿಲ್ದಾಣಗಳನ್ನು ನಾವು ಜನದಟ್ಟಣೆ ಮೆಟ್ರೋ ನಿಲ್ದಾಣ ಎಂದು ಹೇಳಬಹುದು. ಆದರೆ, ನಮ್ಮ ಊಹೆ ನಿಜಕ್ಕೂ ತಪ್ಪಾಗುತ್ತದೆ. ಜಯನಗರ, ಮಲ್ಲೇಶ್ವರಂ (ಸಂಪಿಗೆ ರಸ್ತೆ), ಕೆಂಗೇರಿ ಬಸ್ ಟರ್ಮಿನಲ್, ಬಸವನಗುಡಿ, ಯಶವಂತಪುರ, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ, ವಿಜಯನಗರ, ಕಬ್ಬನ್‌ಪಾರ್ಕ್, ವಿಧಾನ ಸೌಧ, ವೈಟ್‌ಫೀಲ್ಡ್‌, ಕೆ.ಆರ್.ಪುರ ಸೇರಿದಂತೆ ಕೆಲವು ಸ್ಥಳಗಳನ್ನು ಹೇಳುತ್ತೇವೆ. ಆದರೆ, ಇವುಗಳನ್ನು ಹೊರತಾಗಿ ಟಾಪ್-5 ಸ್ಥಾನಗಳನ್ನು ಪಡೆದ ಬ್ಯೂಸಿಯಾಗಿರುವ ಮೆಟ್ರೋ ನಿಲ್ದಾಣಗಳು ಇಲ್ಲಿವೆ ನೋಡಿ..

ಇದನ್ನೂ ಓದಿ: Bengaluru: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಕೋಲ್ಕತ್ತದಿಂದ ಹೊರಟ ಯೆಲ್ಲೋ ಲೈನ್‌ನ ಮೊದಲ ಡ್ರೈವರ್‌ಲೆಸ್‌ ಟ್ರೇನ್‌

ಶೈಲಾ ಎನ್ನುವ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡಿ ಟಾಪ್-5 ಬ್ಯುಸಿ ಆಗಿರುವ ಮೆಟ್ರೋ ನಿಲ್ದಾಣಗಳನ್ನು ಗುರುತಿಸಿದ್ದಾರೆ. ಆದರೆ, ಇದು ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ಸಂಸ್ಥೆ ನೀಡಿರುವ ಅಧಿಕೃತ ಮಾಹಿತಿಯಲ್ಲ. ಕೆಲವೊಂದು ಸುದ್ದಿ ಮಾಧ್ಯಮಗಳು ಹಾಗೂ ಆಗಿಂದಾಗ್ಗೆ ಮೆಟ್ರೋ ಸಂಸ್ಥೆಯು ಹಂಚಿಕೊಳ್ಳುವ ಮಾಹಿತಿಯನ್ನು ಆಧರಿಸಿ ಟಾಪ್-5 ಸ್ಥಾನಗಳ ಪಟ್ಟಿಯುನ್ನು ಬಿಡುಗಡೆ ಮಾಡಿದ್ದಾರೆ.

ಟಾಪ್-5 ಜನದಟ್ಟಣೆ ಮೆಟ್ರೋ ನಿಲ್ದಾಣಗಳು:
1) ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ) ಮೆಟ್ರೋ ನಿಲ್ದಾಣ (Nadaprabhu Kempegowda Station-Majestic)
2) ಬೆನ್ನಿಗಾನಹಳ್ಳಿ (ಟಿನ್ ಫ್ಯಾಕ್ಟರಿ) ಮೆಟ್ರೋ ನಿಲ್ದಾಣ (Bennigana Halli-Tin Factory)
3) ಇಂದಿರಾನಗರ ಮೆಟ್ರೋ ನಿಲ್ದಾಣ (Indiranagar)
4) ಮಹಾತ್ಮ ಗಾಂಧಿ ರಸ್ತೆ (ಎಂ.ಜಿ.ರೋಡ್) ಮೆಟ್ರೋ ನಿಲ್ದಾಣ (MG Road)
5) ನಾಗಸಂದ್ರ ಮೆಟ್ರೋ ನಿಲ್ದಾಣ (Nagasandra)

ಇದನ್ನೂ ಓದಿ: ಮೆಟ್ರೋ ಯೆಲ್ಲೋ ಲೈನ್‌ ವಿಳಂಬದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌, ಅಪ್‌ಡೇಟ್‌ ನೀಡಿದ BMRCL!

click me!